AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಪರ ಈ ಬಾರಿ ಒಂದೇ ಒಂದು ಪಂದ್ಯವಾಡದ 9 ಆಟಗಾರರು ಇವರೇ!

IPL 2026 RCB: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 24 ಆಟಗಾರರ ಬಲಿಷ್ಠ ಪಡೆಯನ್ನು ರೂಪಿಸಿದ್ದರು. ಈ 24 ಆಟಗಾರರಲ್ಲಿ ಕಣಕ್ಕಿಳಿದದ್ದು 15 ಮಂದಿ ಮಾತ್ರ. ಅಂದರೆ ಉಳಿದ 9 ಆಟಗಾರರು ಇಡೀ ಟೂರ್ನಿಯಲ್ಲಿ ಬೆಂಚ್ ಕಾದಿದ್ದಾರೆ. ಹೀಗೆ 16 ಪಂದ್ಯಗಳಲ್ಲೂ ಡಗೌಟ್​ನಲ್ಲಿ ಕಾಣಿಸಿಕೊಂಡ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಝಾಹಿರ್ ಯೂಸುಫ್
|

Updated on:Jun 02, 2026 | 9:24 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಸೀಸನ್​ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಚಂಡ ಪ್ರದರ್ಶನ ನೀಡಿದೆ. ಈ ಪ್ರಚಂಡ ಪ್ರದರ್ಶನದೊಂದಿಗೆ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಚಾಂಪಿಯನ್​ ಪಟ್ಟಕ್ಕಾಗಿ ಆರ್​ಸಿಬಿ ಪರ ಕಣಕ್ಕಿಳಿದ ಆಟಗಾರರ ಸಂಖ್ಯೆ 15..! (PC: IPL)

1 / 11
ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ 24 ಆಟಗಾರರಲ್ಲಿ 9 ಪ್ಲೇಯರ್ಸ್ ಒಂದೇ ಒಂದು ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗೆ ಒಂದು ಮ್ಯಾಚ್ ಆಡದೇ ಚಾಂಪಿಯನ್ ತಂಡದ ಭಾಗವಾದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ... (PC: IPL)

2 / 11
ಯಶ್ ದಯಾಳ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಡಗೈ ವೇಗಿ ಯಶ್ ದಯಾಳ್ ಅವರನ್ನು ಈ ಬಾರಿಯ ಐಪಿಎಲ್​ ಹರಾಜಿಗೂ ಮುನ್ನ 5 ಕೋಟಿ ರೂ.ಗೆ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ವೈಯುಕ್ತಿಕ ಕಾರಣಗಳಿಂದಾಗಿ ಅವರು ಟೂರ್ನಿಯಿಂದ ಹೊರಗುಳಿದಿದ್ದರು. ಇದಾಗ್ಯೂ ಆರ್​ಸಿಬಿ ಅವರನ್ನು ತಂಡದಿಂದ ಬಿಡುಗಡೆ ಮಾಡಿಲ್ಲ ಅಥವಾ ಬದಲಿ ಆಟಗಾರನನ್ನು ಆಯ್ಕೆ ಮಾಡಿಲ್ಲ ಎಂಬುದು ಉಲ್ಲೇಖಾರ್ಹ. ಅಂದರೆ ಅವರು ಈಗಲೂ ಆರ್​ಸಿಬಿ ತಂಡದ ಭಾಗವಾಗಿದ್ದಾರೆ. (PC: IPL)

3 / 11
ನುವಾನ್ ತುಷಾರ: ಶ್ರೀಲಂಕಾ ವೇಗಿ ನುವಾನ್ ತುಷಾರ ಅವರನ್ನು ಆರ್​ಸಿಬಿ 1.60 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದ್ದರು. ಆದರೆ ಫಿಟ್​ನೆಸ್ ಸಮಸ್ಯೆಯ ಕಾರಣ ಅವರು ಈ ಬಾರಿ ಆರ್​ಸಿಬಿ ತಂಡವನ್ನು ಕೂಡಿಕೊಂಡಿರಲಿಲ್ಲ. ಹೀಗಾಗಿ ಪ್ಲೇಆಫ್ ಪಂದ್ಯಕ್ಕೂ ಮುನ್ನ ಆರ್​ಸಿಬಿ ಇಂಗ್ಲೆಂಡ್ ವೇಗಿ ರಿಚರ್ಡ್ ಗ್ಲೀಸನ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದ್ದರು. (PC: IPL)

4 / 11
ಜೋರ್ಡನ್ ಕಾಕ್ಸ್: ಇಂಗ್ಲೆಂಡ್‌ನ ಈ ವಿಕೆಟ್‌ಕೀಪರ್ ಬ್ಯಾಟರ್ ಅನ್ನು ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ 75 ಲಕ್ಷ ರೂ. ನೀಡಿ ಖರೀದಿಸಿದ್ದರು. ಇತ್ತ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾದರೂ ಜೋರ್ಡನ್ ಕಾಕ್ಸ್​ಗೆ ಕನಿಷ್ಠ ಒಂದು ಪಂದ್ಯವಾಡಲೂ ಚಾನ್ಸ್ ಸಿಕ್ಕಿರಲಿಲ್ಲ. (PC: IPL)

5 / 11
ಸ್ವಪ್ನಿಲ್ ಸಿಂಗ್: ಈ ಬಾರಿ ಆರ್​ಸಿಬಿ ರಿಟೈನ್ ಮಾಡಿಕೊಂಡ ಆಟಗಾರರಲ್ಲಿ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಕೂಡ ಒಬ್ಬರು. 50 ಲಕ್ಷ ರೂ.ಗೆ ತಂಡದಲ್ಲಿದ್ದ ಅನುಭವಿ ಆಟಗಾರನಿಗೆ ಈ ಬಾರಿ ಒಂದೇ ಒಂದು ಮ್ಯಾಚ್​ನಲ್ಲಿ ಕಣಕ್ಕಿಳಿಯಲು ಅವಕಾಶ ಸಿಕ್ಕಿಲ್ಲ. (PC: IPL)

6 / 11
ಮಂಗೇಶ್ ಯಾದವ್: ಮಧ್ಯಪ್ರದೇಶದ ಈ ಪ್ರತಿಭಾವಂತ ಎಡಗೈ ವೇಗಿಯನ್ನು ಆರ್‌ಸಿಬಿ ಭಾರಿ ಪೈಪೋಟಿ ನಡೆಸಿ 5.20 ಕೋಟಿ ರೂ.ಗೆ ಖರೀದಿಸಿತ್ತು. ಇವರ ಮೇಲೆ ಭಾರಿ ನಿರೀಕ್ಷೆಯಿತ್ತಾದರೂ, ತಂಡದ ಬೌಲಿಂಗ್ ಕಾಂಬಿನೇಷನ್ ಚೆನ್ನಾಗಿದ್ದರಿಂದ ಇವರಿಗೆ ಒಂದೂ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. (PC: IPL)

7 / 11
ವಿಕ್ಕಿ ಓಸ್ತ್ವಾಲ್: ಭಾರತದ ಪರ ಅಂಡರ್-19 ವಿಶ್ವಕಪ್ ಆಡಿದ್ದ ಸ್ಪಿನ್ ಆಲ್​ರೌಂಡರ್ ವಿಕ್ಕಿ ಓಸ್ತ್ವಾಲ್ ಅವರನ್ನು ಈ ಬಾರಿ ಆರ್​ಸಿಬಿ 30 ಲಕ್ಷ ರೂ.ಗೆ ಖರೀದಿಸಿದ್ದರು. ಇದಾಗ್ಯೂ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗಿಲ್ಲ. (PC: IPL)

8 / 11
ಸಾತ್ವಿಕ್ ದೇಶ್ವಲ್: ದೇಶಿ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದ ಯುವ ಲೆಗ್-ಸ್ಪಿನ್ನರ್ ಸಾತ್ವಿಕ್ ದೇಶ್ವಲ್ ಅವರನ್ನು ಆರ್‌ಸಿಬಿ ಬ್ಯಾಕ್-ಅಪ್ ಸ್ಪಿನ್ನರ್ ಆಗಿ 30 ಲಕ್ಷ ರೂ.ಗೆ ಖರೀದಿಸಿದ್ದರು. ಆದರೆ ತಂಡದ ಸಮತೋಲನದಿಂದಾಗಿ ಇವರು ಇಡೀ ಸೀಸನ್ ಬೆಂಚ್ ಕಾಯಬೇಕಾಯಿತು. (PC: IPL)

9 / 11
ವಿಹಾನ್ ಮಲ್ಹೋತ್ರಾ: ಭಾರತದ ಅಂಡರ್-19 ತಂಡದ ಭರವಸೆಯ ಆಲ್-ರೌಂಡರ್ ವಿಹಾನ್ ಮಲ್ಹೋತ್ರಾ ಅವರನ್ನು ಆರ್​ಸಿಬಿ ಫ್ರಾಂಚೈಸಿ 30 ಲಕ್ಷ ರೂ.ಗೆ ಖರೀದಿಸಿದ್ದರು. ಭವಿಷ್ಯದ ಆಟಗಾರನಾಗಿ ಗುರುತಿಸಲ್ಪಟ್ಟಿರುವ ವಿಹಾನ್​ಗೆ ಈ ಬಾರಿ ಚೊಚ್ಚಲ ಐಪಿಎಲ್ ಪಂದ್ಯ ಆಡಲು ಅವಕಾಶ ಲಭಿಸಲಿಲ್ಲ. (PC: IPL)

10 / 11
ಕಾನಿಷ್ಕ್ ಚೌಹಾಣ್:  ಯುವ ಆಲ್-ರೌಂಡರ್ ಕನಿಷ್ಕ್ ಚೌಹಾಣ್ ಅವರನ್ನು ಕೂಡ ಆರ್‌ಸಿಬಿ 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿದ್ದರು. ಇದಾಗ್ಯೂ ಯುವ ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಚೊಚ್ಚಲ ಪಂದ್ಯವಾಡಲು ಚಾನ್ಸ್ ಸಿಕ್ಕಿಲ್ಲ. (PC: IPL)

11 / 11

Published On - 9:23 am, Tue, 2 June 26

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!

ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ

ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ

ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?

ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ

ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್

ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ