IPL 2023: ಕೆಚ್ಚೆದೆಯ ಕನ್ನಡಿಗ: ನೋವಿನ ನಡುವೆಯೂ ಬ್ಯಾಟ್ ಬೀಸಿದ ಕೆಎಲ್ ರಾಹುಲ್
IPL 2023 Kannada: ಮಾರ್ಕಸ್ ಸ್ಟೋಯಿನಿಸ್ ಎಸೆದ ಇನಿಂಗ್ಸ್ನ 2ನೇ ಓವರ್ನಲ್ಲಿ ಫಾಫ್ ಡುಪ್ಲೆಸಿಸ್ ಆಫ್ ಸೈಡ್ನತ್ತ ಬಾರಿಸಿದ್ದರು. ಈ ವೇಳೆ ಬೌಂಡರಿ ತಡೆಯಲು ಓಡಿ ಹೋದ ಕೆಎಲ್ ರಾಹುಲ್ ಕಾಲು ನೋವಿನಿಂದ ಹಠಾತ್ ಕುಸಿತಕ್ಕೊಳಗಾದರು.
Updated on: May 01, 2023 | 11:51 PM

IPL 2023: ಐಪಿಎಲ್ನ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆರ್ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರಾಹುಲ್ ಗಾಯಕ್ಕೆ ತುತ್ತಾದರು.

ಮಾರ್ಕಸ್ ಸ್ಟೋಯಿನಿಸ್ ಎಸೆದ ಇನಿಂಗ್ಸ್ನ 2ನೇ ಓವರ್ನಲ್ಲಿ ಫಾಫ್ ಡುಪ್ಲೆಸಿಸ್ ಆಫ್ ಸೈಡ್ನತ್ತ ಬಾರಿಸಿದ್ದರು. ಈ ವೇಳೆ ಬೌಂಡರಿ ತಡೆಯಲು ಓಡಿ ಹೋದ ಕೆಎಲ್ ರಾಹುಲ್ ಕಾಲು ನೋವಿನಿಂದ ಹಠಾತ್ ಕುಸಿತಕ್ಕೊಳಗಾದರು.

ಅಲ್ಲದೆ ಆ ಬಳಿಕ ಎದ್ದು ನಿಲ್ಲಲು ಹಿಂದೇಟು ಹಾಕಿದ ಪರಿಣಾಮ ಫಿಸಿಯೋ ಮೈದಾನಕ್ಕೆ ಆಗಮಿಸಿದರು. ಅಲ್ಲದೆ ನಂತರ ಕೆಎಲ್ ರಾಹುಲ್ ಅವರನ್ನು ಮೈದಾನದಿಂದ ಕರೆದುಕೊಂಡು ಹೋದರು. ಈ ವೇಳೆ ನಡೆಯಲು ಕಷ್ಟಪಡುತ್ತಿರುವುದು ಕಂಡು ಬಂತು.

ನೋವಿನಿಂದ ಕಣ್ಣೀರು ಹಾಕುತ್ತಾ ಮೈದಾನ ತೊರೆದ ಕೆಎಲ್ ರಾಹುಲ್ ಆ ಬಳಿಕ ಮೈದಾನಕ್ಕೆ ಇಳಿದಿರಲಿಲ್ಲ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೃನಾಲ್ ಪಾಂಡ್ಯ ಮುನ್ನಡೆಸಿದರು.

ಅಲ್ಲದೆ ನೋವಿನ ನಡುವೆಯೂ ಬ್ಯಾಟ್ ಬೀಸುವ ಪ್ರಯತ್ನ ನಡೆಸಿದರು. ಆದರೆ ಓಡುವ ಪರಿಸ್ಥಿತಿಯಲ್ಲಿರದ ಕಾರಣ ಕೊನೆಯ ಓವರ್ನಲ್ಲಿ ಕೆಎಲ್ ರಾಹುಲ್ ನಾನ್ ಸ್ಟ್ರೈಕರ್ ಭಾಗದಲ್ಲೇ ಉಳಿದರು. ಪರಿಣಾಮ ಲಕ್ನೂ ಸೂಪರ್ ಜೈಂಟ್ಸ್ ತಂಡವು ಈ ಪಂದ್ಯದಲ್ಲಿ 18 ರನ್ಗಳಿಂದ ಸೋಲಬೇಕಾಯಿತು.

ಇದಾಗ್ಯೂ ಕೊನೆಯ 9 ಎಸೆತಗಳಿರುವಾಗ ನೋವನ್ನು ಸಹಿಸಿಕೊಂಡು ತಂಡವನ್ನು ಗೆಲ್ಲಿಸಲು ಬ್ಯಾಟಿಂಗ್ಗೆ ಇಳಿದ ಕೆಎಲ್ ರಾಹುಲ್ ಅವರ ನಡೆಗೆ ಇದೀಗ ಅಭಿಮಾನಿಗಳಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

TV9 Kannada
Read More




