IPL 2026 Trade: ಒಂದೇ ದಿನ ಇಬ್ಬರು ಸ್ಟಾರ್ ಆಟಗಾರರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್‌

Updated on: Nov 13, 2025 | 10:17 PM

IPL 2026 Trade: ಐಪಿಎಲ್ 2026 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಟ್ರೇಡಿಂಗ್ ವಿಂಡೋ ಮೂಲಕ ದೊಡ್ಡ ಮಟ್ಟದ ಸಿದ್ಧತೆ ನಡೆಸಿದೆ. ಶಾರ್ದೂಲ್ ಠಾಕೂರ್ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಅವರನ್ನು ನಗದು ಒಪ್ಪಂದದ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ. ಯಾವುದೇ ಆಟಗಾರರನ್ನು ಬಿಡುಗಡೆ ಮಾಡದೆ ಈ ಪ್ರಮುಖ ಆಲ್‌ರೌಂಡರ್‌ಗಳನ್ನು ಪಡೆದಿರುವುದು ಮುಂಬೈಗೆ ಬಲ ತುಂಬಿದೆ. ಇದು ಮುಂಬರುವ ಸೀಸನ್‌ಗೆ ತಂಡದ ಗೆಲುವಿಗೆ ನಿರ್ಣಾಯಕವಾಗಬಲ್ಲದು.

1 / 6
ಐಪಿಎಲ್ 2026 ರ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದೆ. ಅದಕ್ಕೂ ಮೊದಲು, ಎಲ್ಲಾ ತಂಡಗಳು ನವೆಂಬರ್ 15 ರೊಳಗೆ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಬೇಕು. ಹೀಗಾಗಿ ಎಲ್ಲಾ ತಂಡಗಳು ಈಗಾಗಲೇ ಈ ಕೆಲಸದಲ್ಲಿ ನಿರತವಾಗಿವೆ. ಇದರ ನಡುವೆ ಟ್ರೇಡಿಂಗ್ ವಿಂಡೋ ಅಡಿಯಲ್ಲಿ ತಂಡಕ್ಕೆ ಇತರ ತಂಡಗಳಿಂದ ಆಟಗಾರರನ್ನೂ ಖರೀದಿಸುತ್ತಿವೆ.

2 / 6
ಅದರಂತೆ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಯಾಗಿರುವ ಮುಂಬೈ ಇಂಡಿಯನ್ಸ್ ಒಂದೇ ದಿನ ಇಬ್ಬರು ಆಟಗಾರರನ್ನು ಇತರ ತಂಡಗಳಿಂದ ಖರೀದಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ. ಲಕ್ನೋ ಸೂಪರ್ ಜೈಂಟ್ಸ್‌ನಿಂದ ಭಾರತದ ಅನುಭವಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಖರೀದಿ ಮಾಡಿದ್ದ ಮುಂಬೈ ತನ್ನ ತಂಡಕ್ಕೆ ಮತ್ತೊಬ್ಬ ಆಟಗಾರನನ್ನು ಸೇರಿಸಿಕೊಂಡಿದೆ.

3 / 6
ಐಪಿಎಲ್ 2026 ಕ್ಕೆ ಮುನ್ನ ಮುಂಬೈ ಇಂಡಿಯನ್ಸ್ ತಂಡವು ಟ್ರೇಡ್ ವಿಂಡೋದ ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ. ಶಾರ್ದೂಲ್ ಠಾಕೂರ್ ನಂತರ, ವೆಸ್ಟ್ ಇಂಡೀಸ್ ಆಲ್ ರೌಂಡರ್ ಶೆರ್ಫೇನ್ ರುದರ್ಫೋರ್ಡ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಗಮನಾರ್ಹ ಸಂಗತಿಯೆಂದರೆ ಈ ಟ್ರೇಡ್‌ಗಾಗಿ ಮುಂಬೈ ಯಾವುದೇ ಆಟಗಾರರನ್ನು ಬಿಡುಗಡೆ ಮಾಡಿಲ್ಲ. ಬದಲಿಗೆ ನಗದು ಒಪ್ಪಂದದ ಮೂಲಕ ಈ ಇಬ್ಬರನ್ನು ಖರೀದಿಸಿದೆ.

4 / 6
ವೆಸ್ಟ್ ಇಂಡೀಸ್​ನ ಸ್ಫೋಟಕ ಬ್ಯಾಟ್ಸ್​ಮನ್ ಶೆರ್ಫೇನ್ ರುದರ್ಫೋರ್ಡ್ ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್‌ ತಂಡದ ಭಾಗವಾಗಿದ್ದರು. ಇದೀಗ ಅವರು 2026 ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲು ಸಜ್ಜಾಗಿದ್ದಾರೆ. ಗುಜರಾತ್ ಟೈಟಾನ್ಸ್ 2.6 ಕೋಟಿಗೆ ಖರೀದಿಸಿರುವ ರುದರ್ಫೋರ್ಡ್, ಪ್ರಸ್ತುತ ಶುಲ್ಕದಲ್ಲೇ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

5 / 6
ಶೆರ್ಫೇನ್ ರುದರ್ಫೋರ್ಡ್ ಆರು ವರ್ಷಗಳ ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳುತ್ತಿರುವುದು ಗಮನಾರ್ಹ. 2020 ರಲ್ಲಿ ತಂಡದ ಭಾಗವಾಗಿದ್ದ ರುದರ್ಫೋರ್ಡ್​ಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಐಪಿಎಲ್‌ನಲ್ಲಿ 23 ಪಂದ್ಯಗಳನ್ನು ಆಡಿರುವ ಶೆರ್ಫೇನ್ ರುದರ್ಫೋರ್ಡ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ.

6 / 6
ಶೆರ್ಫೇನ್ ರುದರ್ಫೋರ್ಡ್​ಗಿಂತ ಮೊದಲು ಮುಂಬೈ ಇಂಡಿಯನ್ಸ್, ಶಾರ್ದೂಲ್ ಠಾಕೂರ್ ಅವರನ್ನು ಸಹ 2 ಕೋಟಿ ಖರ್ಚು ಮಾಡಿ ನಗದು ಒಪ್ಪಂದದಲ್ಲಿ ಖರೀದಿಸಿತು. ಕಳೆದ ಸೀಸನ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದ ಶಾರ್ದೂಲ್ 2010 ರಿಂದ 2012 ರವರೆಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದ ಶಾರ್ದೂಲ್​ಗೆ ಇದು ಮಹತ್ವದ ಅವಕಾಶವಾಗಿದೆ.