AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!

Delhi Capitals: ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಪರ 145 ಪಂದ್ಯಗಳನ್ನು ಆಡಿರುವ ಶೇನ್ ವಾಟ್ಸನ್ ಒಟ್ಟು 3874 ರನ್​ ಕಲೆಹಾಕಿದ್ದಾರೆ.

TV9 Web
| Edited By: |

Updated on: Feb 23, 2022 | 4:54 PM

Share
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಆರಂಭಕ್ಕೆ ತಿಂಗಳು ಮಾತ್ರ ಉಳಿದಿರುವಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಸಿಬ್ಬಂದಿ ವರ್ಗಗಳ ಬದಲಾವಣೆಗೆ ಮುಂದಾಗಿದೆ. ಅದರಂತೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಬ್ಬರು ಮಾಜಿ ಆಟಗಾರರನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.

1 / 6
ತಂಡದ ಕೋಚ್ ಆಗಿ ಈ ಬಾರಿ ಕೂಡ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮುಂದುವರೆಯಲಿದ್ದು, ಇದರ ಹೊರತಾಗಿ ಸಹಾಯಕ ಕೋಚ್​ಗಳನ್ನು ಡೆಲ್ಲಿ ಕ್ಯಾಪಿಲಟ್ಸ್ ಬದಲಿಸಿದೆ. ಅದರಂತೆ ನೂತನ ಸಹಾಯಕ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಆಲ್​ರೌಂಡರ್ ಶೇನ್ ವಾಟ್ಸನ್ ಡೆಲ್ಲಿ ಬಳಗವನ್ನು ಸೇರಿಕೊಂಡಿದ್ದಾರೆ.

2 / 6
ಇನ್ನು ಕಳೆದ ಕೆಲ ಸೀಸನ್​ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿದ್ದ ಟೀಮ್ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಬದಲಿಗೆ ಅಜಿತ್ ಅಗರ್ಕರ್ ಅವರನ್ನು ನೇಮಿಸಲಾಗಿದೆ. ಇನ್ನು ಬೌಲಿಂಗ್ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಬೌಲರ್ ಜೇಮ್ಸ್ ಹೋಪ್ಸ್ ಇದ್ದಾರೆ. ಹಾಗೆಯೇ ಭಾರತದ ಮಾಜಿ ಕ್ರಿಕೆಟಿಗರಾದ ಪ್ರವೀಣ್ ಆಮ್ರೆ (ಸಹಾಯಕ ಕೋಚ್) ಹಾಗೂ ಸಬಾ ಕರೀಮ್ (ಸಲಹೆಗಾರ) ಅವರು ಕೂಡ ಡೆಲ್ಲಿ ಬಳಗದಲ್ಲಿದ್ದಾರೆ.

3 / 6
CSK ಪರ IPL 2020 ರಲ್ಲಿ ಆಡಿದ್ದ 40 ವರ್ಷದ ವಾಟ್ಸನ್ ಆ ಬಳಿಕ ಲೀಗ್‌ನಿಂದ ನಿವೃತ್ತರಾದರು. ಚಾಂಪಿಯನ್ ಆಲ್​ರೌಂಡರ್​ ಆಗಿ ಗುರುತಿಸಿಕೊಂಡಿದ್ದ ವಾಟ್ಸನ್​ CSK ಫ್ರಾಂಚೈಸಿ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಇದಾಗ್ಯೂ ರಿಕಿ ಪಾಂಟಿಂಗ್ ಅವರ ಒತ್ತಾಯದ ಮೇರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾರ್ಯ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ.

4 / 6
ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಪರ 145 ಪಂದ್ಯಗಳನ್ನು ಆಡಿರುವ ಶೇನ್ ವಾಟ್ಸನ್ ಒಟ್ಟು 3874 ರನ್​ ಕಲೆಹಾಕಿದ್ದಾರೆ. ಈ ವೇಳೆ ಅವರ ಬ್ಯಾಟ್​ನಿಂದ 4 ಶತಕಗಳು ಹಾಗೂ 21 ಅರ್ಧಶತಕಗಳು ಮೂಡಿಬಂದಿವೆ.

5 / 6
ಹಾಗೆಯೇ ಬೌಲಿಂಗ್​ನಲ್ಲಿ 92 ವಿಕೆಟ್ ಪಡೆದು ಮಿಂಚಿದ್ದಾರೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಕವಾಗಿರು ವಾಟ್ಸನ್ ಐಪಿಎಲ್​ನಲ್ಲಿ 2ನೇ ಇನಿಂಗ್ಸ್ ಆರಂಭಿಸಲಿದ್ದಾರೆ.

6 / 6
Web contact
Web contact

TV9 Kannada

Read More
Follow Us
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ

ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ

ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?

ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು

ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?

‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ

ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!

‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು

ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ