AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravindra Jadeja: ಪಂಟರ್ ಇಸ್ ಬ್ಯಾಕ್: ಜಡೇಜಾ ಸ್ಪಿನ್​ ಮೋಡಿಗೆ ಎದುರಾಳಿ ತಂಡ ತತ್ತರ

Ravindra Jadeja: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡವು 324 ರನ್​ ಪೇರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಸೌರಾಷ್ಟ್ರ ತಂಡವು 190 ರನ್​ಗಳಿಗೆ ಆಲೌಟ್ ಆಗಿತ್ತು.

TV9 Web
| Edited By: |

Updated on: Jan 26, 2023 | 10:58 PM

Share
ಒಂದೆಡೆ ಟೀಮ್ ಇಂಡಿಯಾದಲ್ಲಿ ಯುವ ಆಟಗಾರರ ಅಬ್ಬರ...ಮತ್ತೊಂದೆಡೆ ಗಾಯಗೊಂಡು ತಂಡದಿಂದ ಹೊರಗುಳಿದಿರುವ ಸ್ಟಾರ್ ಆಲ್​ರೌಂಡರ್​. ಹೀಗಾಗಿಯೇ ರವೀಂದ್ರ ಜಡೇಜಾ ಅವರ ಕಂಬ್ಯಾಕ್ ಅನ್ನು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈ ಕಾತುರಕ್ಕೆ ಕಿಚ್ಚು ಹಚ್ಚುವಂತೆ ಬಿಸಿಸಿಐ ಜಡೇಜಾ ಅವರಿಗೆ ಫಿಟ್​ನೆಸ್ ಸಾಬೀತುಪಡಿಸಲು ರಣಜಿ ಟೂರ್ನಿ ಆಡುವಂತೆ ಸೂಚಿಸಿದ್ದರು.

1 / 6
ಅದರಂತೆ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಸೌರಾಷ್ಟ್ರ ಪರ ಕಣಕ್ಕಿಳಿದಿದ್ದರು. ಆದರೆ ಮೊದಲ ಇನಿಂಗ್ಸ್​ನಲ್ಲಿ ಜಡ್ಡು ಕಲೆಹಾಕಿದ್ದು ಕೇವಲ 15 ರನ್​ ಮಾತ್ರ. ಇನ್ನು ಬೌಲಿಂಗ್​ನಲ್ಲೂ ಮಿಂಚುವಲ್ಲಿ ವಿಫಲರಾಗಿದ್ದರು. 24 ಓವರ್​ ಎಸೆದಿದ್ದ ಜಡೇಜಾ ಪಡೆದಿದ್ದು ಕೇವಲ 1 ವಿಕೆಟ್ ಮಾತ್ರ.

2 / 6
ಆದರೆ 2ನೇ ಇನಿಂಗ್ಸ್ ವೇಳೆಗೆ ರವೀಂದ್ರ ಜಡೇಜಾ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ಪಂಟರ್ ಸ್ಪಿನ್ನರ್ ಆಗಿ ಎಂಬುದೇ ವಿಶೇಷ. ಹೌದು, ಮೊದಲ ಇನಿಂಗ್ಸ್​ನ ಮುಕ್ತಾಯದ ವೇಳೆ ಕೇಳಿ ಬಂದ ಟೀಕೆಗೆ ಜಡ್ಡು 2ನೇ ಇನಿಂಗ್ಸ್​ನಲ್ಲೇ ಉತ್ತರ ನೀಡಿದ್ದಾರೆ.

3 / 6
ತಮಿಳುನಾಡು ತಂಡದ 2ನೇ ಇನಿಂಗ್ಸ್​ನಲ್ಲಿ 17.1 ಓವರ್ ಎಸೆದ ಜಡೇಜಾ ನೀಡಿದ್ದು ಕೇವಲ 53 ರನ್​ಗಳು. ಅಷ್ಟರಲ್ಲಾಗಲೇ 7 ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಈ ಮೂಲಕ ತಮಿಳುನಾಡು ತಂಡವನ್ನು ಕೇವಲ 130 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಜಡ್ಡು ಪ್ರಮುಖ ಪಾತ್ರವಹಿಸಿದ್ದಾರೆ.

4 / 6
ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ ಕಂಬ್ಯಾಕ್ ಮಾಡುವುದು ಖಚಿತವಾಗಿದೆ. ಏಕೆಂದರೆ ಟೀಮ್ ಇಂಡಿಯಾ ಅತ್ಯುತ್ತಮ ಸ್ಪಿನ್ ಆಲ್​ರೌಂಡರ್​ ಅನ್ನು ಎದುರು ನೋಡುತ್ತಿದೆ. ಇದೀಗ 6 ತಿಂಗಳ ಬಳಿಕ ಕಣಕ್ಕಿಳಿದರೂ ಜಡೇಜಾ ತಮ್ಮ ಹಳೆಯ ಚಾರ್ಮ್​ ಅನ್ನು ಉಳಿಸಿಕೊಂಡಿರುವುದು ಸ್ಪಷ್ಟವಾಗಿದೆ. ಹೀಗಾಗಿಯೇ ಆಸೀಸ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಜಡೇಜಾ ಕಣಕ್ಕಿಳಿಯುವುದು ಕನ್ಫರ್ಮ್​ ಎನ್ನಬಹುದು.

5 / 6
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡವು 324 ರನ್​ ಪೇರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಸೌರಾಷ್ಟ್ರ ತಂಡವು 190 ರನ್​ಗಳಿಗೆ ಆಲೌಟ್ ಆಗಿತ್ತು. ಆದರೆ 2ನೇ ಇನಿಂಗ್ಸ್​ನಲ್ಲಿ ಜಡೇಜಾ ತೋರಿಸಿದ ಸ್ಪಿನ್​ ಮೋಡಿಗೆ ತರಗೆಲೆಯಂತೆ ಉದುರಿದ ತಮಿಳುನಾಡು ತಂಡ ಕೇವಲ 133 ರನ್​ಗಳಿಗೆ ಸರ್ವಪತನ ಕಂಡಿದೆ. ಇದೀಗ 2 ದಿನದಾಟದಲ್ಲಿ ಸೌರಾಷ್ಟ ತಂಡಕ್ಕೆ ಗೆಲ್ಲಲು ಕೇವಲ 262 ರನ್​ಗಳ ಗುರಿಯಿದೆ. ಇತ್ತ ತಂಡದಲ್ಲಿ ರವೀಂದ್ರ ಜಡೇಜಾರಂತಹ ಅನುಭವಿ ಇರುವುದರಿಂದ ಗೆಲ್ಲುವ ವಿಶ್ವಾಸದಲ್ಲಿದೆ ಸೌರಾಷ್ಟ್ರ.

6 / 6
Follow Us
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ

ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ

ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ

ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?

‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ

ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ