AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್ ಕ್ರಿಕೆಟ್​ನಲ್ಲಿ ಮುಶ್ಫಿಕುರ್ ರಹೀಮ್ ಚಾರಿತ್ರಿಕ ಸಾಧನೆ!

Mushfiqur Rahim Historical Achievement: ಟೆಸ್ಟ್ ಕ್ರಿಕೆಟ್ ಎಂಬುದು ಕೇವಲ ಕೌಶಲದ ಆಟವಲ್ಲ, ಅದು ಆಟಗಾರನ ದೈಹಿಕ ಫಿಟ್ನೆಸ್ ಮತ್ತು ಮಾನಸಿಕ ದೃಢತೆಗೆ ಒರೆಗಲ್ಲು. ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ವೇಗದ ಯುಗದಲ್ಲಿ, ಒಬ್ಬ ಆಟಗಾರ ದಶಕಗಳ ಕಾಲ ತನ್ನ ಫಾರ್ಮ್ ಕಾಯ್ದುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವುದು ಒಂದು ಅದ್ಭುತ ಸಾಧನೆ.

ಝಾಹಿರ್ ಯೂಸುಫ್
|

Updated on: May 09, 2026 | 10:53 AM

Share
ಟೆಸ್ಟ್ ಕ್ರಿಕೆಟ್ ಅಂದರೆ ಅದು ಕೇವಲ ಆಟವಲ್ಲ, ಅದೊಂದು ತಾಳ್ಮೆಯ ಪರೀಕ್ಷೆ. ಈ ಕಠಿಣ ಮಾದರಿಯಲ್ಲಿ ದಶಕಗಳ ಕಾಲ ತನ್ನ ಫಾರ್ಮ್ ಮತ್ತು ಫಿಟ್ನೆಸ್ ಕಾಯ್ದುಕೊಳ್ಳುವುದು ಯಾವುದೇ ಆಟಗಾರನಿಗಾದರೂ ಸವಾಲಿನ ಕೆಲಸ. ಇಂತಹ ಸವಾಲನ್ನು ಮೆಟ್ಟಿ ನಿಂತು, ಸತತ ಎರಡು ದಶಕಗಳ ಕಾಲ ಕ್ರಿಕೆಟ್ ಮೈದಾನದಲ್ಲಿ ಅಧಿಪತ್ಯ ಸಾಧಿಸಿರುವ ಬಾಂಗ್ಲಾದೇಶದ ಅನುಭವಿ ಬ್ಯಾಟರ್ ಮುಶ್ಫಿಕರ್ ರಹೀಮ್ (Mushfiqur Rahim) ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. (PC: Google)

1 / 6
ಮೇ 8 ರಿಂದ ಶುರುವಾಗಿರುವ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮುಶ್ಫಿಕರ್ ರಹೀಮ್ ಸುದೀರ್ಘಾವಧಿ ಟೆಸ್ಟ್ ಕ್ರಿಕೆಟ್​ ಆಡಿದ ಏಷ್ಯಾದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಅದು ಕೂಡ ಇಮ್ರಾನ್ ಖಾನ್ ಅವರ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ. (PC: Google)

2 / 6
ಪಾಕಿಸ್ತಾನ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ 20 ವರ್ಷ, 218 ದಿನಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದೀರ್ಘಾವಧಿ ಆಡಿದ ಏಷ್ಯಾದ ಮೊದಲ ಆಟಗಾರ ಎನಿಸಿಕೊಂಡಿದ್ದರು. ಈ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಮುರಿದಿದ್ದರು. (PC: Google)

3 / 6
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 24 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಏಷ್ಯನ್ ಕ್ರಿಕೆಟರುಗಳಲ್ಲಿ ಸುದೀರ್ಘಾವಧಿ ಟೆಸ್ಟ್ ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಮುಶ್ಫಿಕುರ್ ರಹೀಮ್ ದ್ವಿತೀಯ ಸ್ಥಾನಕ್ಕೇರಿದ್ದಾರೆ. (PC: Google)

4 / 6
2005ರ ಮೇ 26ರಂದು ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಕೇವಲ 17ನೇ ವಯಸ್ಸಿನಲ್ಲಿ ಮುಶ್ಫಿಕರ್ ರಹೀಮ್ ತಮ್ಮ ಮೊದಲ ಟೆಸ್ಟ್ ಆಡಿದ್ದರು. ಈ ಆರಂಭ ಇದೀಗ ಪಾಕಿಸ್ತಾನ್ ವಿರುದ್ಧದ ಸರಣಿಯೊಂದಿಗೆ ಮುಂದುವರೆದಿದೆ. ಈ ಮೂಲಕ 20 ವರ್ಷ, 348 ದಿನಗಳ ಸುದೀರ್ಘ ಟೆಸ್ಟ್ ಕೆರಿಯರ್ ಹೊಂದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಸುದೀರ್ಘಾವಧಿ ವೃತ್ತಿಜೀವನ ಹೊಂದಿದ ಏಷ್ಯಾದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. (PC: Google)

5 / 6
ಇನ್ನು ವಿಶ್ವ ಕ್ರಿಕೆಟ್​ನಲ್ಲಿ ಸುದೀರ್ಘಾವಧಿ ಟೆಸ್ಟ್ ಕೆರಿಯರ್ ಹೊಂದಿದ್ದ ವಿಶ್ವ ದಾಖಲೆ ವಿಲ್‌ಫ್ರೆಡ್ ರೋಡ್ಸ್ ಹೆಸರಿನಲ್ಲಿದೆ. 1899 ರಲ್ಲಿ ಇಂಗ್ಲೆಂಡ್ ಪರ ಕಣಕ್ಕಿಳಿಯುವ ಮೂಲಕ ಟೆಸ್ಟ್ ವೃತ್ತಿಜೀವನ ಆರಂಭಿಸಿದ್ದ ವಿಲ್​ಫ್ರೆಂಡ್ ರೋಡ್ಸ್ 1930 ರಲ್ಲಿ ನಿವೃತ್ತಿ ಘೋಷಿಸಿದ್ದರು. ಅಂದರೆ ಬರೋಬ್ಬರಿ 30 ವರ್ಷ, 315 ದಿನಗಳ ಕಾಲ ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ದರು. (PC: Google)

6 / 6
Follow Us
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ

ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ

ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ

ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್

ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!

ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು

ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!

ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?

ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ