AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanju Samson: ಕೇವಲ 8 ರನ್​​… ವಿರಾಟ್ ಕೊಹ್ಲಿಯ ಭರ್ಜರಿ ದಾಖಲೆ ಜಸ್ಟ್ ಮಿಸ್!

Sanju Samson Records: ಐಪಿಎಲ್​ನ 48ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 155 ರನ್ ಬಾರಿಸಿದ್ದರು. ಈ ಗುರಿಯನ್ನು ಸಿಎಸ್​ಕೆ ತಂಡ ಸಂಜು ಸ್ಯಾಮ್ಸನ್​ರ 87 ರನ್​ಗಳ ಭರ್ಜರಿ ಬ್ಯಾಟಿಂಗ್​ ನೆರವಿನೊಂದಿಗೆ 17.3 ಓವರ್​ಗಳಲ್ಲಿ  ಚೇಸ್ ಮಾಡಿದೆ. ಈ ಗೆಲುವಿನ ನಡುವೆ ವಿಶೇಷ ದಾಖಲೆಯೊಂದನ್ನು ಸಂಜು ಸ್ಯಾಮ್ಸನ್ ಮಿಸ್ ಮಾಡಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on:May 06, 2026 | 1:00 PM

Share
IPL 2026: ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಿರುವ ಸಂಜು ಸ್ಯಾಮ್ಸನ್ (Sanju Samson), ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 8 ರನ್‌ಗಳಿಂದ ವಿರಾಟ್ ಕೊಹ್ಲಿಯ (Virat Kohli) ಪ್ರಮುಖ ದಾಖಲೆಯೊಂದನ್ನು ಮುರಿಯುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ.

1 / 10
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಸಿಎಸ್​ಕೆ ಪರ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

2 / 10
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ್ದ ಸಂಜು ಸ್ಯಾಮ್ಸನ್ ಪವರ್​ಪ್ಲೇ ಮುಗಿಯುತ್ತಿದ್ದಂತೆ ಅಬ್ಬರಿಸಿದರು. ಈ ಮೂಲಕ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಸಿಡಿಲಬ್ಬರ ಶುರು ಮಾಡಿದ ಸ್ಯಾಮ್ಸನ್ ಅಂತಿಮ 52 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 87 ರನ್ ಬಾರಿಸಿದರು.

3 / 10
ಈ 87 ರನ್​ಗಳೊಂದಿಗೆ ಐಪಿಎಲ್​ ಸೀಸನ್​ವೊಂದರಲ್ಲಿ ಒಂದೇ ತಂಡದ ವಿರುದ್ಧ 2 ಪಂದ್ಯಗಳ ಮೂಲಕ 200+ ರನ್​ ಕಲೆಹಾಕಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಮಾತ್ರ ಈ ಸಾಧನೆ ಮಾಡಿದ್ದರು.

4 / 10
2016ರ ಐಪಿಎಲ್ ಸೀಸನ್​ನಲ್ಲಿ ಗುಜರಾತ್ ಲಯನ್ಸ್​​ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅಜೇಯ 100 ರನ್ ಹಾಗೂ ಮತ್ತೊಂದು ಪಂದ್ಯದಲ್ಲಿ 109 ರನ್ ಸಿಡಿಸಿದ್ದರು. ಈ ಮೂಲಕ ಒಂದೇ ತಂಡದ ವಿರುದ್ಧ ಲೀಗ್​ ಹಂತದ 2 ಪಂದ್ಯಗಳಲ್ಲಿ ಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದರು.

5 / 10
ಈ ದಾಖಲೆಯನ್ನು 2022 ರಲ್ಲಿ ಕೆಎಲ್ ರಾಹುಲ್ ಸರಿಗಟ್ಟಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಗಳಲ್ಲಿ ಕೆಎಲ್ ರಾಹುಲ್ 103 ರನ್​ಗಳ ಎರಡು ಅಜೇಯ ಶತಕ ಸಿಡಿಸಿ, ಲೀಗ್​ ಹಂತದಲ್ಲಿ ಒಂದೇ ತಂಡದ ವಿರುದ್ಧ 2 ಸೆಂಚುರಿ ಸಿಡಿಸಿದ ದಾಖಲೆ ನಿರ್ಮಿಸಿದ್ದರು.

6 / 10
ಈ ದಾಖಲೆಯನ್ನು ಸರಿಗಟ್ಟುವ ಅವಕಾಶ ಸಂಜು ಸ್ಯಾಮ್ಸನ್ ಮುಂದಿತ್ತು. ಈ ಬಾರಿಯ ಐಪಿಎಲ್​ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಜೇಯ 115 ರನ್ ಬಾರಿಸಿದ್ದರು. ಇದೀಗ 2ನೇ ಪಂದ್ಯದಲ್ಲಿ ಅಜೇಯ 87 ರನ್ ಸಿಡಿಸಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಶತಕ ಪೂರೈಸಿದ್ದರೆ ಈ ಸಾಧನೆ ಮಾಡಿದ 3ನೇ ಬ್ಯಾಟರ್ ಎನಿಸಿಕೊಳ್ಳುತ್ತಿದ್ದರು.

7 / 10
ಅಷ್ಟೇ ಅಲ್ಲದೆ ಈ ಎರಡು ಪಂದ್ಯಗಳ ಮೂಲಕ ಸಂಜು ಸ್ಯಾಮ್ಸನ್ ಕಲೆಹಾಕಿದ ಒಟ್ಟು ಸ್ಕೋರ್ 202 ರನ್​​ಗಳು. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಂಜು ಹೆಚ್ಚುವರಿ 8 ರನ್​ ಕಲೆಹಾಕಿದ್ದರೆ ವಿರಾಟ್ ಕೊಹ್ಲಿ ಭರ್ಜರಿ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದಿತ್ತು.

8 / 10
ಅಂದರೆ ವಿರಾಟ್ ಕೊಹ್ಲಿ 2016 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಲೀಗ್​ ಹಂತದಲ್ಲಿ 2 ಪಂದ್ಯಗಳ ಮೂಲಕ ಒಟ್ಟು 209 ರನ್​​ ಗಳಿಸಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆ ಮುರಿಯುವ ಉತ್ತಮ ಅವಕಾಶ ಸಂಜು ಸ್ಯಾಮ್ಸನ್ ಮುಂದಿತ್ತು.

9 / 10
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 115 ರನ್ ಬಾರಿಸಿದ್ದ ಸಂಜು, ಈ ಬಾರಿ 87 ರನ್ ಮಾತ್ರ ಗಳಿಸಿದ್ದಾರೆ. ಈ ಮೂಲಕ 2 ಪಂದ್ಯಗಳಿಂದ ಒಟ್ಟು 202 ರನ್​ ಕಲೆಹಾಕಿದ್ದಾರೆ. ಒಂದು ವೇಳೆ ದ್ವಿತೀಯ ಪಂದ್ಯದಲ್ಲಿ 95 ರನ್​​ಗಳಿಸಿದ್ದರೆ, ವಿರಾಟ್ ಕೊಹ್ಲಿ (209) ಭರ್ಜರಿ ದಾಖಲೆಯನ್ನು ಮುರಿಯಬಹುದಿತ್ತು. ಆದರೆ ಕೇವಲ 8 ರನ್​ಗಳಿಂದ ಐಪಿಎಲ್​ ವಿಶೇಷ ದಾಖಲೆಯಿಂದ ಸಂಜು ಸ್ಯಾಮ್ಸನ್ ವಂಚಿತರಾಗಿದ್ದಾರೆ.

10 / 10

Published On - 7:03 am, Wed, 6 May 26

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು

ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು

ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್

ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?

ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ

ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ

ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​

ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ

ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ