AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News Live:ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲು ರಾಜ್ಯಪಾಲರಿಗೆ ಮನವಿ ಮಾಡಿದ್ದೇನೆ ಎಂದ ಸಿಎಂ

Karnataka News Today Live Updates: ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಸಿಜೆಪಿ ಹೋರಾಟ ಜೋರಾಗಿದ್ದು, ಮತ್ತೊಂದೆಡೆ ಸಂಸತ್ ಮುಂಗಾರು ಅಧಿವೇಶನ ಕೂಡ ನಡೆಯುತ್ತಿದೆ. ಇತ್ತ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ. ಇಂದಿನ ಪ್ರಮುಖ ಸುದ್ದಿ ವಿದ್ಯಮಾನಗಳ ಕ್ಷಣದ ಅಪ್ಡೇಟ್ ಇಲ್ಲಿದೆ.

TV9 Kannada News Live:ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲು ರಾಜ್ಯಪಾಲರಿಗೆ ಮನವಿ ಮಾಡಿದ್ದೇನೆ ಎಂದ ಸಿಎಂ
ಡಿಕೆ ಶಿವಕುಮಾರ್
ಗಣಪತಿ ಶರ್ಮಾ
| Edited By: |

Updated on:Jul 21, 2026 | 10:38 PM

Share

Breaking News Today Live Updates in Kannada:

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಇದೇ ಹೊತ್ತಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಕಾರ್ಯಕರ್ತರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದೆ. ಈ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಿದ್ದಾರೆ. ಮತ್ತೊಂದೆಡೆ, ಸಚಿವಾಕಾಂಕ್ಷಿ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಲಾಬಿ ನಡೆಸುತ್ತಿದ್ದಾರೆ. ಇವುಗಳು ಸೇರಿದಂತೆ ಇಂದಿನ ಪ್ರಮುಖ ರಾಷ್ಟ್ರೀಯ, ಅಂತರಾಷ್ಟ್ರೀಯ, ರಾಜ್ಯ, ಕ್ರೀಡೆ ಹಾಗೂ ಮನರಂಜನೆಗೆ ಸಂಬಂಧಿಸಿದ ಬೆಳವಣಿಗೆಗಳ ತಾಜಾ ಮಾಹಿತಿ ಪಡೆಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

LIVE NEWS & UPDATES

The liveblog has ended.
  • 21 Jul 2026 10:38 PM (IST)

    ಪ್ರಿಯಾಂಕಾ ಗಾಂಧಿ ಸೇರಿ ಹಲವರನ್ನ ಬಿಡುಗಡೆ ಮಾಡಿದ ಪೊಲೀಸರು

    ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿದೆ. ದೆಹಲಿಯ ಮಂದಿರ್ ಮಾರ್ಗ್​ ಠಾಣೆಗೆ ಕರೆತಂದಿದ್ದ ಪ್ರಿಯಾಂಕಾ ಗಾಂಧಿ ರಿ ಹಲವರನ್ನ ಬಿಡುಗಡೆ ಮಾಡಲಾಗಿದೆ.

  • 21 Jul 2026 10:00 PM (IST)

    ಸಂಪುಟ ವಿಸ್ತರಣೆಗೆ ನಾನು ರೆಡಿ ಎಂದ ಡಿಕೆಶಿ

    ಸಚಿವ ಸಂಪುಟದ ಬಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಸಚಿವ ಸಂಪುಟ ವಿಸ್ತರಣೆಗೆ ಅವಕಾಶ ನೀಡಿದರೆ ನಾಳೆಯೇ ಮಾಡುತ್ತೇನೆ. ಪೂರ್ಣಪ್ರಮಾಣದ ಸಂಪುಟ ವಿಸ್ತರಣೆಗೆ ನಾನು ಸಿದ್ಧನಾಗಿದ್ದೇನೆ. ಹೈಕಮಾಂಡ್ ನಾಯಕರು ಸೂಚನೆ ನೀಡಿದ ತಕ್ಷಣ ಸಂಪುಟ ವಿಸ್ತರಣೆಯಾಗಲಿದ್ದು, ಪ್ರತಿಜ್ಞಾವಿಧಿ ಬೋಧಿಸಲು ರಾಜ್ಯಪಾಲರಿಗೆ ಮನವಿ ಮಾಡಿದ್ದೇನೆ. ನನ್ನ ಸಂಪುಟದಲ್ಲಿ ಹಿರಿಯರು, ಕಿರಿಯರಿಗೂ ಸಮಾನ ಅವಕಾಶವಿದೆ. ಅತಿಹೆಚ್ಚು ಬಾರಿ ಶಾಸಕರಾಗಿರುವ ಆರ್.ವಿ.ದೇಶಪಾಂಡೆಯವರು ಇದ್ದಾರೆ ಎಂದರು.

  • 21 Jul 2026 09:13 PM (IST)

    ದೆಹಲಿಯ ಮಂದಿರ್ ಮಾರ್ಗ್​ ಠಾಣೆಗೆ ಸೋನಿಯಾ ಗಾಂಧಿ ದೌಡು

    ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ, ಸುರ್ಜೇವಾಲ, ವೇಣುಗೋಪಾಲ್​ ಸೇರಿ ಹಲವರನ್ನು ದೆಹಲಿಯ ಮಂದಿರ್ ಮಾರ್ಗ್​ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿ ದೆಹಲಿಯ ಮಂದಿರ್ ಮಾರ್ಗ್​ ಠಾಣೆಗೆ ಸೋನಿಯಾ ಗಾಂಧಿ ದೌಡಾಯಿಸಿದ್ದಾರೆ.

  • 21 Jul 2026 07:13 PM (IST)

    2 ದಿನ ಯಾವುದೇ ಕಾರ್ಯಕ್ರಮವಿಲ್ಲವೆಂದು ಲೋಕಭವನ

    ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಮುಂದುವರೆದಿದ್ದು, ಇತ್ತ ಕರ್ನಾಟಕ ಲೋಕಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಹೀಗಾಗಿ ಜುಲೈ 22ರಂದು ನೂತನ ಸಚಿವ ಪ್ರಮಾಣವಚನ ಸಮಾರಂಭ ನಡೆಯಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಲೋಕಭವನ ಸ್ಪಷ್ಟನೆ ನೀಡಿದ್ದು, ಮುಂದಿನ ಎರೆಡು ದಿನಗಳ ಕಾಲ ಲೋಕಭವನದಲ್ಲಿ ಯಾವುದೇ ಕಾರ್ಯಕ್ರಮಗಳು ಇಲ್ಲ ಎಂದಿದೆ.

  • 21 Jul 2026 07:09 PM (IST)

    ಪ್ರಧಾನಿ ನಿವಾಸದ ಬಳಿ ಪ್ರತಿಭಟನೆ ಮಾಡ್ತಿದ್ದ ಕೈ ನಾಯಕರು ಪೊಲೀಸ್ ವಶಕ್ಕೆ

    ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರಧಾನಿ ಮೋದಿ ನಿವಾಸದ ಬಳಿಕ ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರಧಾನಿ ನಿವಾಸದ ಬಳಿ AICC ಅಧ್ಯಕ್ಷ ಖರ್ಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಅಹೋರಾತ್ರಿವರೆಗೂ ಮುಂದುವರೆಸಲು ತೀರ್ಮಾನಿಸಿದ್ದರು. ಆದ್ರೆ, ಪೊಲೀಸರು ಪ್ರಿಯಾಂಕಾ ಗಾಂಧಿ ಸೇರಿದಂತೆ ನಾಯಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • 21 Jul 2026 06:31 PM (IST)

    ಮೋದಿ ನಿವಾಸದ ಬಳಿ ಕಾಂಗ್ರೆಸ್​​ನಿಂದ ಅಹೋರಾತ್ರಿ ಧರಣಿ ಸಾಧ್ಯತೆ

    ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಂಗ್ರೆಸ್ ಸಂಸದರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆಗೆ ಒತ್ತಾಯಿಸಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಇಂದು (ಜುಲೈ 21) ಅಹೋರಾತ್ರಿ ಧರಣಿ ನಡೆಸುವ ಸಾಧ್ಯತೆಗಳಿವೆ.

  • 21 Jul 2026 06:26 PM (IST)

    ಹೆದ್ದಾರಿಯಲ್ಲಿ ಅಪರಿಚಿತ ವ್ಯಕ್ತಿಗೆ ಅಪಘಾತವಾದ್ರೆ ಉಚಿತ ಚಿಕಿತ್ಸೆ

    ಹೆದ್ದಾರಿಯಲ್ಲಿ ಅಪರಿಚಿತ ವ್ಯಕ್ತಿಗೆ ಅಪಘಾತವಾದ್ರೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಯುಟಿ ಖಾದರ್ ಘೋಷಣೆ ಮಾಡಿದ್ದಾರೆ. ​ಉತ್ತರ ಕನ್ನಡ ಜಿಲ್ಲೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಖಾದರ್, ಅಪರಿಚಿತ ವ್ಯಕ್ತಿಗೆ ಅಪಘಾತವಾದ್ರೆ ಉಚಿತ ಚಿಕಿತ್ಸೆ ನೀಡಲು ಯೋಜನೆ ತರಲಾಗುವುದು. 7 ದಿನ ಎರಡೂವರೆ ಲಕ್ಷ ದವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದ್ದು, ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಅವರಯ ಜೊತೆ ಚರ್ಚೆ ಮಾಡುತ್ತೇನೆ. ಈ ಯೋಜನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ಕೊಡುವ ವಿಶ್ವಾಸವಿದೆ ಎಂದರು.

  • 21 Jul 2026 06:18 PM (IST)

    ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆ

    ದೆಹಲಿಯಲ್ಲಿ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಮುಂದುವರೆದಿದೆ. ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಯಾರಿಗೆ ಸಚಿವ ಸ್ಥಾನ ಏನು ಎನ್ನುವುದು ಇನ್ನೂ ಸ್ಪಷ್ಟತೆ ಇಲ್ಲ.ಆದ್ರೆ, ಇತ್ತ, ನೂತನ ಸಚಿವರ ಪ್ರಮಾಣವಚನಕ್ಕೆ ಲೋಕಭವನದಲ್ಲಿ ಸಿದ್ಧತೆಗಳು ಆರಂಭವಾಗಿವೆ. ಲೋಕಭವನದ ಮುಂಭಾಗ ಪೊಲೀಸರು ಬ್ಯಾರಿಕೇಡ್​ ಹಾಕಿದ್ದಾರೆ. ಹೀಗಾಗಿ ಜುಲೈ 22 ಅಥವಾ 23ರಂದು ನೂತನ ಸಚಿವ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆಗಳಿವೆ.

  • 21 Jul 2026 04:32 PM (IST)

    ಶಿವಾಜಿನಗರದಲ್ಲಿ 2ನೇ ಸುತ್ತಿನ ಒತ್ತುವರಿ ತೆರವು ಕಾರ್ಯ ಅಂತ್ಯ

    ಗಲಾಟೆ ಮಧ್ಯೆ ಬೆಂಗಳೂರಿನ ಶಿವಾಜಿನಗರದಲ್ಲಿ 2ನೇ ಸುತ್ತಿನ ಒತ್ತುವರಿ ತೆರವು ಕಾರ್ಯ ಅಂತ್ಯವಾಗಿದ್ದು, ಎರಡು ಜೆಸಿಬಿಗಳ ಎರಡನೇ ಸುತ್ತಿನ ಕಾರ್ಯಾಚರಣೆ ಮುಕ್ತಾಯವಾಗಿದೆ. ಪೊಲೀಸ್ ಬಂದೋಬಸ್ತ್​ನಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ತೆರವು ಮಾಡಲಾಗಿದೆ. ಇನ್ನು ಕೆಲ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮಾಲೀಕರಿಗೆ ಅವಕಾಶ ನೀಡಲಾಗಿದೆ.

  • 21 Jul 2026 04:28 PM (IST)

    ಬಲ್ಡೋಟಾ ಕಾರ್ಖಾನೆ ಬಾಗಿಲು ಮುರಿದು ನುಗ್ಗಿದ ರೈತರು

    ಕೊಪ್ಪಳದ ಬಲ್ಡೋಟಾ ಕಾರ್ಖಾನೆಯೊಳಗಿರುವ ಕೆರೆಯನ್ನು ಸಾರ್ವಜನಿಕ ಮುಕ್ತ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.ರೈತರು ಕಬ್ಬಿಣದ ಡೋರ್ ಮುರಿದು ಕಾರ್ಖಾನೆಗೆ ನುಗ್ಗಿದ್ದಾರೆ. ಇನ್ನು ಪ್ರತಿಭಟನೆ ವೇಳೆ ಏಕಾಏಕಿ ರೈತ ಯಮನೂರಪ್ಪ ಕೆರೆಗೆ ಹಾರಿದ್ದು, ಬಳಿಕ ಈಜಿ ದಡ ಸೇರಿದ್ದಾರೆ. ಇನ್ನು ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕೆ ಬಳ್ಳಾರಿ ವಲಯ ಐಜಿಪಿ ಹರ್ಷ ದೌಡಾಯಿಸಿದ್ದಾರೆ.

  • 21 Jul 2026 03:58 PM (IST)

    ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ: 10 ಆರೋಪಿಗಳ ಬಂಧನ

    ಶಿವಾಜಿನಗರದಲ್ಲಿ ಫುಟ್​ಪಾತ್ ತೆರವು ವೇಳೆ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಂದ 10 ಆರೋಪಿಗಳನ್ನು ಬಂಧಿಸಿದ್ದಾರೆ. ಕೊಟ್ರೇಶ್, ಪಾರ್ತಿಬನ್, ಮುಜಾಹಿದ್ ಅಹ್ಮದ್, ಭರತ್​, ಕಿರಣ್, ಪರಶುರಾಮ, ರಂಗಸ್ವಾಮಿ, ರಂಜಿತ್, ಬಸವರಾಜ್, ರಘು ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಬಸವರಾಜ್ ಪಡುಕೋಟೆ ಎನ್ನುವರು ಹುಡುಗರನ್ನು ಬಿಟ್ಟು ಗಲಾಟೆ ಮಾಡಿಸಿದ್ದಾರೆ ಎಂದು ಎನ್ನಲಾಗಿದ್ದು, ಸದ್ಯಕ್ಕೆ ಬಸವರಾಜ್ ಪಡುಕೋಟೆ ಎಸ್ಕೇಪ್ ಆಗಿದ್ದಾನೆ.

  • 21 Jul 2026 03:51 PM (IST)

    ಪ್ರಧಾನಿ ಮೋದಿ ನಿವಾಸದ ಎದುರು ಪ್ರತಿಭಟನೆ

    ​​ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಂಗ್ರೆಸ್​ ಸಂಸದರ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಧರಣಿ ನಡೆದಿದೆ. ಪ್ರತಿಭಟನೆಯಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ, ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್​, ಪ್ರಿಯಾಂಕಾ ಗಾಂಧಿ, ಕರ್ನಾಟಕ ಸಿಎಂ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ಸಂಸದರು ಭಾಗಿಯಾಗಿದ್ದಾರೆ.

  • 21 Jul 2026 02:46 PM (IST)

    ಅಕ್ರಮ ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಲು ಪಿಆರ್​ಸಿ: ಸಿಟಿ ರವಿ

    ರಾಜ್ಯ ಸರ್ಕಾರವು ಶಾಶ್ವತ ನಿವಾಸಿ ಪ್ರಮಾಣಪತ್ರ (PRC) ವಿತರಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. PRC ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಸೇರಿದ್ದು. ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಅವರು ಆರೋಪಿಸಿದ್ದು, ಇದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • 21 Jul 2026 02:44 PM (IST)

    ಸಂಸತ್‌ನಲ್ಲಿ ಪ್ರತಿಭಟನೆ ಹಿನ್ನೆಲೆ ವೇಣುಗೋಪಾಲ್‌ ನೇತೃತ್ವದ ಸಭೆ ಮೊಟಕು

    ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಕೆಸಿ ವೇಣುಗೋಪಾಲ್‌ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆ ಮೊಟಕಾಗಿದೆ. ಸಂಸತ್‌ನಲ್ಲಿ ಪ್ರತಿಭಟನೆ ಹಿನ್ನೆಲೆ ವೇಣುಗೋಪಾಲ್‌ ಸಂಸತ್‌ನಲ್ಲೇ ಇದ್ದಾರೆ. ಹಿಗಾಗಿ ವೇಣುಗೋಪಾಲ್‌ ಮನೆಗೆ ತೆರಳುತ್ತಿದ್ದ ಸಿದ್ದರಾಮಯ್ಯ ದಾರಿ ಮಧ್ಯೆ ವಾಪಸಾಗಿದ್ದಾರೆ. ವೇಣುಗಪಾಲ್ ಅವರು ರಾಜ್ಯ ನಾಯಕರ ಜೊತೆ ಇಂದು ರಾತ್ರಿ ಅಥವಾ ನಾಳೆ ಸಭೆ ನಡೆಸುವ ಸಾಧ್ಯತೆ ಇದೆ.

  • 21 Jul 2026 02:35 PM (IST)

    ಫುಟ್​ಪಾತ್​ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಪೊಲೀಸರು ಹೇಳಿದ್ದೇನು?

    ಶಿವಾಜಿನಗರದಲ್ಲಿ ಫುಟ್​ಪಾತ್​ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಬಗ್ಗೆ ಬೆಂಗಳೂರಿನ ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಆಮ್ಟೆ ಪ್ರತಿಕ್ರಿಯಿಸಿದ್ದು, ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು. ಆಗ ಇಬ್ಬರು ಹೊರಗೆ ಬಂದು, ಸಂಘಟನೆ ಮುಖಂಡರು ಹಲ್ಲೆ ಮಾಡಿದ್ದಾರೆ. ಎಇಇ ಮಾಧವ ರಾವ್ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ. ಅಧಿಕಾರಿಗಳ ಮೇಲೆ ದಾಳಿ ಸಂಬಂಧ 7 ಜನರನ್ನು ವಶಕ್ಕೆ ಪಡೆಯಲಾಗಿದೆ. ವಿಶೇಷ ತಂಡ ರಚಿಸಿ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

  • 21 Jul 2026 02:23 PM (IST)

    ಸಮಾಜಘಾತುಕ ಶಕ್ತಿಗಳು: ಕೃಷ್ಣಭೈರೇಗೌಡ ಕಿಡಿ

    ಫುಟ್​ಪಾತ್ ತೆರವು ಕಾರ್ಯಾಚರಣೆ ವೇಳೆ ಶಿವಾಜಿನಗರದಲ್ಲಿ ಜಿಬಿಎ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿದ್ದು, ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬರನ್ನೂ ಬಂಧಿಸಲಾಗುವುದು ಎಂದಿದ್ದಾರೆ. ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ. ಇವರು ಸಮಾಜಘಾತುಕ ಶಕ್ತಿಗಳು ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಓದಿ

  • 21 Jul 2026 12:51 PM (IST)

    ನಾಳೆಯೇ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಾಧ್ಯತೆ

    ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜತೆ ಸಭೆ ನಡೆಸುತ್ತಿದ್ದು, ಇಂದೇ ಸಚಿವರ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ನಾಳೆಯೇ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಾಧ್ಯತೆ ಇದೆ. ಬುಧವಾರ ಮಧ್ಯಾಹ್ನ‌ 2 ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮ‌ ನಿಗದಿ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬುದು ತಿಳಿದುಬಂದಿದೆ.

  • 21 Jul 2026 12:48 PM (IST)

    ಹೆಚ್ಎಸ್ಆರ್ ಲೇಔಟ್​ನಲ್ಲಿ ಎಸ್​ಐಆರ್ ಅಕ್ರಮ ಆರೋಪ

    ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ವಾರ್ಡ್ ನಂಬರ್ 53 ರಲ್ಲಿ 13 ಸಾವಿರಕ್ಕೂ ಹೆಚ್ಚು ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ಎಸ್​ಐಆರ್ ವೇಳೆ ದಾಖಲಿಸಿರುವ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರನ್ನು ಆಗ್ರಹಿಸಿದ್ದಾರೆ.

  • 21 Jul 2026 11:51 AM (IST)

    ಟಾಕ್ಸಿಕ್ ಚಿತ್ರದ ‘ಮನಮೋಹಕ’ ಸಾಂಗ್ ರಿವೀಲ್

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಹುನಿರೀಕ್ಷಿತ ಎರಡನೇ ಹಾಡು ‘ಮನಮೋಹಕ’ ರಿವೀಲ್ ಬಿಡುಗಡೆಯಾಗಿದೆ. ಪ್ರಣಯಗೀತೆಯಲ್ಲಿ ಯಶ್ ಮತ್ತು ತಾರಾ ಸುತಾರಿಯಾ ಕೆಮಿಸ್ಟ್ರಿ ಗಮನ ಸೆಳೆದಿದೆ. ಮತ್ತಷ್ಟು ಓದಲು ಮತ್ತು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

  • 21 Jul 2026 11:14 AM (IST)

    ಬೆಂಗಳೂರಿನ 8 ಸ್ಥಳಗಳಲ್ಲಿ ಇಡಿ ದಾಳಿ

    ಐಸಿಸ್ ಭಯೋತ್ಪಾದಕ ಸಂಘಟನೆಗೆ ಹಣಕಾಸು ನೆರವು ನೀಡಿದ ಆರೋಪ ಸಂಬಂಧ ಬೆಂಗಳೂರಿನ 8 ಸ್ಥಳಗಳಲ್ಲಿ ಮಂಗಳವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿರಿಯಾದಲ್ಲಿ ಐಸಿಸ್ ಉಗ್ರ ಸಂಘಟನೆಗೆ ಹಣಕಾಸಿನ ನೆರವು, ಮುಸ್ಲಿಮರ ನೇಮಕಾತಿ ಮತ್ತು ಹಣಕಾಸು ನೆರವು ನೀಡಿದ ಪ್ರಕರಣ ಇದಾಗಿದೆ. ಎನ್​ಐಎ ದಾಖಲಿಸಿದ ಎಫ್​​ಐಆರ್​ ಆಧರಿಸಿ ಇಡಿ ಸಹ ಪ್ರಕರಣ ದಾಖಲಿಸಿಕೊಂಡಿದೆ. ಇಕ್ರಾ ವೆಲ್ಫೇರ್ ಟ್ರಸ್ಟ್, GFM ಟ್ರಸ್ಟ್‌ ಮೂಲಕ ಹಣ ವರ್ಗಾವಣೆಯಾಗಿರುವ ವಿಚಾರ NIA ತನಿಖೆ ವೇಳೆ ಬಯಲಾಗಿತ್ತು. ಐಸಿಸ್ ಶಿಬಿರಕ್ಕೆ ಸೇರಲು ಹಣ ಬಳಸಲಾಗಿದೆ ಎಂಬುದು ಪತ್ತೆಯಾಗಿತ್ತು. ಮತ್ತಷ್ಟು ಓದಿ

  • 21 Jul 2026 10:34 AM (IST)

    ಜಮ್ಮು-ಕಾಶ್ಮೀರದಲ್ಲಿ ದಿಢೀರ್‌ ಪ್ರವಾಹ: 11 ಜನ ಸಾವು

    ಜಮ್ಮು-ಕಾಶ್ಮೀರದಲ್ಲಿ ದಿಢೀರ್‌ ಪ್ರವಾಹ, ಭೂಕುಸಿತಕ್ಕೆ ಭಾರಿ ದುರಂತ ಸಂಭವಿಸಿದ್ದು 11 ಮಂದಿ ಸಾವಿಗೀಡಾಗಿದ್ದಾರೆ. ಪೂಂಛ್ ಜಿಲ್ಲೆಯಲ್ಲಿ ಭೂಕುಸಿತಕ್ಕೆ ಒಂದೇ ಕುಟುಂಬದ 7 ಜನ ಬಲಿಯಾಗಿದ್ದಾರೆ. ಜಮ್ಮು-ಕಿಶ್ತ್ವಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಬಂಡೆಗಳು ಬಸ್ ಮೇಲೆ ಉರುಳಿಬಿದ್ದು ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಆರು ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

  • 21 Jul 2026 09:29 AM (IST)

    53 ರೈಲುಗಳ ಸಂಚಾರ ರದ್ದು

    ಗಾಜಿಯಾಬಾದ್-ದೆಹಲಿ ರೈಲು ಮಾರ್ಗದಲ್ಲಿ ಗೂಡ್ಸ್ ರೈಲು ಹಳಿತಪ್ಪಿದ್ದು, ಸುಮಾರು 53 ರೈಲುಗಳ ಸಂಚಾರ ರದ್ದಾಗಿದೆ. ದೆಹಲಿ-ನವದೆಹಲಿ ಮಾರ್ಗದ ಮೂಲಕ 24 ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದ್ದು, 16 ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ.

  • 21 Jul 2026 09:28 AM (IST)

    ಟಾಕ್ಸಿಕ್ ಬಿಗ್ ಅಪ್​ಡೇಟ್

    ಟಾಕ್ಸಿಕ್ ಎರಡನೇ ಸಾಂಗ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು (ಜುಲೈ 21) ಬೆಳಿಗ್ಗೆ 11:30ಕ್ಕೆ ರಿಲೀಸ್ ಆಗಲಿದೆ.

  • 21 Jul 2026 09:26 AM (IST)

    ಒಂದೇ ಗೋಲಿನ ಮೂಲಕ ಎಲ್ಲಾ ತಂಡಗಳ ಕಂಗೆಡಿಸಿದ್ದ ಸ್ಪೇನ್!

    ಫುಟ್‌ಬಾಲ್ ವಿಶ್ವಕಪ್ (FIFA World Cup 2026) ಮುಡಿಗೇರಿಸಿಕೊಂಡಿರುವ ಸ್ಪೇನ್ ತಂಡದ ಇಂಟರೆಸ್ಟಿಂಗ್ ವಿಚಾರಗಳು ಈಗ ಬಯಲಾಗುತ್ತಿವೆ. ಒಂದೇ ಗೋಲಿನ ಮೂಲಕ ಸ್ಪೇನ್ ಎಲ್ಲಾ ತಂಡಗಳ ಕಂಗೆಡಿಸಿದ್ದೇಗೆ ಎಂಬ ಆಸಕ್ತಿದಾಯಕ ವಿಚಾರ ಇಲ್ಲಿದೆ. ಮತ್ತಷ್ಟು ಓದಿ

  • 21 Jul 2026 09:23 AM (IST)

    ಜಲವಿದ್ಯುತ್ ಯೋಜನೆ ಸುರಂಗದಲ್ಲಿ ಭೂಕುಸಿತ: 7 ಮಂದಿ ಸಾವು

    ದಕ್ಷಿಣ ಸಿಕ್ಕಿಂನ ಸಮರ್ದುಂಗ್ ಬಳಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ. ಹಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಮತ್ತಷ್ಟು ಓದಿ

  • 21 Jul 2026 09:19 AM (IST)

    ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸಂಚಾರ ವ್ಯತ್ಯಯ

    ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮಂಗಳವಾರ ಬೆಳಗ್ಗೆ ಸಂಚಾರ ವ್ಯತ್ಯಯ ಆಗಿದೆ. ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ಸಂಚಾರಕ್ಕೆ ಅಡ್ಡಿಯಾಗಿದ್ದು, ಸದ್ಯ ದೋಷ ಬಗೆಹರಿಸಲಾಗಿದ್ದು, ಮೆಟ್ರೋ ಸಂಚಾರ ಆರಂಭವಾಗಿದೆ. ಮತ್ತಷ್ಟು ಓದಿ

  • 21 Jul 2026 09:16 AM (IST)

    ರಾಯಚೂರಿನಲ್ಲಿ ಬೀದಿ ನಾಯಿ ದಾಳಿ: 4 ವರ್ಷ ಬಾಲಕನ ಸ್ಥಿತಿ ಗಂಭೀರ

    ರಾಯಚೂರಿನ ಮಲಿಯಾಬಾರ್ ಪ್ರದೇಶದಲ್ಲಿ ಬೀದಿನಾಯಿ ದಾಳಿಗೆ ನಾಲ್ಕು ವರ್ಷದ ಬಾಲಕ ಗೋಪಾಲ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತಷ್ಟು ಓದಿ

  • 21 Jul 2026 09:11 AM (IST)

    ಚಿತ್ರದುರ್ಗದಲ್ಲಿ ಬೀದಿನಾಯಿ ದಾಳಿ: ನಾಲ್ವರಿಗೆ ಗಾಯ

    ಚಿತ್ರದುರ್ಗದಲ್ಲಿ ಒಂದೇ ದಿನ ನಾಲ್ವರು ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ.

Published On - Jul 21,2026 9:10 AM

Follow Us
ಆ.13ರಂದು ಕರ್ನಾಟಕ ಬಂದ್​​: ಬೆಂಗಳೂರಿನ ಖಾಸಗಿ ಶಾಲೆಗಳಿಗಿಲ್ಲ ರಜೆ!
ಆ.13ರಂದು ಕರ್ನಾಟಕ ಬಂದ್​​: ಬೆಂಗಳೂರಿನ ಖಾಸಗಿ ಶಾಲೆಗಳಿಗಿಲ್ಲ ರಜೆ!
ಬನಶಂಕರಿಯಲ್ಲಿ ನಿನ್ನೆ ಸಂಜೆ ಮತ್ತೆ ಚಿರತೆ ಪ್ರತ್ಯಕ್ಷ ಇಂದು ಕಾರ್ಯಾಚರಣೆ
ಬನಶಂಕರಿಯಲ್ಲಿ ನಿನ್ನೆ ಸಂಜೆ ಮತ್ತೆ ಚಿರತೆ ಪ್ರತ್ಯಕ್ಷ ಇಂದು ಕಾರ್ಯಾಚರಣೆ
ಬಾಗಲಕೋಟೆಯಲ್ಲಿ ಗಮನ ಸೆಳೆದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ
ಬಾಗಲಕೋಟೆಯಲ್ಲಿ ಗಮನ ಸೆಳೆದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ
ಅದ್ವೈತ್ ಉಪಾಧ್ಯಾಯ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್​​!
ಅದ್ವೈತ್ ಉಪಾಧ್ಯಾಯ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್​​!
ಸರ್ಕಾರಿ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿದ ಅತಿಥಿ ಉಪನ್ಯಾಸಕರು
ಸರ್ಕಾರಿ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿದ ಅತಿಥಿ ಉಪನ್ಯಾಸಕರು
ಹೆಚ್​ಡಿಕೆ ವಿರುದ್ಧ ‘ಕೋಳಿ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯ
ಹೆಚ್​ಡಿಕೆ ವಿರುದ್ಧ ‘ಕೋಳಿ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯ
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು