AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರು ತಮ್ಮ ಎಲ್ಲ ಸಾಮಾರ್ಥ್ಯವನ್ನು ಪ್ರದರ್ಶಿಸಬೇಕಾಗುವುದು..

Horoscope Today July 08: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ನಿಜ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ನವಮೀ ತಿಥಿಯ ಬುಧವಾರದಂದು ಪದೋನ್ನತಿ, ಹಿತಶತ್ರುತ್ವ, ಸ್ನೇಹಿತರ ಮೇಲೆ ಕೋಪ, ಅಪನಂಬಿಕೆ, ನಿಮ್ಮಿಷ್ಟದವರ ಭೇಟಿ, ಐಚ್ಛಿಕ ಸ್ಥಳದಲ್ಲಿ ಓಡಾಟ, ವಾಹನ ಖರೀದಿ, ವ್ಯಾಮೋಹದ ಕುರುಡು, ಆದಾಯ ಕುಂಟಿತ ಇವೆಲ್ಲ ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ತಮ್ಮ ಎಲ್ಲ ಸಾಮಾರ್ಥ್ಯವನ್ನು ಪ್ರದರ್ಶಿಸಬೇಕಾಗುವುದು..
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 08, 2026 | 12:58 AM

Share

ಮೇಷ ರಾಶಿ:

ನಿಮಗೆ ಸವಾಲುಗಳು ಬೇಡವೆಂದರೂ ಬರುತ್ತವೆ. ಕೆಲಸದ ಸ್ಥಳದಲ್ಲಿ ಭಿನ್ನಾಭಿಪ್ರಾಯ ಇರಲಿದೆ. ಸ್ನೇಹಿತರ ಮಾತು ನಿಮಗೆ ಸಿಟ್ಟನ್ನು ತರಿಸಬಹುದು. ಆತ್ಮೀಯರ ಸಲಹೆಯನ್ನು ಸ್ವೀಕರಿಸುವಿರಿ. ಕಳೆದುಹೋದ ಸಮಯವನ್ನು ಮತ್ತೆ ನೆನಪಿಸಿಕೊಳ್ಳಲು ಹೋಗುವುದಿಲ್ಲ. ಆರ್ಥಿಕತೆಯ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ. ಜಲೋದ್ಯಮದಲ್ಲಿ ತೊಡಗಿದವರಿಗೆ ಅಲ್ಪ ಲಾಭ ಆಗಲಿದೆ. ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ.

ವೃಷಭ ರಾಶಿ:

ಸಂಪತ್ತು ಬರುವುದು ಮಾತ್ರ ಕಾಣಿಸುತ್ತದೆ. ನೋಡು ನೋಡುತ್ತಿದ್ದಂತೆ ಎಲ್ಲವೂ ಖಾಲಿಯಾಗುವುದು. ನಿಮ್ಮ ವಸ್ತುಗಳು ಕೆಲವು ಸಮಯ ಕಣ್ಮರೆಯಾದೀತು. ಕೂಡಿಟ್ಟ ಹಣವೆಲ್ಲವೂ ಕರಗುತ್ತಿದೆ ಎನ್ನುವ ಭಯವು ಉಂಟಾಗಲಿದೆ. ನಿಮ್ಮ ನೆಚ್ಚಿನವರ ಭೇಟಿಯಾಗಬಹುದು. ವಿದ್ಯಾರ್ಥಿಗಳು ಉತ್ತಮವಾದ ಲಕ್ಷ್ಯವನ್ನು ಇಟ್ಟುಕೊಂಡಿದ್ದರೂ ನಿಮಗೆ ತಲುಪಲು ಕಷ್ಟವಾದೀತು. ಕೃಷಿ ಕಾರ್ಯಗಳೇ ನಿಮಗೆ ಹಿತವೆನಿಸುವುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು.

ಮಿಥುನ ರಾಶಿ:

ನಿಮ್ಮ ತೊಂದರೆಗಳೇ ಸಾವಿರವಿದ್ದರೂ ಇನ್ನೊಬ್ಬರಿಗೆ ಸಹಾಯವನ್ನು ಮಾಡುವಿರಿ. ವಿದ್ಯಾರ್ಥಿಗಳು ಅಧಿಕ ಅಧ್ಯಯನವನ್ನು ಮಾಡಬೇಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುವ ತವಕವಿರುವುದು. ತಂದೆಯವರಿಗೆ ಎದುರು ಮಾತನಾಡುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನಾಚಿಕೆಯ ಸ್ವಭಾವವು ನಿಮ್ಮ ಕಾರ್ಯಗಳಿಗೆ ಅಡ್ಡಿಯಾಗುವುದು.

ಕರ್ಕಾಟಕ ರಾಶಿ:

ಮನಸ್ಸಿಗೆ ಹಿತವಾದ ಸಂಗತಿಗಳು ನಡೆಯಲಿದೆ. ಎಲ್ಲದಕ್ಕೂ ಸಿಟ್ಟುಗೊಳ್ಳುವ ಅಗತ್ಯವಿಲ್ಲ. ಕೆಲವೊಂದನ್ನು ಹಾಗಯೇ ಬಿಡುವುದು ಒಳ್ಳೆಯದು. ಹಣವನ್ನು ಹೊಂದಿಸಲು ಹೆಚ್ಚು ಕಷ್ಟವಾದೀತು. ಏಕಕಾಲದಲ್ಲಿ ಎಲ್ಲವನ್ನೂ ಮಾಡಲಾಗದು. ಧಾರ್ಮಿಕವಾಗಿ ಶ್ರದ್ಧೆ ಉಳ್ಳವರಾದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ಉದ್ಯೋಗಿಗಳಿಗೆ ವೇತನ ಸಿಗುವುದು. ಸಾಲವನ್ನು ತೀರಿಸುವ ಭರದಲ್ಲಿ ಖರ್ಚಿಗೂ ಹಣವನ್ನು ಇಟ್ಟುಕೊಳ್ಳುವುದನ್ನು ಮರೆಯಬಹುದು.

ಸಿಂಹ ರಾಶಿ:

ವೃತ್ತಿಯಲ್ಲಿ‌ ನೀವು ಜಾಣ್ಮೆಯನ್ನು ತೋರಿಸುವಿರಿ. ಅಪವಾದಗಳನ್ನು ಧೈರ್ಯದಿಂದ ಎದುರಿಸುವ ಛಾತಿಯನ್ನು ಹೊಂದಿರುವಿರಿ. ನಿಮ್ಮ ಜ್ಞಾನವನ್ನು ಕಂಡು ಅಚ್ಚರಿಗೊಳ್ಳಬಹುದು. ಹೊಸ ಬೇಡಿಕೆಯಿಂದ ಉದ್ಯಮ ಚುರುಕಾಗುವುದು. ಸಂವೇದನಾಶೀಲ ವ್ಯಕ್ತಿತ್ವವನ್ನು ಹೊಂದಿದ್ದೀರಿ. ಉದ್ಯೋಗಿಗಳಾಗಿದ್ದರೆ ವೃತ್ತಿಯನ್ನು ಬಿಡುವ ಆಲೋಚನೆಯಲ್ಲಿ ನೀವಿರುವಿರಿ. ನಿಮ್ಮ ಬೆನ್ನನ್ನೇ ತಟ್ಟಿಕೊಂಡು ಸುಖಿಸುವ ದಿನ. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು.

ಕನ್ಯಾ ರಾಶಿ:

ಇಂದು ನಿಮ್ಮವರ ಬಗ್ಗೆ ಅನುಮಾನ ಕಾಡಬಹುದು. ಪರೀಕ್ಷಿಸದೇ ಯಾವ ತೀರ್ಮಾನಕ್ಕೂ ಬರುವುದು ಬೇಡ. ಮನೆಯ ವಾತಾವರಣವು ಈ ದಿನದ ಕೆಲಸವನ್ನು ಹಾಳುಮಾಡಿಸುವುದು. ಕಾರಣವಿಲ್ಲದೇ ಯಾವುದೂ ಆಗದು ಎಂಬ ದೃಢತೆ ಇರವುದು. ಶಿಸ್ತಿನ ಸ್ವಭಾವವು ಇಷ್ಟವಾದೀತು. ಸತ್ಯವನ್ನು ಹೇಳಿ ತೊಂದರೆ ಸಿಕ್ಕಿಹಾಕಿಕೊಳ್ಳಬೇಕಾದೀತು. ಆಸ್ತಿ ಖರೀದಿಯನ್ನು ಮಾಡುವಿರಿ. ಸಂಗಾರಿಯ ಮೇಲಿನ ಪ್ರೀತಿಯು ಕಡಿಮೆಯಾದಂತೆ ತೋರುವುದು.

ತುಲಾ ರಾಶಿ:

ಇಂದು ನಿಮ್ಮ ‌ಮುಂದಿನ ಕಾರ್ಯಕ್ಕೆ ಬೇಕಾದ ಅನುಕೂಲಕರ ತಯಾರಿ ಮಾಡಿಕೊಳ್ಳಿ. ಎಲ್ಲ ಕೆಲಸ ಅಪೂರ್ಣವಾಗಲಿದ್ದು ಬಹಳ ಖೇದ ಉಂಟಗಬಹುದು. ನಿಮ್ಮವರನ್ನು ಅನಿರೀಕ್ಷಿತವಾಗಿ ಕಳೆದುಕೊಳ್ಳುವಿರಿ. ಸ್ಥಾನಚ್ಯುತಿಯಿಂದ ಬಹಳ ಖೇದವಾಗಲಿದೆ‌. ಸಂಗಾತಿಯೂ ನಿಮ್ಮ ಮಾತನ್ನು ಕೇಳದೇ ಸ್ವತಂತ್ರವಾಗಿ ವರ್ತಿಸುವಳು. ಅಂದುಕೊಂಡಿದ್ದು ಆಗಲಿಲ್ಲ ಎಂಬ ಬೇಸರವು ಉಂಟಾದೀತು. ನಿಮ್ಮ ವರ್ತನೆಯು ಯಾರ ಮೇಲಾದರೂ ಪ್ರಭಾವ ಬೀರಬಹುದು.

ವೃಶ್ಚಿಕ ರಾಶಿ:

ನಿಃಸ್ವಾರ್ಥವಾಗಿ ಇಷ್ಟಪಡುವವರನ್ನು ಸಂಶಯಿಸಬೇಡಿ.‌ ಸ್ನೇಹಿತರ ಮಾತು ನಿಮ್ಮನ್ನು ಕೆರಳಿಸೀತು. ಉದ್ವೇಗದಲ್ಲಿ ನೀವು ಮಾತನಾಡುವಿರಿ. ಇದು ನಿಮ್ಮನ್ನು ಅಪಹಾಸ್ಯಕ್ಕೆ ದಾರಿ ಮಾಡಿಕೊಟ್ಟೀತು. ನಿಮ್ಮ ಪ್ರೇಮಪ್ರಕರಣವು ಸುಖಾಂತ್ಯವಾಗಲಿದೆ. ಬೇರೆಯವರು ನೀಡಿದ ವಸ್ತುವನ್ನು ಮರಳಿ ಪಡೆಯುವರು. ಮನೆಯಲ್ಲಿ ವಿವಾಹಕ್ಕೆ ಒಪ್ಪಿಗೆ ಸಿಗಬಹುದು. ಸಿಕ್ಕಿರುವುದನ್ನು ಪ್ರೀತಿಯಿಂದ ಸ್ವೀಕರಿಸಿ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು.

ಧನು ರಾಶಿ:

ನಿಮಗಿಂತ ಹಿರಿಯರಿಗೆ ಗೌರವವನ್ನು ಕೊಡಿ. ಮಕ್ಕಳ ಜೊತೆ ಶಾಂತ ರೀತಿಯಿಂದ ವರ್ತಿಸಿ. ಹೊಸತನ್ನು ಕಲಿಯುವ ಹುಮ್ಮಸ್ಸು ಇರುವುದು. ನಿಮ್ಮ ಸಂಗಾತಿಯನ್ನು ಮತ್ತಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳುವಿರಿ. ವಿಮರ್ಶೆಯನ್ನು ಸೂಕ್ಷ್ಮವಾಗಿ ಗಮನಿಸಲಾರಿರಿ. ಸ್ತ್ರೀಯರು ಆಲಂಕಾರಿಕ ವಸ್ತುಗಳನ್ನು ಖರೀದಿಸಬಹುದು. ಋಣವಿದ್ದರೆ ಸಿಗುತ್ತದೆ ಎಂಬ ಭಾವದಲ್ಲಿ ಇರುವಿರಿ. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು.

ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

ಮಕರ ರಾಶಿ:

ಸಂಗಾತಿಯೊಂದಿಗೆ ಆಪ್ತತೆ ಹೆಚ್ಚಾಗಲಿ. ಇಲ್ಲವಾದರೆ ಭಿನ್ನಾಭಿಪ್ರಾಯಗಳು ತಲೆದೂರಬಹುದು. ಏಕಾಂಗಿ ತನವು ಮನೆಯವರಿಗೆ ಮುಳುವಾಗುವುದು. ಆಭರಣವನ್ನು ಖರೀದಿಸುವ ಮನಸ್ಸು ಉಂಟಾಗಬಹುದು. ಎಲ್ಲದಕ್ಕೂ ಕಾರಣವನ್ನು ಹುಡುಕುತ್ತ ಕಾಲಹರಣ ಮಾಡಬೇಡಿ. ಸಾಲದಿಂದ ಬಿಡುಗಡೆ ಹೊಂದಲು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಿರಿ. ಕಷ್ಟವಾದರೂ ತಗ್ಗಿ ನಡೆಯುವುದು ಅನಿವಾರ್ಯ. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ.

ಕುಂಭ ರಾಶಿ:

ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕಛೇರಿಗೆ ನಿಯತ್ತಾಗಿ ಹೋಗಿ. ನಿಮ್ಮ ಯಾವ ವಿಚಾರವನ್ನು ಅವರು ಕೇಳರು. ಮನೆಯ ಕೆಲಸವನ್ನು ಎಲ್ಲರ ಸಹಾಯದಿಂದ ಬೇಗ ಮುಗಿಸುವಿರಿ. ಅತಿಯಾದ ನಿದ್ರೆಯಿಂದ ಜಾಡ್ಯ ಉಂಟಾಗಬಹುದು. ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು.

ಮೀನ ರಾಶಿ:

ಬಹುದಿನಗಳಿಂದ ಅಪೇಕ್ಷಿಸಿದ್ದ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗುವುದಿಲ್ಲ. ಯಾರನ್ನೂ ಒತ್ತಾಯದಿಂದ ಹಿಡಿದಿಡಲಾಗದು. ಕೆಲಸಕ್ಕೂ ಇನ್ನೊಬ್ಬರ ಮೇಲೆ ಅವಲಂಬಿಸಬೇಡಿ. ನಿಮ್ಮ ದುಡಿಮೆಯ ದಾರಿಯನ್ನು ಬಹಿರಂಗವಾದರೆ, ಇತರರು ಅಸೂಯೆ ಪಟ್ಟಾರು. ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿ ಭಡ್ತಿಗಾಗಿ ಪ್ರಯತ್ನಿಸುವಿರಿ. ಬೆರೆಯುವುದು ಕಷ್ಟವಾದೀತು.

ಇಂದಿನ ಪಂಚಾಂಗ: 

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ನಿಜ ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಅತಿಗಂಡ, ಕರಣ : ಕೌಲವ, ಸೂರ್ಯೋದಯ – 06 – 00 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:25 – 14:01, ಯಮಗಂಡ ಕಾಲ 07:36 – 09:12, ಗುಳಿಕ ಕಾಲ 10:49 – 12:25

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ