- Kannada News Photo gallery Cricket photos IPL 2026: 1 Playoff Spot, 5 Teams – The Ultimate Battle Begins!
1 ಸ್ಥಾನಕ್ಕಾಗಿ 5 ತಂಡಗಳ ಪೈಪೋಟಿ: ಯಾರು ಹೇಗೆ ಪ್ಲೇಆಫ್ಗೇರಬಹುದು?
ಐಪಿಎಲ್ 2026ರ ಪ್ಲೇಆಫ್ ರೇಸ್ ಪ್ರಸ್ತುತ ರೋಮಾಂಚನಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇಡೀ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಮೂರು ಬಲಿಷ್ಠ ತಂಡಗಳು ಈಗಾಗಲೇ ಅಧಿಕೃತವಾಗಿ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿವೆ. ಆದರೆ, ಲೀಗ್ ಹಂತದ ಕೊನೆಯ ದಿನಗಳಲ್ಲಿ 4ನೇ ಸ್ಥಾನಕ್ಕಾಗಿ ನಡೆಯುತ್ತಿರುವ ಜಿದ್ದಾಜಿದ್ದಿ ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಇಲ್ಲಿ ಯಾವ ತಂಡ ಹೇಗೆ 4ನೇ ಸ್ಥಾನ ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on:May 19, 2026 | 4:19 PM

IPL 2026: ಐಪಿಎಲ್ 2026ರ ಲೀಗ್ ಹಂತವು ಕ್ಲೈಮ್ಯಾಕ್ಸ್ ತಲುಪಿದ್ದು, ಪ್ಲೇಆಫ್ ರೇಸ್ ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಗುಜರಾತ್ ಟೈಟಾನ್ಸ್ (GT), ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಪ್ಲೇಆಫ್‌ಗೆ ಅಧಿಕೃತವಾಗಿ ಅರ್ಹತೆ ಪಡೆದಿವೆ. ಇನ್ನು ಉಳಿದಿರುವುದು ಕೇವಲ ಒಂದೇ ಒಂದು ಸ್ಥಾನ, ಆದರೆ ಈ ಸ್ಥಾನಕ್ಕಾಗಿ ರೇಸ್‌ನಲ್ಲಿರುವುದು ಬರೋಬ್ಬರಿ 5 ತಂಡಗಳು!

ರಾಜಸ್ಥಾನ್ ರಾಯಲ್ಸ್ (RR), ಪಂಜಾಬ್ ಕಿಂಗ್ಸ್ (PBKS), ಚೆನ್ನೈ ಸೂಪರ್ ಕಿಂಗ್ಸ್ (CSK), ಡೆಲ್ಲಿ ಕ್ಯಾಪಿಟಲ್ಸ್ (DC), ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳ ನಡುವೆ ಅಂತಿಮ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಹಾಗಿದ್ರೆ ಯಾವ ತಂಡದ ಪ್ಲೇಆಫ್ ಲೆಕ್ಕಾಚಾರ ಹೇಗಿದೆ ಎಂದು ನೋಡೋಣ...

ರಾಜಸ್ಥಾನ್ ರಾಯಲ್ಸ್ (RR): ಪ್ರಸ್ತುತ ಸನ್ನಿವೇಶದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪ್ಲೇಆಫ್ ಹಾದಿ ಸುಲಭವಾಗಿದೆ. ಅವರು ತಮ್ಮ ಮುಂದಿನ 2 ಪಂದ್ಯಗಳನ್ನು ಗೆದ್ದರೆ ಯಾರದೇ ಹಂಗಿಲ್ಲದೆ 16 ಅಂಕಗಳೊಂದಿಗೆ ನೇರವಾಗಿ 4ನೇ ಸ್ಥಾನಿಯಾಗಿ ಪ್ಲೇಆಫ್ ತಲುಪಲಿದ್ದಾರೆ.

ಪಂಜಾಬ್ ಕಿಂಗ್ಸ್ (PBKS): ಪಂಜಾಬ್ ಕಿಂಗ್ಸ್ ತನ್ನ ಕೊನೆಯ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದು 15 ಅಂಕ ತಲುಪಬೇಕಿದೆ. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಮುಂದಿನ 2 ಪಂದ್ಯಗಳಲ್ಲಿ ಒಂದರಲ್ಲಿ ಸೋಲುವುದನ್ನು ಎದುರು ನೋಡಬೇಕಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ (KKR): ಕೆಕೆಆರ್ ಕೈಯಲ್ಲಿ ಇನ್ನೂ ಎರಡು ಪಂದ್ಯಗಳಿವೆ. ತಂಡವು ಈ ಎರಡೂ ಪಂದ್ಯಗಳನ್ನು ಗೆದ್ದರೆ ಒಟ್ಟು 15 ಅಂಕಗಳನ್ನು ಪಡೆಯಲಿದೆ. ಅದಾಗ್ಯೂ ಪ್ಲೇಆಫ್ ಏರಬೇಕಿದ್ದರೆ ಪಂಜಾಬ್ ಕಿಂಹ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಒಂದೊಂದು ಪಂದ್ಯವನ್ನು ಸೋಲುವುದನ್ನು ಎದುರು ನೋಡಬೇಕು.

ಚೆನ್ನೈ ಸೂಪರ್ ಕಿಂಗ್ಸ್ (CSK): ಚೆನೈ ಸೂಪರ್ ಕಿಂಗ್ಸ್ ತಂಡಕ್ಕೆ ಇನ್ನು ಉಳಿದಿರುವುದು ಒಂದು ಮ್ಯಾಚ್ ಮಾತ್ರ. ಈ ಪಂದ್ಯದಲ್ಲಿ ಗೆದ್ದರೆ ಸಾಲದು. ಅತ್ತ ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಸೋಲುವುದನ್ನು ಎದುರು ನೋಡಬೇಕು. ಅಂದರೆ ಈ ಮೂರು ತಂಡಗಳು ಮುಂದಿನ ಪಂದ್ಯಗಳಲ್ಲಿ ಸೋತರೆ ಮಾತ್ರ ಸಿಎಸ್ ಕೆ ತಂಡಕ್ಕೆ ಪ್ಲೇಆಫ್ ಗೇರಲು ಅವಕಾಶ ಸಿಗಲಿದೆ.

ಡೆಲ್ಲಿ ಕ್ಯಾಪಿಟಲ್ಸ್ (DC): ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಇನ್ನು ಒಂದು ಮ್ಯಾಚ್ ಮಾತ್ರ ಬಾಕಿ ಇದೆ. ತನ್ನ ಕೊನೆಯ ಪಂದ್ಯದಲ್ಲಿ ಡಿಸಿ ಪಡೆ ಗೆದ್ದರೆ 14 ಅಂಕಗಳನ್ನು ಪಡೆಯಲಿದೆ. ಈ ಅಂಕಗಳೊಂದಿಗೆ ಪ್ಲೇಆಫ್ ಗೇರಬೇಕಿದ್ದರೆ, ಉತ್ತಮ ನೆಟ್ ರನ್ ರೇಟ್ ಹೊಂದಬೇಕು. ಅದರ ಜೊತೆಗೆ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಹೀನಾಯವಾಗಿ ಸೋಲಬೇಕಾಗುತ್ತದೆ.
Published On - 4:18 pm, Tue, 19 May 26

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More
