AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: RCB ತಂಡದಿಂದ ಈ ಮೂವರು ಹೊರಬೀಳುವುದು ಬಹುತೇಕ ಖಚಿತ..!

IPL 2023 Kannada: ಮುಂದಿನ ಸೀಸನ್​ಗೂ ಮುನ್ನ RCB ತಂಡಕ್ಕೆ ಮೇಜರ್ ಸರ್ಜರಿಯಾಗುವುದು ಖಚಿತ. ಹೀಗೆ ಮುಂದಿನ ಸೀಸನ್​ಗೂ ಮುನ್ನ ಆರ್​ಸಿಬಿ ತಂಡದಿಂದ ಈ ಮೂವರು ಹೊರಬೀಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅವರೆಂದರೆ...

TV9 Web
| Edited By: |

Updated on: May 24, 2023 | 9:22 PM

Share
IPL 2023: ಐಪಿಎಲ್​ ಸೀಸನ್​ 16 ರಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿರುವ ಆರ್​ಸಿಬಿ ತಂಡವು ಲೀಗ್ ಹಂತದಿಂದಲೇ ಹೊರಬಿದ್ದಿದೆ. ಅದರಲ್ಲೂ ಇಡೀ ಟೂರ್ನಿಯಲ್ಲಿ ಆರ್​ಸಿಬಿ ತಂಡ ನಾಲ್ವರನ್ನು ಅವಲಂಭಿಸಿ 7 ಪಂದ್ಯಗಳನ್ನು ಗೆದ್ದುಕೊಂಡಿದ್ದು ದೊಡ್ಡ ಸಾಧನೆಯೇ ಸರಿ.

1 / 8
ಅಂದರೆ ಆರ್​ಸಿಬಿ ಪರ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮೊಹಮ್ಮದ್ ಸಿರಾಜ್. ಡುಪ್ಲೆಸಿಸ್ 730 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 639 ರನ್ ಕಲೆಹಾಕಿದ್ದರು. ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ 400 ರನ್ ಪೇರಿಸಿದರೆ, ಸಿರಾಜ್ 19 ವಿಕೆಟ್ ಕಬಳಿಸಿ ಮಿಂಚಿದ್ದರು.

2 / 8
ಅಚ್ಚರಿ ಎಂದರೆ ಫಾಫ್, ಕೊಹ್ಲಿ ಹಾಗೂ ಮ್ಯಾಕ್ಸ್​ವೆಲ್​ರನ್ನು ಹೊರತುಪಡಿಸಿದರೆ ಆರ್​ಸಿಬಿ ತಂಡದ ಯಾವೊಬ್ಬ ಬ್ಯಾಟರ್ ಕೂಡ 150 ರನ್​ ಕಲೆಹಾಕಿಲ್ಲ. ಹಾಗೆಯೇ ಸಿರಾಜ್ ಅವರನ್ನು ಹೊರತುಪಡಿಸಿದರೆ ಯಾವುದೇ ಬೌಲರ್ 15 ವಿಕೆಟ್​ಗಳನ್ನೂ ಕೂಡ ಕಬಳಿಸಿಲ್ಲ.

3 / 8
ಅಂದರೆ ಆರ್​ಸಿಬಿ ಒಂದು ತಂಡವಾಗಿ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿಯೇ ಮುಂದಿನ ಸೀಸನ್​ಗೂ ಮುನ್ನ ಆರ್​ಸಿಬಿ ತಂಡಕ್ಕೆ ಮೇಜರ್ ಸರ್ಜರಿಯಾಗುವುದು ಖಚಿತ. ಹೀಗೆ ಮುಂದಿನ ಸೀಸನ್​ಗೂ ಮುನ್ನ ಆರ್​ಸಿಬಿ ತಂಡದಿಂದ ಈ ಮೂವರು ಹೊರಬೀಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅವರೆಂದರೆ...

4 / 8
1- ಅನೂಜ್ ರಾವತ್: ಈ ಬಾರಿ ಆರ್​ಸಿಬಿ ತಂಡದ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದ ಅನೂಜ್ ರಾವತ್ ಒಟ್ಟು 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 91 ರನ್ ಮಾತ್ರ. ಅಂದರೆ 3.4 ಕೋಟಿ ರೂ. ನೀಡಿ ಖರೀದಿಸಿದ್ದ ಆಟಗಾರ ಕಲೆಹಾಕಿದ ರನ್ ಸರಾಸರಿ ಕೇವಲ 13 ರನ್​. ಹೀಗಾಗಿಯೇ ಅನೂಜ್ ರಾವತ್​ರನ್ನು ಆರ್​ಸಿಬಿ ಕೈ ಬಿಡುವುದು ಖಚಿತ ಎನ್ನಬಹುದು.

5 / 8
2- ಮಹಿಪಾಲ್ ಲೋಮ್ರರ್: ಈ ಬಾರಿಯ ಐಪಿಎಲ್​ನಲ್ಲಿ ಮಹಿಪಾಲ್ ಲೋಮ್ರರ್ 10 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಕಲೆಹಾಕಿರುವ ಒಟ್ಟು ಸ್ಕೋರ್ 135 ರನ್​. ಇತ್ತ 95 ಲಕ್ಷ ರೂ. ನೀಡಿ ಖರೀದಿಸಿದ್ದ ಆಟಗಾರನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಲೋಮ್ರರ್ ಕೂಡ ಹೊರಬೀಳಲಿದ್ದಾರೆ.

6 / 8
3- ದಿನೇಶ್ ಕಾರ್ತಿಕ್: ಆರ್​ಸಿಬಿ ತಂಡದ ಫಿನಿಶರ್​ ಆಗಿ ಕಾಣಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಈ ಬಾರಿ 13 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 4 ಬಾರಿ ಡಕ್ ಔಟ್ ಆಗಿದ್ದಾರೆ. ಇನ್ನು ಕಲೆಹಾಕಿರುವುದು ಕೇವಲ 140 ರನ್ ಮಾತ್ರ. ಅಂದರೆ 5.5 ಕೋಟಿ ರೂ. ನೀಡಿ ಆರ್​ಸಿಬಿ ತಂಡ ಉಳಿಸಿಕೊಂಡಿದ್ದ ಆಟಗಾರ ಪ್ರತಿ ಮ್ಯಾಚ್​ನಲ್ಲಿ 10 ರ ಸರಾಸರಿಯಲ್ಲಿ ಮಾತ್ರ ರನ್​ಗಳಿಸಿದ್ದಾರೆ.

7 / 8
ಸದ್ಯ ದಿನೇಶ್ ಕಾರ್ತಿಕ್ ಅವರಿಗೆ 37 ವರ್ಷವಾಗಿದ್ದು, ಇದಲ್ಲದೆ ಇತರೆ ಯಾವುದೇ ಸ್ಪರ್ಧಾತ್ಮಕ ಟೂರ್ನಿಯಲ್ಲೂ ಭಾಗವಹಿಸುತ್ತಿಲ್ಲ. ಅಲ್ಲದೆ ಈ ಬಾರಿ ವಿಕೆಟ್ ಕೀಪಿಂಗ್​ನಲ್ಲೂ ವಿಫಲರಾಗಿದ್ದರು. ಹೀಗಾಗಿ ಡಿಕೆಯನ್ನು ಕೂಡ ಕೈ ಬಿಡುವುದು ಕೂಡ ಖಚಿತ ಎನ್ನಬಹುದು.

8 / 8
Follow Us
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್

ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ

ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ

ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್

BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ

ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ

ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!