AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಅಜೇಯ 99 ರನ್ ಬಾರಿಸಿ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ ಶಿಖರ್ ಧವನ್..!

IPL 2023 Kannada: ಬೃಹತ್ ಮೊತ್ತ ಪೇರಿಸುವ ಇರಾದೆಯೊಂದಿಗೆ ಕಣಕ್ಕಿಳಿದ ಪಂಜಾಬ್ ಕಿಂಗ್ಸ್​ಗೆ ಎಸ್​ಆರ್​ಹೆಚ್​ ಬೌಲರ್​ಗಳು ಆರಂಭಿಕ ಆಘಾತ ನೀಡಿದ್ದರು.

TV9 Web
| Edited By: |

Updated on: Apr 09, 2023 | 10:08 PM

Share
IPL 2023: ಕ್ರಿಕೆಟ್ ಅಂಗಳದಲ್ಲಿ ಏಕಾಂಗಿ ಹೋರಾಟ ಹೇಗಿರುತ್ತೆ ಎಂದು ತಿಳಿಯಲು ಐಪಿಎಲ್​ನ 14ನೇ ಪಂದ್ಯದಲ್ಲಿ ಶಿಖರ್ ಧವನ್ ಮಾಡಿದ ಬ್ಯಾಟಿಂಗ್ ಅನ್ನು ವೀಕ್ಷಿಸಲೇಬೇಕು. ಹೈದರಾಬಾದ್​ನಲ್ಲಿ ನಡೆದ ಈ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಎಸ್​ಆರ್​ಹೆಚ್ ಬೌಲಿಂಗ್ ಆಯ್ದುಕೊಂಡಿತು.

1 / 10
ಬೃಹತ್ ಮೊತ್ತ ಪೇರಿಸುವ ಇರಾದೆಯೊಂದಿಗೆ ಕಣಕ್ಕಿಳಿದ ಪಂಜಾಬ್ ಕಿಂಗ್ಸ್​ಗೆ ಎಸ್​ಆರ್​ಹೆಚ್​ ಬೌಲರ್​ಗೆ ಆರಂಭಿಕ ಆಘಾತ ನೀಡಿದ್ದರು. ಕೇವಲ 23 ರನ್​ಗೆ 3 ವಿಕೆಟ್ ಕಳೆದುಕೊಂಡ ಪಂಜಾಬ್ ತಂಡವು ಆ ಬಳಿಕ ಚೇತರಿಸಿಕೊಳ್ಳುವ ಪ್ರಯತ್ನ ಮಾಡಿತು. ಆದರೆ 88 ರನ್​ಗಳಿಸುಷ್ಟರಲ್ಲಿ 9 ವಿಕೆಟ್ ಕಳೆದುಕೊಂಡು ಇನಿಂಗ್ಸ್​ ಅಂತ್ಯಗೊಳಿಸುವ ಹಂತಕ್ಕೆ ಬಂದು ನಿಂತಿತು.

2 / 10
ಆದರೆ ಆರಂಭಿಕನಾಗಿ ಕಣಕ್ಕಿಳಿದ ಶಿಖರ್ ಧವನ್ ಮಾತ್ರ ಬಂಡೆಯಂತೆ ಒಂದೆಡೆ ಕ್ರೀಸ್ ಕಚ್ಚಿ ನಿಂತಿದ್ದರು. ಎಸ್​ಆರ್​ಹೆಚ್​ ಬೌಲರ್​ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಧವನ್ ರನ್​ ಪೇರಿಸುತ್ತಾ ಸಾಗಿದರು. ಪರಿಣಾಮ ಪಂಜಾಬ್ ಕಿಂಗ್ಸ್ ತಂಡದ ಮೊತ್ತ 100ರ ಗಡಿದಾಟಿತು.

3 / 10
16ನೇ ಓವರ್​ ವೇಳೆ ಕೊನೆಯ ಬ್ಯಾಟ್ಸ್​ಮನ್ ಮೋಹಿತ್ ರಥಿ ಕ್ರೀಸ್​ಗೆ ಆಗಮಿಸಿದರೂ, ಶಿಖರ್ ಧವನ್ ಕೇವಲ 2 ಬಾರಿ ಮಾತ್ರ ಸ್ಟ್ರೈಕ್ ನೀಡಿದ್ದರು. ಅಂದರೆ ಕೊನೆಯ 22 ಎಸೆತಗಳನ್ನೂ ಕೂಡ ಏಕಾಂಗಿಯಾಗಿ ಶಿಖರ್ ಧವನ್ ಆಡಿದ್ದರು.

4 / 10
ಇತ್ತ ಧವನ್ ವಿಕೆಟ್ ಪಡೆಯಲು ಎಸ್​ಆರ್​​ಹೆಚ್ ನಾಯಕ ಐಡೆನ್ ಮಾರ್ಕ್ರಾಮ್ ನಾನಾ ತಂತ್ರಗಳನ್ನು ಹೂಡಿದರೂ ಫಲ ನೀಡಲಿಲ್ಲ. ಬದಲಾಗಿ ಶಿಖರ್ ಅಬ್ಬರ ಮುಂದುವರೆಯಿತು. ಕೊನೆಯ ವಿಕೆಟ್​ನಲ್ಲಿ 55 ರನ್​ ಕಲೆಹಾಕಿದರು. ಈ ಐವತ್ತೈದು ರನ್​ಗಳಲ್ಲಿ ಶಿಖರ್ ಧವನ್ 54 ರನ್​ ಬಾರಿಸಿದ್ದರು ಎಂಬುದೇ ವಿಶೇಷ.

5 / 10
ಅಲ್ಲದೆ ಅಂತಿಮ ಓವರ್​ನ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 143 ಕ್ಕೆ ತಂದು ನಿಲ್ಲಿಸಿದರು. 66 ಎಸೆತಗಳನ್ನು ಎದುರುಸಿದ ಧವನ್ 5 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ನೊಂದಿಗೆ ಅಜೇಯ 99 ರನ್​ಗಳಿಸಿ ಮಿಂಚಿದರು.

6 / 10
ಈ ಅತ್ಯಧ್ಭುತ ಅರ್ಧಶತಕದ ಇನಿಂಗ್ಸ್​ನೊಂದಿಗೆ ಶಿಖರ್ ಧವನ್ ವಿರಾಟ್ ಕೊಹ್ಲಿಯ ವಿಶೇಷ ದಾಖಲೆಯನ್ನು ಮುರಿದರು. ಅಂದರೆ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್​ಗಳಿಸಿದವರ ಪಟ್ಟಿಯಲ್ಲಿ ಶಿಖರ್ ಧವನ್ 2ನೇ ಸ್ಥಾನಕ್ಕೇರಿದ್ದಾರೆ.

7 / 10
ಇದಕ್ಕೂ ಮುನ್ನ 50 ಬಾರಿ 50+ ಸ್ಕೋರ್​ ಕಲೆಹಾಕುವ ಮೂಲಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರು. ಇದೀಗ ಎಸ್​ಆರ್​ಹೆಚ್ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಧವನ್ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

8 / 10
ಶಿಖರ್ ಧವನ್ 208 ಐಪಿಎಲ್ ಇನಿಂಗ್ಸ್​ನಲ್ಲಿ ಒಟ್ಟು 51 ಬಾರಿ 50+ ಸ್ಕೋರ್​ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 49 ಅರ್ಧಶತಕಗಳು ಸೇರಿವೆ. ಈ ಮೂಲಕ ಐಪಿಎಲ್​ನಲ್ಲಿ ಅತೀ ಹೆಚ್ಚು 50 ಕ್ಕಿಂತ ಅಧಿಕ ರನ್​ ಕಲೆಹಾಕಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

9 / 10
ಇನ್ನು ಈ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಡೇವಿಡ್ ವಾರ್ನರ್. 165 ಐಪಿಎಲ್ ಇನಿಂಗ್ಸ್​ ಆಡಿರುವ ವಾರ್ನರ್ ಒಟ್ಟು 61 ಬಾರಿ 50+ ಸ್ಕೋರ್​ಗಳಿಸಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಶಿಖರ್ ಧವನ್ 2ನೇ ಸ್ಥಾನಕ್ಕೇರಿರುವುದು ವಿಶೇಷ.

10 / 10
Web contact
Web contact

TV9 Kannada

Read More
Follow Us
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು

ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ

ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ

ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!

ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ

ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ

ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ

ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!

ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ

ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ