ಪಾಕಿಸ್ತಾನ್ ಸೂಪರ್ ಲೀಗ್ನಿಂದ ಮೂವರು ಐಪಿಎಲ್ ಆಟಗಾರರು ಬ್ಯಾನ್..!
IPL 2026 vs PSL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅವಕಾಶ ವಂಚಿತರಾಗಿದ್ದ ಹಲವು ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಕಳೆದ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಡೆವೊನ್ ಕಾನ್ವೆ, ಈ ಹಿಂದೆ ಎಸ್ಆರ್ಹೆಚ್ ತಂಡವನ್ನು ಮುನ್ನಡೆಸಿದ್ದ ಡೇವಿಡ್ ವಾರ್ನರ್, ಹಾಗೆಯೇ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್, ಆರೋನ್ ಹಾರ್ಡಿ ಸೇರಿದಂತೆ ಹಲವು ಆಟಗಾರರು ಈ ಬಾರಿ ಪಿಎಸ್ಎಲ್ನಲ್ಲಿ ಕಣಕ್ಕಿಳಿದಿದ್ದಾರೆ.
Updated on: Apr 21, 2026 | 11:58 AM

ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಜೊತೆ ಪಾಕಿಸ್ತಾನ್ ಸೂಪರ್ ಲೀಗ್ನ (PSL) ಪೈಪೋಟಿ ಮುಂದುವರೆದಿದೆ. ಆದರೆ ಈ ಪೈಪೋಟಿ ಕಂಡು ಬರುತ್ತಿರುವುದು ಆಟಗಾರರ ಬ್ಯಾನ್ ವಿಷಯದಲ್ಲಿ. ಅಂದರೆ ಪಿಎಸ್ಎಲ್ಗೆ ಕೈ ಕೊಟ್ಟು ಐಪಿಎಲ್ ಸೇರುವ ಆಟಗಾರರನ್ನು ಪಾಕಿಸ್ತಾನ್ ಸೂಪರ್ ಲೀಗ್ನಿಂದ ಬ್ಯಾನ್ ಮಾಡಲಾಗುತ್ತಿದೆ.

ಹೀಗೆ ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹೊರಗುಳಿದು ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿಕೊಂಡ ಮೂವರು ಆಟಗಾರರ ಮೇಲೆ ನಿಷೇಧ ಹೇರಲಾಗಿದೆ. ಅದರಂತೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನಿಂದ ನಿಷೇಧಕ್ಕೆ ಒಳಗಾದ ಮೂವರು ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಬ್ಲೆಸಿಂಗ್ ಮುಝರಬಾನಿ: ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ಗೆ ಆಯ್ಕೆಯಾಗಿದ್ದರು. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಇಸ್ಲಾಮಾಬಾದ್ ಯುನೈಟೆಡ್ ತಂಡದೊಂದಿಗಿನ ಒಪ್ಪಂದ ಮುರಿದು ಅವರು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಸೇರಿಕೊಂಡಿದ್ದರು. ಹೀಗಾಗಿ ಬ್ಲೆಸಿಂಗ್ ಮುಝರಬಾನಿಯನ್ನು ಪಾಕಿಸ್ತಾನ್ ಸೂಪರ್ ಲೀಗ್ನಿಂದ 2 ವರ್ಷಗಳ ಕಾಲ ಬ್ಯಾನ್ ಮಾಡಲಾಗಿದೆ.

ದಸುನ್ ಶಾನಕ: ಶ್ರೀಲಂಕಾ ತಂಡದ ಸ್ಫೋಟಕ ದಾಂಡಿಗ ದಸುನ್ ಶಾನಕ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಲಾಹೋರ್ ಖಲಂದರ್ಸ್ ತಂಡದ ಪರ ಕಣಕ್ಕಿಳಿಯಬೇಕಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬದಲಿ ಆಟಗಾರನಾಗಿ ಆಯ್ಕೆಯಾದ ಬೆನ್ನಲ್ಲೇ ಶಾನಕ ಪಿಎಸ್ಎಲ್ನಿಂದ ಹಿಂದೆ ಸರಿದಿದ್ದರು. ಹೀಗಾಗಿ ಅವರ ಮೇಲೂ ಪಿಸಿಬಿ ಒಂದು ವರ್ಷದ ನಿಷೇಧ ಹೇರಿದೆ.

ಕಾರ್ಬಿನ್ ಬಾಷ್: ಸೌತ್ ಆಫ್ರಿಕಾದ ಆಲ್ರೌಂಡರ್ ಕಾರ್ಬಿನ್ ಬಾಷ್ ಕಳೆದ ವರ್ಷ ಪಾಕಿಸ್ತಾನ್ ಸೂಪರ್ ಲೀಗ್ಗೆ ಆಯ್ಕೆಯಾಗಿದ್ದರು. ಆದರೆ ಇತ್ತ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಬದಲಿ ಆಟಗಾರನಾಗಿ ಚಾನ್ಸ್ ಸಿಗುತ್ತಿದ್ದಂತೆ ಅವರು ಪೆಶಾವರ್ ಝಲ್ಮಿ ತಂಡಕ್ಕೆ ಕೈಕೊಟ್ಟಿದ್ದರು. ಹೀಗಾಗಿ ಕಾರ್ಬಿನ್ ಬಾಷ್ ಅವರನ್ನು ಸಹ ಪಾಕಿಸ್ತಾನ್ ಸೂಪರ್ ಲೀಗ್ನಿಂದ ಒಂದು ವರ್ಷ ಬ್ಯಾನ್ ಮಾಡಿದ್ದಾರೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




