AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kagiso Rabada: ರೋಹಿತ್ ಶರ್ಮಾರನ್ನು ಔಟ್ ಮಾಡಿಯೇ ದಾಖಲೆ ಬರೆದ ಕಗಿಸೊ ರಬಾಡ

Kagiso Rabada Record: 2015 ರಲ್ಲಿ ಸೌತ್ ಆಫ್ರಿಕಾ ಪರ ಪಾದಾರ್ಪಣೆ ಮಾಡಿದ್ದ ರಬಾಡ 61 ಟೆಸ್ಟ್ ಪಂದ್ಯಗಳಿಂದ 285 ವಿಕೆಟ್​ ಕಬಳಿಸಿದ್ದಾರೆ. ಹಾಗೆಯೇ 101 ಏಕದಿನ ಪಂದ್ಯಗಳಿಂದ 157 ವಿಕೆಟ್​, 56 ಟಿ20 ಪಂದ್ಯಗಳಿಂದ 58 ವಿಕೆಟ್ ಕಬಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 500+ ವಿಕೆಟ್​ ಪಡೆದಿರುವ ಬೌಲರ್​ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

TV9 Web
| Edited By: |

Updated on:Dec 27, 2023 | 1:18 PM

Share
ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೇವಲ 5 ರನ್​ಗಳಿಸಿ ಔಟಾಗಿದ್ದರು. ಕಗಿಸೊ ರಬಾಡ ಎಸೆದ 5ನೇ ಓವರ್​ನಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಹೊಡೆತಕ್ಕೆ ಯತ್ನಿಸಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದರು.

1 / 7
ಈ ವಿಕೆಟ್​ನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಎಂಬ ಹೆಗ್ಗಳಿಕೆಗೆ ಕಗಿಸೊ ರಬಾಡ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಟಿಮ್ ಸೌಥಿ ಹೆಸರಿನಲ್ಲಿತ್ತು.

2 / 7
ನ್ಯೂಝಿಲೆಂಡ್ ತಂಡದ ವೇಗಿ ಟಿಮ್ ಸೌಥಿ ರೋಹಿತ್ ಶರ್ಮಾ ಅವರನ್ನು ಒಟ್ಟು 12 ಬಾರಿ ಔಟ್ ಮಾಡಿ ಈ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಕಗಿಸೊ ರಬಾಡ ಅಗ್ರಸ್ಥಾನಕ್ಕೇರಿದ್ದಾರೆ.

3 / 7
ಕಗಿಸೊ ರಬಾಡ ಇದುವರೆಗೆ ರೋಹಿತ್ ಶರ್ಮಾ ಅವರನ್ನು ಒಟ್ಟು 13 ಬಾರಿ ಔಟ್ ಮಾಡಿದ್ದಾರೆ. ಈ ಮೂಲಕ ಹಿಟ್​ಮ್ಯಾನ್​ರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಎಂಬ ದಾಖಲೆಯನ್ನು ಕಗಿಸೊ ರಬಾಡ ತಮ್ಮದಾಗಿಸಿಕೊಂಡಿದ್ದಾರೆ.

4 / 7
ಇನ್ನು ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆ ಜೇಮ್ಸ್ ಅ್ಯಂಡರ್ಸನ್, ಮೊಯೀನ್ ಅಲಿ ಹಾಗೂ ಟಿಮ್ ಸೌಥಿ ಹೆಸರಿನಲ್ಲಿದೆ. ಈ ಮೂವರು ಬೌಲರ್​ಗಳು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯನ್ನು 10 ಬಾರಿ ಔಟ್ ಮಾಡಿದ್ದಾರೆ.

5 / 7
ಈ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದ ರಬಾಡ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್​ಗಳಾದ ರೋಹಿತ್ ಶರ್ಮಾ (5), ಶ್ರೇಯಸ್ ಅಯ್ಯರ್ (31), ವಿರಾಟ್ ಕೊಹ್ಲಿ (38) ಯನ್ನು ಪೆವಿಲಿಯನ್​ಗಟ್ಟಿದ್ದರು. ಇದಾದ ಬಳಿಕ ಅಶ್ವಿನ್ (8) ಹಾಗೂ ಶಾರ್ದೂಲ್ ಠಾಕೂರ್ (24) ವಿಕೆಟ್ ಪಡೆಯುವ ಮೂಲಕ 5 ವಿಕೆಟ್​ಗಳ ಸಾಧನೆ ಮಾಡಿದ್ದಾರೆ.

6 / 7
ಭಾರತದ ವಿರುದ್ಧ ಕೇವಲ 44 ರನ್ ನೀಡಿ 5 ವಿಕೆಟ್​ ಕಬಳಿಸುವುದರೊಂದಿಗೆ ಕಗಿಸೊ ರಬಾಡ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಸೌತ್ ಆಫ್ರಿಕಾದ 7ನೇ ಬೌಲರ್ ಎನಿಸಿಕೊಂಡಿದ್ದಾರೆ.

7 / 7

Published On - 1:17 pm, Wed, 27 December 23

Follow Us
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ

ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್

ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ

ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’

ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ

ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್

ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು