AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Records: ಧೋನಿ ಬೆಸ್ಟ್ ಫಿನಿಶರ್ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ

IPL 2023 Kannada: ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಓವರ್​ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿ ಈ ಕೆಳಗಿನಂತಿದೆ.

TV9 Web
| Edited By: |

Updated on: Apr 05, 2023 | 2:30 PM

Share
IPL 2023: ಕ್ರಿಕೆಟ್ ಅಂಗಳದ ಅತ್ಯುತ್ತಮ ಫಿನಿಶರ್ ಯಾರು ಎಂಬ ಪ್ರಶ್ನೆಗೆ ಥಟ್ಟನೆ ಸಿಗುವ ಉತ್ತರ ಮಹೇಂದ್ರ ಸಿಂಗ್ ಧೋನಿ. ಅದು ಅಂದಿಗೂ ಹಾಗೂ ಇಂದಿಗೂ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಚೆಪಾಕ್​ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 20ನೇ ಓವರ್​ನಲ್ಲಿ ಕಣಕ್ಕಿಳಿದ ಧೋನಿ 2 ಭರ್ಜರಿ ಸಿಕ್ಸ್ ಸಿಡಿಸಿದ್ದರು.

1 / 9
ಈ 2 ಸಿಕ್ಸ್​ನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊತ್ತವು 217 ಕ್ಕೆ ಬಂದು ನಿಂತಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 205 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಇದರೊಂದಿಗೆ ಸಿಎಸ್​ಕೆ ತಂಡವು 12 ರನ್​ಗಳ ರೋಚಕ ಜಯ ಸಾಧಿಸಿತ್ತು. ಕೊನೆಯ ಓವರ್​ನಲ್ಲಿ ಧೋನಿ ಸಿಡಿಸಿದ 2 ಸಿಕ್ಸ್​ಗಳ ಪರಿಣಾಮ ಸಿಎಸ್​ಕೆ ತಂಡಕ್ಕೆ ರೋಚಕ ಗೆಲುವು ಒಲಿಯಿತು ಎಂದರೆ ತಪ್ಪಾಗಲಾರದು.

2 / 9
ಅಂದಹಾಗೆ ಧೋನಿ ಕೊನೆಯ ಓವರ್​ನಲ್ಲಿ ಸಿಕ್ಸ್ ಸಿಡಿಸುತ್ತಿರುವುದು ಇದೇ ಮೊದಲೇನಲ್ಲ. ಏಕೆಂದರೆ ಐಪಿಎಲ್​ ಇತಿಹಾಸದಲ್ಲೇ 20ನೇ ಓವರ್​ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಕೂಡ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಐಪಿಎಲ್ ಟೂರ್ನಿಯ 20ನೇ ಓವರ್​ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್​ಗಳ ಪಟ್ಟಿ ಈ ಕೆಳಗಿನಂತಿದೆ.

3 / 9
1- ಮಹೇಂದ್ರ ಸಿಂಗ್ ಧೋನಿ: ಸಿಎಸ್​ಕೆ ತಂಡದ ನಾಯಕ ಧೋನಿ ಐಪಿಎಲ್​ನಲ್ಲಿ 20 ಓವರ್​ನಲ್ಲಿ ಇದುವರೆಗೆ 277 ಎಸೆತಗಳನ್ನು ಎದುರಿಸಿ 679 ರನ್​ ಕಲೆಹಾಕಿದ್ದದ್ದಾರೆ. ಈ ವೇಳೆ ಒಟ್ಟು 55 ಸಿಕ್ಸ್ ಸಿಡಿಸಿರುವುದು ವಿಶೇಷ. ಅಂದರೆ ಐಪಿಎಲ್ ಇತಿಹಾಸದಲ್ಲೇ 20ನೇ ಓವರ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿ ಧೋನಿ ಇತಿಹಾಸ ನಿರ್ಮಿಸಿದ್ದಾರೆ.

4 / 9
2- ಕೀರನ್ ಪೊಲಾರ್ಡ್: ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಕೀರನ್ ಪೊಲಾರ್ಡ್ 62 ಇನಿಂಗ್ಸ್​ಗಳಲ್ಲಿ 20ನೇ ಓವರ್​ನಲ್ಲಿ ಬ್ಯಾಟ್ ಮಾಡಿದ್ದರು. ಈ ವೇಳೆ 33 ಸಿಕ್ಸ್​ ಸಿಡಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

5 / 9
3- ರವೀಂದ್ರ ಜಡೇಜಾ: ಸಿಎಸ್​ಕೆ ತಂಡದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ 62 ಇನಿಂಗ್ಸ್​ನಲ್ಲಿ 20ನೇ ಓವರ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಜಡ್ಡು ಬ್ಯಾಟ್​ನಿಂದ 26 ಸಿಕ್ಸ್​ಗಳು ಮೂಡಿಬಂದಿವೆ.

6 / 9
4- ಹಾರ್ದಿಕ್ ಪಾಂಡ್ಯ: ಪ್ರಸ್ತುತ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಇದುವರೆಗೆ 36 ಬಾರಿ 20ನೇ ಓವರ್​ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ 25 ಸಿಕ್ಸ್​ಗಳನ್ನು ಬಾರಿಸಿದ್ದಾರೆ.

7 / 9
5- ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 20ನೇ ಓವರ್​ನಲ್ಲಿ 27 ಬಾರಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 23 ಸಿಕ್ಸ್​ಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

8 / 9
ಅಂದರೆ ಐಪಿಎಲ್​ ಇತಿಹಾಸದಲ್ಲಿ ಧೋನಿಯನ್ನು ಹೊರತುಪಡಿಸಿದರೆ ಬೇರೆ ಯಾವುದೇ ಬ್ಯಾಟರ್ 20ನೇ ಓವರ್​ನಲ್ಲಿ ಬ್ಯಾಟ್ ಬೀಸಿ​ 50 ಕ್ಕಿಂತ ಹೆಚ್ಚಿನ ಸಿಕ್ಸ್ ಬಾರಿಸಿಲ್ಲ. ಇದುವೇ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಅಂಗಳದ ಬೆಸ್ಟ್ ಫಿನಿಶರ್ ಎಂಬುದಕ್ಕೆ ಸಾಕ್ಷಿ.

9 / 9
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್

ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!

ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ