IPL 2023 Points Table: ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಿದ RCB
IPL 2023 Points Table: ಸೋಮವಾರದವರೆಗೆ (ಏ.29) ಒಟ್ಟು 43 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಬಳಿಕ ಅಪ್ಡೇಟ್ ಆಗಿರುವ ಪಾಯಿಂಟ್ಸ್ ಟೇಬಲ್ ಅನ್ನು ಇಲ್ಲಿ ನೀಡಲಾಗಿದೆ.
Updated on:May 02, 2023 | 12:31 AM

IPL 2023 Points Table: ಐಪಿಎಲ್ ಸೀಸನ್ 16 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಎಲ್ಲಾ ತಂಡಗಳ 13 ಪಂದ್ಯಗಳು ಮುಗಿದಿದೆ. ಇದಾಗ್ಯೂ ಪ್ಲೇಆಫ್ ಪ್ರವೇಶಿಸಿರುವುದು ಗುಜರಾತ್ ಟೈಟಾನ್ಸ್ ತಂಡ ಮಾತ್ರ.

ಅತ್ತ ಸಿಎಸ್ಕೆ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲೂ ಮಹತ್ವದ ಬದಲಾವಣೆಯಾಗಿದೆ.

ಅದರಂತೆ 65 ಪಂದ್ಯಗಳ ಮುಕ್ತಾಯದ ಬಳಿಕ ಐಪಿಎಲ್ ಪಾಯಿಂಟ್ಸ್ ಟೇಬಲ್ನ ವಿವರ ಈ ಕೆಳಗಿನಂತಿದೆ...

1- ಗುಜರಾತ್ ಟೈಟಾನ್ಸ್ (18 ಅಂಕಗಳು): ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 13 ಪಂದ್ಯಗಳಲ್ಲಿ 4 ಸೋಲು ಹಾಗೂ 9 ಗೆಲುವು ದಾಖಲಿಸಿದೆ. ಈ ಮೂಲಕ +0.835 ನೆಟ್ ರನ್ ರೇಟ್ನೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಅಲ್ಲದೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಂಡಿದೆ.

6- ರಾಜಸ್ಥಾನ್ ರಾಯಲ್ಸ್ (12 ಅಂಕಗಳು): 13 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡವು 6 ಗೆಲುವು ಹಾಗೂ 7 ಸೋಲಿನೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನ ಅಲಂಕರಿಸಿದೆ. ಆರ್ಆರ್ ತಂಡದ ಪ್ರಸ್ತುತ ನೆಟ್ ರನ್ ರೇಟ್ ನೆಟ್ +0.140.

3- ಲಕ್ನೋ ಸೂಪರ್ ಜೈಂಟ್ಸ್ (15 ಅಂಕಗಳು): 13 ಪಂದ್ಯಗಳಲ್ಲಿ 5 ಸೋಲು ಹಾಗೂ 7 ಗೆಲುವು ದಾಖಲಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಒಂದು ಪಂದ್ಯವು ರದ್ದಾಗಿತ್ತು. ಅದರಂತೆ 1 ಅಂಕ ಪಡೆದಿರುವ ಲಕ್ನೋ ತಂಡವು +0.304 ನೆಟ್ ರನ್ ರೇಟ್ನೊಂದಿಗೆ 3ನೇ ಸ್ಥಾನ ಅಲಂಕರಿಸಿದೆ.

2- ಚೆನ್ನೈ ಸೂಪರ್ ಕಿಂಗ್ಸ್ (15 ಅಂಕಗಳು): 13 ಪಂದ್ಯಗಳನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್ಕೆ ತಂಡವು 5 ಸೋಲು ಮತ್ತು 7 ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯವು ರದ್ದಾದ ಕಾರಣ 1 ಅಂಕ ಪಡೆದುಕೊಂಡಿದೆ. ಅದರಂತೆ ಇದೀಗ +0.381 ನೆಟ್ ರನ್ ರೇಟ್ನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

4- ರಾಯಲ್ ಚಾಲೆಂಜರ್ಸ್ ಬೆಂಗಳೂರು (14 ಅಂಕಗಳು): ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್ಸಿಬಿ ತಂಡವು 13 ಪಂದ್ಯಗಳನ್ನು ಮುಗಿಸಿದ್ದು, ಇದರಲ್ಲಿ 7 ಪಂದ್ಯಗಳಲ್ಲಿ ಗೆದ್ದರೆ, 6 ರಲ್ಲಿ ಸೋತಿದೆ. ಇದೀಗ +0.180 ನೆಟ್ ರನ್ ರೇಟ್ನೊಂದಿಗೆ 4ನೇ ಸ್ಥಾನದಲ್ಲಿದೆ.

8 - ಪಂಜಾಬ್ ಕಿಂಗ್ಸ್ (12 ಅಂಕಗಳು): ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಆಡಿರುವ 13 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿದ್ದು, ಹಾಗೆಯೇ 7 ರಲ್ಲಿ ಸೋಲು ಕಂಡಿದೆ. ಇದೀಗ -0.308 ನೆಟ್ ರನ್ ರೇಟ್ನೊಂದಿಗೆ 8ನೇ ಸ್ಥಾನ ಅಲಂಕರಿಸಿದೆ.

5- ಮುಂಬೈ ಇಂಡಿಯನ್ಸ್ (14 ಅಂಕಗಳು): ಆಡಿರುವ 13 ಪಂದ್ಯಗಳಲ್ಲಿ 7 ಜಯ ಹಾಗೂ 6 ಸೋಲಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ -0.128 ನೆಟ್ ರನ್ ರೇಟ್ ಪಡೆದು 5ನೇ ಸ್ಥಾನದಲ್ಲಿದೆ.

7- ಕೊಲ್ಕತ್ತಾ ನೈಟ್ ರೈಡರ್ಸ್ (12 ಅಂಕಗಳು): ಕೆಕೆಆರ್ ಆಡಿರುವ 13 ಪಂದ್ಯಗಳಲ್ಲಿ 7 ಸೋಲು, 6 ಗೆಲುವು ದಾಖಲಿಸಿದೆ. ಇದೀಗ -0.256 ನೆಟ್ ರನ್ ರೇಟ್ ಹೊಂದಿರುವ ನಿತೀಶ್ ರಾಣಾ ಪಡೆಯು 7ನೇ ಸ್ಥಾನದಲ್ಲಿದೆ.

10- ಸನ್ರೈಸರ್ಸ್ ಹೈದರಾಬಾದ್ (8 ಅಂಕಗಳು): ಆಡಿರುವ 13 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿ, 8 ಮ್ಯಾಚ್ನಲ್ಲಿ ಸೋತಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು -0.558 ನೆಟ್ ರನ್ ರೇಟ್ನೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಅಲ್ಲದೆ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.

9- ಡೆಲ್ಲಿ ಕ್ಯಾಪಿಟಲ್ಸ್ (10 ಅಂಕಗಳು): ಆಡಿರುವ 13 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಪ್ರಸ್ತುತ ಪಾಯಿಂಟ್ ಟೇಬಲ್ನಲ್ಲಿ -0.572 ನೆಟ್ ರನ್ ರೇಟ್ನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 9ನೇ ಸ್ಥಾನದಲ್ಲಿದೆ.

ಶುಕ್ರವಾರದವರೆಗೆ (ಮೇ 18) ಒಟ್ಟು 65 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಬಳಿಕ ಅಪ್ಡೇಟ್ ಆಗಿರುವ ಪಾಯಿಂಟ್ಸ್ ಟೇಬಲ್ ಅನ್ನು ಇಲ್ಲಿ ನೀಡಲಾಗಿದೆ.
Published On - 12:30 am, Tue, 2 May 23



















