AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL ನಿಂದ ಇಬ್ಬರು ಆಟಗಾರರಿಗೆ ನಿಷೇಧ..!

IPL 2026: ಐಪಿಎಲ್ ಕ್ರಿಕೆಟ್ ಟೂರ್ನಿಗೆ ಇಂದಿನಿಂದ (ಮಾ.28) ಚಾಲನೆ ದೊರೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್​​ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಐಪಿಎಲ್​ನ 19ನೇ ಸೀಸನ್​ಗೆ ಚಾಲನೆ ದೊರೆಯಲಿದೆ.

ಝಾಹಿರ್ ಯೂಸುಫ್
|

Updated on: Mar 28, 2026 | 8:15 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಆರಂಭಕ್ಕೆ ವೇದಿಕೆ ಸಜ್ಜಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಈ ಮುಖಾಮುಖಿಗೂ ಮುನ್ನವೇ ಇಂಗ್ಲೆಂಡ್ ಆಟಗಾರ ಬೆನ್ ಡಕೆಟ್ ಐಪಿಎಲ್​ನಿಂದ ಹಿಂದೆ ಸರಿದ್ದಾರೆ.

1 / 5
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಬೆನ್ ಡಕೆಟ್ ಟೂರ್ನಿ ಆರಂಭಕ್ಕೂ ಮುನ್ನ ತಮ್ಮ ಒಪ್ಪಂದದಿಂದ ಹಿಂದೆ ಸರಿದ ಕಾರಣ ಇದೀಗ ನಿಷೇಧಕ್ಕೆ ಒಳಗಾಗಿದ್ದಾರೆ. ಅಂದರೆ ಬಿಸಿಸಿಐ ನಿಯಮದಂತೆ, ಯಾವುದೇ ವಿದೇಶಿ ಆಟಗಾರ ಹರಾಜಿನಲ್ಲಿ ಮಾರಾಟವಾದ ನಂತರ, ವೈದ್ಯಕೀಯ ಕಾರಣಗಳಿಲ್ಲದೆ ಟೂರ್ನಿಯಿಂದ ಹಿಂದೆ ಸರಿದರೆ ಅಂತಹ ಆಟಗಾರರನ್ನು ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್‌ನಿಂದ ನಿಷೇಧಿಸಲಾಗುತ್ತದೆ. ಅದರಂತೆ ಇಬ್ಬರು ಇಂಗ್ಲೆಂಡ್ ಆಟಗಾರರು ಐಪಿಎಲ್​ನಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ಅವರೆಂದರೆ...

2 / 5
ಹ್ಯಾರಿ ಬ್ರೂಕ್: ಐಪಿಎಲ್ 2025ರ ಮೆಗಾ ಹರಾಜಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಇಂಗ್ಲೆಂಡ್​ನ ಹೊಡಿಬಡಿ ದಾಂಡಿಗ ಹ್ಯಾರಿ ಬ್ರೂಕ್ ಅವರನ್ನು ಬರೋಬ್ಬರಿ 6.25 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಕೆಲಸದ ಒತ್ತಡದ ಕಾರಣ ನೀಡಿ ಹಿಂದೆ ಸರಿದಿದ್ದರಿಂದ ಅವರ ಮೇಲೆ 2 ವರ್ಷಗಳವರೆಗೆ ನಿಷೇಧ ಹೇರಲಾಗಿದೆ. ಹೀಗಾಗಿಯೇ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಹ್ಯಾರಿ ಬ್ರೂಕ್ ಹೆಸರು ಕಾಣಿಸಿಕೊಂಡಿರಲಿಲ್ಲ. ಅಂದರೆ 2027 ರ ಹರಾಜಿನಲ್ಲಿ ಅವರು ಹೆಸರು ನೀಡಬಹುದು.

3 / 5
ಬೆನ್ ಡಕೆಟ್: ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಈ ಬಾರಿಯ ಮಿನಿ ಹರಾಜಿನ ಮೂಲಕ ಇಂಗ್ಲೆಂಡ್ ತಂಡದ ಎಡಗೈ ದಾಂಡಿಗ ಬೆನ್ ಡಕೆಟ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್‌ನತ್ತ ಗಮನ ಹರಿಸುವ ಸಲುವಾಗಿ ಐಪಿಎಲ್​ನಿಂದ ಹಿಂದೆ ಸರಿಯುತ್ತಿರುವುದಾಗಿ ಡಕೆಟ್ ತಿಳಿಸಿದ್ದಾರೆ. ಹೀಗಾಗಿ ಅವರ ಮೇಲೂ 2 ವರ್ಷಗಳ ನಿಷೇಧ ಹೇರಲಾಗಿದೆ. ಹೀಗಾಗಿ 2027ರ ಹರಾಜಿಗೆ ಬೆನ್ ಡಕೆಟ್ ಅವರ ಹೆಸರನ್ನು ಪರಿಗಣಿಸಲಾಗುವುದಿಲ್ಲ.

4 / 5
ಡೆಲ್ಲಿ ಕ್ಯಾಪಿಟಲ್ಸ್ ತಂಡ: ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಅಜಯ್ ಮಂಡಲ್, ಅಶುತೋಷ್ ಶರ್ಮಾ, ಅಕ್ಷರ್ ಪಟೇಲ್, ದುಷ್ಮಂತ ಚಮೀರಾ, ಕರುಣ್ ನಾಯರ್, ಕೆಎಲ್ ರಾಹುಲ್, ಕುಲದೀಪ್ ಯಾದವ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಸಮೀರ್ ರಿಝ್ವಿ, ಟಿ ನಟರಾಜನ್, ತ್ರಿಪುರಾಣ ವಿಜಯ್, ಟ್ರಿಸ್ಟನ್ ಸ್ಟಬ್ಸ್, ವಿಪ್ರಾಜ್ ನಿಗಮ್, ಡೇವಿಡ್ ಮಿಲ್ಲರ್,  ಆಖಿಬ್ ನಬಿ, ಪಾತುಮ್ ನಿಸ್ಸಾಂಕಾ, ಲುಂಗಿ ಎನ್‌ಗಿಡಿ, ಸಾಹಿಲ್ ಪರಾಖ್, ಪೃಥ್ವಿ ಶಾ, ಕೈಲ್ ಜೇಮಿಸನ್, ಬೆನ್ ಡಕೆಟ್ (ಅಲಭ್ಯ).

5 / 5
Follow Us
ಭಟ್ಕಳದಲ್ಲಿ ಮತ್ತೆ ಕೊಮು ಸಂಘರ್ಷ: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

ಕೊಯಮತ್ತೂರಿನ ಬೇಕರಿಯಿಂದ 10,000 ರೂ. ಸಿಗರೇಟ್ ಪ್ಯಾಕೆಟ್ ಕದ್ದ ಕಳ್ಳ!

ಪರಿಷತ್ 5 ಸ್ಥಾನ ಗೆಲ್ಲಲು ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ?

ಮೋದಿ ಬಹಳ ಸುಂದರ ವ್ಯಕ್ತಿ; ಗೆಳೆಯನನ್ನು ಹೊಗಳಿದ ಟ್ರಂಪ್

ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಂಬರ್ ಗೇಮ್ ಹೇಗಿದೆ?

ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು

ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ

ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ

ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು

ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ