AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್ ಕೊಹ್ಲಿ ದಾಖಲೆ ಉಡೀಸ್: ರುತುರಾಜ್ ಗಾಯಕ್ವಾಡ್ ಹೊಸ ವಿಶ್ವ ದಾಖಲೆ

Ruturaj Gaikwad World Record: ಏಕದಿನ ಕ್ರಿಕೆಟ್‌ನಲ್ಲಿ ರುತುರಾಜ್ ಗಾಯಕ್ವಾಡ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 96 ಇನಿಂಗ್ಸ್ ಗಳ ಮೂಲಕ. ಅಂದರೆ ಈವರೆಗೆ 96 ಲಿಸ್ಟ್ ಎ ಇನಿಂಗ್ಸ್ ಆಡಿರುವ ರುತುರಾಜ್ ಗಾಯಕ್ವಾಡ್ ಅತ್ಯುತ್ತಮ ಸರಾಸರಿಯೊಂದಿಗೆ 5 ಸಾವಿರ ರನ್ ಪೂರೈಸಿದ್ದಾರೆ. ಈ ಐದು ಸಾವಿರ ರನ್ ಗಳೊಂದಿಗೆ ವರ್ಲ್ಡ್ ರೆಕಾರ್ಡ್ ಗೆ ಕೊರೊಳೊಡ್ಡಿದ್ದಾರೆ.

ಝಾಹಿರ್ ಯೂಸುಫ್
|

Updated on: Jun 10, 2026 | 2:51 PM

Share
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸವನ್ನು ನಿರ್ಮಿಸಿರುವುದು ಭಾರತೀಯ ಬ್ಯಾಟರ್ ರುತುರಾಜ್ ಗಾಯಕ್ವಾಡ್ (Ruturaj gaikwad). ಅದು ಕೂಡ ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. (PC: BCCI)

1 / 5
ಜೂನ್ 9, 2026 ರಂದು ಶ್ರೀಲಂಕಾ ಎ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ 101 ರನ್​ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಈ ಶತಕದೊಂದಿಗೆ ರುತುರಾಜ್ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಅತ್ಯಧಿಕ ಸರಾಸರಿ ಹೊಂದಿರುವ ಬ್ಯಾಟರ್ ಎನಿಸಿಕೊಂಡಿದ್ಸಾರೆ. (PC: BCCI)

2 / 5
ಅಂದರೆ ಲಿಸ್ಟ್​ ಎ (ಏಕದಿನ) ಕ್ರಿಕೆಟ್​ನಲ್ಲಿ ಕನಿಷ್ಠ 100 ಪಂದ್ಯಗಳನ್ನಾಡಿ ಅತ್ಯಧಿಕ ಸರಾಸರಿ ಹೊಂದಿರುವ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ರುತುರಾಜ್ ಗಾಯಕ್ವಾಡ್ ಅಗ್ರಸ್ಥಾನಕ್ಕೇರಿದ್ದಾರೆ. ಈ ಹಿಂದೆ ಈ ವಿಶ್ವ ದಾಖಲೆ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರು. (PC: BCCI)

3 / 5
ಲಿಸ್ಟ್ ಎ (ಏಕದಿನ) ಕ್ರಿಕೆಟ್​ನಲ್ಲಿ 347 ಪಂದ್ಯಗಳಲ್ಲಿ  334 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 57.91 ಸರಾಸರಿಯಲ್ಲಿ 16447 ರನ್ ಕಲೆಹಾಕಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ 100 ಇನಿಂಗ್ಸ್ ಆಡಿ ಅತ್ಯಧಿಕ ಸರಾಸರಿಯಲ್ಲಿ (57.91) ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. (PC: BCCI)

4 / 5
ಇದೀಗ 100 ಪಂದ್ಯಗಳನ್ನಾಡಿ ರುತುರಾಜ್ ಗಾಯಕ್ವಾಡ್ ಈ ದಾಖಲೆ ಮುರಿದಿದ್ದಾರೆ. ಲಿಸ್ಟ್ ಎ ಕ್ರಿಕೆಟ್​ನಲ್ಲಿ ಇವರೆಗೆ 96 ಇನಿಂಗ್ಸ್ ಆಡಿರುವ ರುತುರಾಜ್ 59.32  ಸರಾಸರಿಯಲ್ಲಿ 5161 ರನ್ ಪೇರಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ (57.91) ಹೆಸರಿನಲ್ಲಿದ್ದ ಲಿಸ್ಟ್​ ಎ ಬೆಸ್ಟ್ ಅವರೇಜ್ ವಿಶ್ವ ದಾಖಲೆಯನ್ನು ರುತುರಾಜ್ ಗಾಯಕ್ವಾಡ್ (59.32) ತಮ್ಮದಾಗಿಸಿಕೊಂಡಿದ್ದಾರೆ. (PC: BCCI)

5 / 5
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us