AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Irani Cup 2023: 30 ಫೋರ್, 3 ಸಿಕ್ಸ್: ಸ್ಪೋಟಕ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್

Madhya Pradesh vs Rest of India: ಶೇಷ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 2 ರನ್​ಗಳಿಸಿ ಮಯಾಂಕ್ ಅಗರ್ವಾಲ್ ಮೊದಲಿಗರಾಗಿ ಔಟಾದರು. ಇದಾಗ್ಯೂ ಮತ್ತೋರ್ವ ಆರಂಭಿಕ ಅಭಿಮನ್ಯು ಈಶ್ವರನ್ ಅತ್ಯುತ್ತಮ ಇನಿಂಗ್ಸ್ ಆಡಿದರು.

TV9 Web
| Edited By: |

Updated on: Mar 01, 2023 | 11:58 PM

Share
ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆಯುತ್ತಿರುವ ಇರಾನಿ ಕಪ್ ಪಂದ್ಯದಲ್ಲಿ ಯುವ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್ ಸ್ಪೋಟಕ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಮಧ್ಯಪ್ರದೇಶ್ ಹಾಗೂ ಶೇಷ ಭಾರತ ತಂಡಗಳ ನಡುವಣ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡರು.

1 / 7
ಅದರಂತೆ ಇನಿಂಗ್ಸ್ ಆರಂಭಿಸಿದ ಶೇಷ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 2 ರನ್​ಗಳಿಸಿ ಮಯಾಂಕ್ ಅಗರ್ವಾಲ್ ಮೊದಲಿಗರಾಗಿ ಔಟಾದರು. ಇದಾಗ್ಯೂ ಮತ್ತೋರ್ವ ಆರಂಭಿಕ ಅಭಿಮನ್ಯು ಈಶ್ವರನ್ ಅತ್ಯುತ್ತಮ ಇನಿಂಗ್ಸ್ ಆಡಿದರು.

2 / 7
2ನೇ ವಿಕೆಟ್​ಗೆ ಯಶಸ್ವಿ ಜೈಸ್ವಾಲ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಮನ್ಯು ತ್ರಿಶತಕದ ಜೊತೆಯಾಟವಾಡಿದರು. ಅಲ್ಲದೆ 154 ರನ್​ ಬಾರಿಸಿದ ಅಭಿಮನ್ಯು ಈಶ್ವರನ್ ಔಟಾಗುವ ಮುನ್ನ ದ್ವಿತೀಯ ವಿಕೆಟ್​ಗೆ 371 ರನ್​ಗಳ ಪಾಲುದಾರಿಕೆ ನೀಡಿದರು.

3 / 7
ಇತ್ತ ಅಭಿಮನ್ಯು ಈಶ್ವರನ್ ಔಟಾಗುತ್ತಿದ್ದಂತೆ ಅತ್ತ ಯಶಸ್ವಿ ಜೈಸ್ವಾಲ್ ಆರ್ಭಟ ಶುರುವಾಯಿತು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೈಸ್ವಾಲ್ 230 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಅಲ್ಲದೆ 259 ಎಸೆತಗಳನ್ನು ಎದುರಿಸಿ 30 ಫೋರ್ ಹಾಗೂ 3 ಭರ್ಜರಿ ಸಿಕ್ಸರ್​ನೊಂದಿಗೆ 213 ರನ್​ ಚಚ್ಚಿ ವಿಕೆಟ್ ಒಪ್ಪಿಸಿದರು.

4 / 7
ಯಶಸ್ವಿ ಜೈಸ್ವಾಲ್ ಅವರ ಈ ಭರ್ಜರಿ ಡಬಲ್ ಸೆಂಚುರಿ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಶೇಷ ಭಾರತ ತಂಡವು 3 ವಿಕೆಟ್ ನಷ್ಟಕ್ಕೆ 381 ರನ್​ ಕಲೆಹಾಕಿದೆ.

5 / 7
ಶೇಷ ಭಾರತ ತಂಡ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ಅಭಿಮನ್ಯು ಈಶ್ವರನ್ , ಯಶಸ್ವಿ ಜೈಸ್ವಾಲ್ , ಯಶ್ ಧುಲ್ , ಬಾಬಾ ಇಂದ್ರಜಿತ್ , ಮುಖೇಶ್ ಕುಮಾರ್ , ಉಪೇಂದ್ರ ಯಾದವ್ ( ವಿಕೆಟ್ ಕೀಪರ್ ) , ಪುಲ್ಕಿತ್ ನಾರಂಗ್ , ಸೌರಭ್ ಕುಮಾರ್ , ಅತಿತ್ ಶೇತ್ , ನವದೀಪ್ ಸೈನಿ.

6 / 7
ಮಧ್ಯಪ್ರದೇಶ್ ಪ್ಲೇಯಿಂಗ್ 11: ಹಿಮಾಂಶು ಮಂತ್ರಿ (ನಾಯಕ) , ಹರ್ಷ್ ಗಾವ್ಲಿ , ಅಮನ್ ಸೋಲಂಕಿ , ಶುಭಂ ಎಸ್ ಶರ್ಮಾ , ಅರ್ಹಮ್ ಅಕ್ವಿಲ್ , ಯಶ್ ದುಬೆ , ಸರನ್ಶ್ ಜೈನ್ , ಅಂಕಿತ್ ಕುಶ್ವಾ , ಕುಮಾರ್ ಕಾರ್ತಿಕೇಯ , ಅನುಭವ್ ಅಗರ್ವಾಲ್ , ಅವೇಶ್ ಖಾನ್.

7 / 7
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ

ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು

ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ

ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್

ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್