AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: RCB ಪರ ಆಡುವ ಸುಳಿವು ನೀಡಿದ್ರಾ ಡೇವಿಡ್ ವಾರ್ನರ್?

IPL 2022 David Warner: ಏಕೆಂದರೆ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದ ವಾರ್ನರ್ 2016 ರಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು.

TV9 Web
| Edited By: |

Updated on: Dec 08, 2021 | 9:06 PM

Share
ಮುಂದಿನ ಸೀಸನ್​ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಒಂದೆಡೆಯಾದರೆ, ಎಬಿ ಡಿವಿಲಿಯರ್ಸ್ ಸ್ಥಾನದಲ್ಲಿ ಆಯ್ಕೆಯಾಗುವ ಆಟಗಾರ ಯಾರೆಂಬ ಕುತೂಹಲ ಇನ್ನೊಂದೆಡೆ. ಆರ್​ಸಿಬಿ ಫ್ರಾಂಚೈಸಿ ಈ ಎರಡೂ ಸ್ಥಾನಗಳನ್ನು ತುಂಬುವ ಆಟಗಾರನ ಹುಡುಕಾಟದಲ್ಲಿರುವುದಂತು ಸತ್ಯ.

1 / 6
ಆದರೆ ಅಂತಹ ಸಮರ್ಥ ಆಟಗಾರ ಯಾರಿದ್ದಾರೆ ಎಂದು ಗಮನಿಸಿದರೆ, ಮೆಗಾ ಹರಾಜು ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಹೆಸರು ಕಾಣ ಸಿಗುತ್ತದೆ. ಆದರೆ ಹರಾಜಿನಲ್ಲಿರುವ ಕಾರಣ ವಾರ್ನರ್ ಅವರನ್ನು ಯಾರು ಬೇಕಾದರೂ ಖರೀದಿಸಬಹುದು. ಇದಾಗ್ಯೂ ವಾರ್ನರ್ ಯಾವ ತಂಡದ ಪರ ಆಡಲು ಬಯಸುತ್ತಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

2 / 6
ಏಕೆಂದರೆ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದ ವಾರ್ನರ್ 2016 ರಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಇದಾಗ್ಯೂ ಕಳೆದ ಸೀಸನ್​ನಲ್ಲಿನ ಕಳಪೆ ಫಾರ್ಮ್​ ಕಾರಣ ವಾರ್ನರ್ ಅವರನ್ನು ಕೈಬಿಡಲಾಗಿತ್ತು. ಇದೀಗ ಡೇವಿಡ್ ವಾರ್ನರ್ ಮೆಗಾ ಹರಾಜಿನ ಹಾಟ್ ಫೇವರೇಟ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

3 / 6
ಇನ್ನು ಮುಂದಿನ ಸೀಸನ್​​ನಲ್ಲಿ ಹೊಸ ಎರಡು ತಂಡಗಳು ಸೇರ್ಪಡೆಯಾಗಿದ್ದು, ಹೀಗಾಗಿ ಮೆಗಾ ಹರಾಜಿಗೂ ಮುನ್ನವೇ ವಾರ್ನರ್ ಅವರನ್ನು ಆಯ್ಕೆ ಮಾಡುವ ಅವಕಾಶ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಿದೆ. ಇದಾಗ್ಯೂ ಇದುವರೆಗೆ ವಾರ್ನರ್ ಹೊಸ ತಂಡಗಳ ಪರ ಒಪ್ಪಂದ ಮಾಡಿಕೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

4 / 6
ಹೀಗಾಗಿಯೇ ಎಸ್​ಆರ್​ಹೆಚ್, ಸಿಎಸ್​ಕೆ ಸೇರಿದಂತೆ ಅನೇಕ ತಂಡಗಳ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಯಾವ ತಂಡದ ಪರ ಆಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳ ಎಡೆಯಲ್ಲಿ ಆರ್​ಸಿಬಿ ಅಭಿಮಾನಿ ಕೂಡ ಕಂಡು ಬಂದಿದ್ದು, ನೀವು ಆರ್​ಸಿಬಿ ಪರ ಆಡಬೇಕೆಂದು ವಾರ್ನರ್ ಅವರಲ್ಲಿ ಮನವಿ ಮಾಡಿದ್ದಾರೆ.

5 / 6
ಇದಕ್ಕೆ ವಾರ್ನರ್ ಹಾರ್ಟ್ ಎಮೋಜಿ ಮೂಲಕ ಪ್ರತಿಕ್ರಿಯಿಸಿರುವುದು ವಿಶೇಷ. ಅಂದರೆ ಉಳಿದ ಯಾವುದೇ ತಂಡಗಳ ಅಭಿಮಾನಿಗಳ ಕೋರಿಕೆಗೆ ಉತ್ತರಿಸದ ವಾರ್ನರ್ ಆರ್​ಸಿಬಿ ಅಭಿಮಾನಿಗೆ ಹಾರ್ಟ್ ಎಮೋಜಿಯ ಪ್ರತ್ಯುತ್ತರ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಇದನ್ನು ಗಮನಿಸಿರುವ ಆರ್​ಸಿಬಿ ಅಭಿಮಾನಿಗಳು ಡೇವಿಡ್ ವಾರ್ನರ್ ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

6 / 6
Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?

‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ

ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ

ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ

ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್

ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​

ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ

ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು

ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ

Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?