AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಕೆಕೆಆರ್ ತಂಡದಲ್ಲಿ ರಿಂಕು ಸಿಂಗ್​ಗೆ ಮಹತ್ವದ ಜವಾಬ್ದಾರಿ

Rinku Singh Named KKR Vice-Captain for IPL 2026:ಐಪಿಎಲ್ 2026 ಕ್ಕೂ ಮುನ್ನ ರಿಂಕು ಸಿಂಗ್ ಅವರನ್ನು ಕೆಕೆಆರ್ ಉಪನಾಯಕರನ್ನಾಗಿ ನೇಮಿಸಿದೆ. 2018 ರಿಂದ ತಂಡದಲ್ಲಿದ್ದ ಅವರು ಕಳಪೆ ಪ್ರದರ್ಶನದಿಂದ ಹೊರಬಂದು ತಂಡದ ಫಿನಿಷರ್ ಆದರು. ಇತ್ತೀಚೆಗೆ ತಂದೆಯನ್ನು ಕಳೆದುಕೊಂಡ ಮತ್ತು ಟಿ20 ವಿಶ್ವಕಪ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿದ್ದರೂ, ಕೆಕೆಆರ್ ಅವರ ಮೇಲೆ ವಿಶ್ವಾಸ ಇಟ್ಟಿದೆ. ಈ ಹೊಸ ಜವಾಬ್ದಾರಿ ಅವರಿಗೆ ಒತ್ತಡ ತರಲಿದೆ.

ಪೃಥ್ವಿಶಂಕರ
|

Updated on: Mar 25, 2026 | 9:32 PM

Share
2026 ರ ಐಪಿಎಲ್ ಆರಂಭಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಿಂಕು ಸಿಂಗ್ ಅವರನ್ನು ತಂಡದ ಉಪನಾಯಕನನ್ನಾಗಿ ನೇಮಿಸಿದೆ. ಇದು ಕೆಕೆಆರ್ ಜೊತೆಗಿನ ರಿಂಕು ಸಿಂಗ್ ಅವರ ಎಂಟನೇ ಸೀಸನ್ ಆಗಿದ್ದು, ಈಗ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

1 / 5
2018 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ರಿಂಕು ಸಿಂಗ್ ಆ ಆವೃತ್ತಿಯಲ್ಲಿ ಕೇವಲ 29 ರನ್ ಗಳಿಸಿದರು. ಮುಂದಿನ ಆವೃತ್ತಿಯಲ್ಲಿ ರಿಂಕು ಕಲೆಹಾಕಿದ್ದು, ಕೇವಲ 37 ರನ್ ಗಳಿಸಿದರು. ಅದರ ನಂತರದ ಆವೃತ್ತಿಯಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದ್ದ ಅವರು, 11 ರನ್ ಗಳಿಸಿದ್ದರು. ಆದರೆ ಇಂದು ಕೋಲ್ಕತ್ತಾ ತಂಡದಲ್ಲಿ ಅತ್ಯುತ್ತಮ ಫಿನಿಷರ್ ಆಗಿದ್ದು, ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

2 / 5
ರಿಂಕು ಸಿಂಗ್ ಐಪಿಎಲ್‌ನಲ್ಲಿ ಇದುವರೆಗೆ 51 ಇನ್ನಿಂಗ್ಸ್‌ಗಳನ್ನಾಡಿದ್ದು, 1099 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 30.52 ಆಗಿದ್ದು, ಅವರ ಸ್ಟ್ರೈಕ್ ರೇಟ್ 145 ಕ್ಕಿಂತ ಹೆಚ್ಚಾಗಿದೆ. ರಿಂಕು ಇದುವರೆಗೆ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದು, ಐಪಿಎಲ್‌ನಲ್ಲಿ 56 ಸಿಕ್ಸರ್‌ಗಳು ಮತ್ತು 87 ಬೌಂಡರಿಗಳನ್ನು ಬಾರಿಸಿದ್ದಾರೆ. ದೀರ್ಘಕಾಲದಿಂದ ಕೆಕೆಆರ್‌ ತಂಡದಲಿರುವ ರಿಂಕು ಸಿಂಗ್​ಗೆ ಕೆಕೆಆರ್ ಇಂತಹ ಮಹತ್ವದ ಜವಾಬ್ದಾರಿಯನ್ನು ವಹಿಸಿದೆ.

3 / 5
ರಿಂಕು ಸಿಂಗ್ ಕಠಿಣ ಸಮಯವನ್ನು ಎದುರಿಸುತ್ತಿರುವ ಸಮಯದಲ್ಲಿ ಅವರನ್ನು ಕೆಕೆಆರ್ ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ. ಅವರು ಇತ್ತೀಚೆಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ತಮ್ಮ ತಂದೆಯನ್ನು ಕಳೆದುಕೊಂಡರು. ಇದಲ್ಲದೆ, ಅವರು 2026 ರ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ, ಆಡಿದ ಐದು ಪಂದ್ಯಗಳಲ್ಲಿ ಕೇವಲ 23 ರನ್ ಗಳಿಸಿದ್ದರು.

4 / 5
ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ನಂತರ, ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಯಿತು. ಇದರಿಂದ ಅವರು ವಿಶ್ವಕಪ್ ಫೈನಲ್‌ನಲ್ಲಿಯೂ ಆಡಲಿಲ್ಲ. ರಿಂಕು ಸಿಂಗ್ ಪ್ರಸ್ತುತ ಫಾರ್ಮ್‌ನಲ್ಲಿಲ್ಲ, ಆದರೆ ಕೋಲ್ಕತ್ತಾ ಅವರ ಮೇಲೆ ವಿಶ್ವಾಸವನ್ನು ತೋರಿಸಿದೆ. ಆದ್ದರಿಂದ, ಈ ಜವಾಬ್ದಾರಿಯನ್ನು ಹೊತ್ತುಕೊಂಡು ಉತ್ತಮ ಪ್ರದರ್ಶನ ನೀಡುವ ಒತ್ತಡ ಅವರ ಮೇಲಿರುತ್ತದೆ.

5 / 5
Follow Us