ಐಪಿಎಲ್ನಲ್ಲಿ ‘ದುರಾದೃಷ್ಟ’ದ ದಾಖಲೆ ಬರೆದ ಇಶಾನ್ ಕಿಶನ್
IPL 2026 SRH vs CSK: ಹೈದರಾಬಾದ್ನಲ್ಲಿ ನಡೆದ ಐಪಿಎಲ್ನ 27ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 194 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 184 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಎಸ್ಆರ್ಹೆಚ್ ತಂಡ 10 ರನ್ಗಳ ಜಯ ಸಾಧಿಸಿದೆ. ಈ ಗೆಲುವಿನ ನಡುವೆ ಇಶಾನ್ ಕಿಶನ್ ನತದೃಷ್ಟದ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
Updated on: Apr 19, 2026 | 2:16 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈವರೆಗೆ 73 ಹೆಚ್ಚು ನಾಯಕರುಗಳು ಕಣಕ್ಕಿಳಿದಿದ್ದಾರೆ. ಈ 73 ನಾಯಕರುಗಳ ಪೈಕಿ ನತದೃಷ್ಟದ ದಾಖಲೆ ಬರೆದಿರುವುದು ಇಶಾನ್ ಕಿಶನ್ (Ishan Kishan) ಮಾತ್ರ. ಅಂದರೆ ಐಪಿಎಲ್ ಇತಿಹಾಸದಲ್ಲೇ ಮೊದಲ ಆರು ಪಂದ್ಯಗಳಲ್ಲೂ ಟಾಸ್ ಸೋತ ಏಕೈಕ ಕ್ಯಾಪ್ಟನ್ ಎಂಬ ಅಪಕೀರ್ತಿಯೊಂದು ಇಶಾನ್ ಕಿಶನ್ ಪಾಲಾಗಿದೆ.

ಏಪ್ರಿಲ್ 18 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ನಾಯಕರಾಗಿ ತಮ್ಮ ಸತತ ಆರನೇ ಟಾಸ್ ಸೋಲುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಹೊಸದೊಂದು 'ದುರಾದೃಷ್ಟದ' ದಾಖಲೆ ಬರೆದಿದ್ದಾರೆ.

ಇದಕ್ಕೂ ಮುನ್ನ ಇಂತಹದೊಂದು ನತದೃಷ್ಟದ ದಾಖಲೆ ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಡೇವಿಡ್ ಮಿಲ್ಲರ್ ಹೆಸರಿನಲ್ಲಿತ್ತು. 2016 ರ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡದ ನಾಯಕರಾಗಿದ್ದ ಡೇವಿಡ್ ಮಿಲ್ಲರ್, ತಮ್ಮ ನಾಯಕತ್ವದ ಮೊದಲ 5 ಪಂದ್ಯಗಳಲ್ಲಿ ಸತತವಾಗಿ ಟಾಸ್ ಸೋತಿದ್ದರು.

ಇದೀಗ ಸನ್ರೈಸರ್ಸ್ ಹೈದರಾಬಾದ್ ಪರ ಹಂಗಾಮಿ ನಾಯಕನಾಗಿ ಕಣಕ್ಕಿಳಿಯುತ್ತಿರುವ ಇಶಾನ್ ಕಿಶನ್ ಸತತ 6 ಮ್ಯಾಚ್ಗಳಲ್ಲೂ ಟಾಸ್ ಸೋತಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಮೊದಲ ಆರು ಮ್ಯಾಚ್ಗಳಲ್ಲೂ ಟಾಸ್ ಸೋತ ಮೊದಲ ಕ್ಯಾಪ್ಟನ್ ಎಂಬ 'ದುರಾದೃಷ್ಟ'ದ ದಾಖಲೆ ಬರೆದಿದ್ದಾರೆ.

ಇನ್ನು ಇಶಾನ್ ಕಿಶನ್ 6 ಪಂದ್ಯಗಳಲ್ಲಿ ಟಾಸ್ ಸೋತರೂ ಸನ್ರೈಸರ್ಸ್ ಹೈದರಾಬಾದ್ ತಂಡವು ಮೂರು ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಹೀಗಾಗಿ ನತದೃಷ್ಟದ ನಡುವೆ ಇಶಾನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಈ ಗೆಲುವುಗಳೊಂದಿಗೆ ಇದೀಗ ಸನ್ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.




