AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs RR: ಸತತ 2ನೇ ಪಂದ್ಯದಲ್ಲಿ ಶತಕ ವಂಚಿತರಾದ ವೈಭವ್ ಸೂರ್ಯವಂಶಿ

Vaibhav Sooryavanshi's IPL Century Heartbreak: ವೈಭವ್ ಸೂರ್ಯವಂಶಿ ಈ ಐಪಿಎಲ್​ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 97, ಗುಜರಾತ್ ಟೈಟಾನ್ಸ್ ವಿರುದ್ಧ 96 ರನ್‌ಗಳಿಗೆ ಔಟಾಗಿ ಎರಡು ಬಾರಿ ಶತಕ ವಂಚಿತರಾಗಿದ್ದಾರೆ. ಕನ್ನಡಿಗರ ಕೈಯಲ್ಲಿ ಕ್ಯಾಚ್ ನೀಡಿದುದು ಗಮನಾರ್ಹ. ವೈಭವ್ ಅತಿವೇಗವಾಗಿ 1000 IPL ರನ್ ಹಾಗೂ ಒಂದು ಋತುವಿನಲ್ಲಿ 700+ ರನ್ ಗಳಿಸಿದ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಪೃಥ್ವಿಶಂಕರ
|

Updated on: May 29, 2026 | 10:09 PM

Share
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲಿಮಿನೆಟರ್ ಪಂದ್ಯದಲ್ಲಿ 97 ರನ್‌ಗಳಿಗೆ ಔಟಾಗಿ ಕೇವಲ 3 ರನ್​ಗಳಿಂದ ಶತಕ ವಂಚಿತರಾಗಿದ್ದ ವೈಭವ್ ಸೂರ್ಯವಂಶಿ, ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್‌ನಲ್ಲಿ 96 ರನ್‌ಗಳಿಗೆ ಔಟಾಗಿದ್ದಾರೆ. ಬೇಸರದ ಸಂಗತಿಯೆಂದರೆ ಸನ್‌ರೈಸರ್ಸ್ ವಿರುದ್ಧ ವೈಭವ್ ಯಾವ ರೀತಿಯಾಗಿ ಔಟಾಗಿದ್ದರೋ, ಇದೀಗ ಗುಜರಾತ್ ವಿರುದ್ಧ ಅದೇ ರೀತಿಯಾಗಿ ವಿಕೆಟ್ ಒಪ್ಪಿಸಿದರು (PC- PTI).

1 / 5
ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ, ವೈಭವ್ ಅವರ ಈ ಎರಡು ಬಾರಿಯೂ ಶತಕ ವಂಚಿತರಾಗಲು ಕನ್ನಡಿಗರು ಕಾರಣರಾಗಿದ್ದಾರೆ. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಥರ್ಡ್ ಮ್ಯಾನ್​ನಲ್ಲಿ ಸೂರ್ಯವಂಶಿ ನೀಡಿದ ಕ್ಯಾಚ್ ಅನ್ನು ಕನ್ನಡಿಗ ಸ್ಮರಣ್ ಹಿಡಿದರೆ, ಇದೀಗ ಗುಜರಾತ್ ತಂಡದ ಪರ ಆಡುತ್ತಿರುವ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ್ ಕೃಷ್ಣ, ವೈಭವ್ ಅವರ ಕ್ಯಾಚ್ ಹಿಡಿಯುವ ಮೂಲಕ ಅವರ ಇನ್ನಿಂಗ್ಸ್​ಗೆ ತೆರೆ ಎಳೆದರು (PC- PTI).

2 / 5
ಆದಾಗ್ಯೂ ವೈಭವ್ ಸೂರ್ಯವಂಶಿ ಈ ಆವೃತ್ತಿಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದು, ಮೂರು ಬಾರಿ ಶತಕ ವಂಚಿತರಾಗಿದ್ದಾರೆ. ತಮ್ಮ ಕೊನೆಯ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಶತಕ ವಂಚಿತರಾಗಿರುವುದು ಅವರ ಅಮೋಘ ಪಾರ್ಮ್​ಗೆ ಉದಾಹರಣೆಯಾಗಿದೆ. ವೈಭವ್, ಲಕ್ನೋ ವಿರುದ್ಧ 93, ಹೈದರಾಬಾದ್ ವಿರುದ್ಧ 97 ರನ್ ಈಗ ಗುಜರಾತ್ ವಿರುದ್ಧ 96 ರನ್ ಗಳಿಸಿ ಔಟಾಗಿದ್ದಾರೆ (PC- PTI).

3 / 5
ಗುಜರಾತ್ ವಿರುದ್ಧದ ಈ ಇನ್ನಿಂಗ್ಸ್ ಮೂಲಕ ವೈಭವ್, ಈ ಆವೃತ್ತಿಯಲ್ಲಿ 700 ರನ್‌ಗಳನ್ನು ಪೂರ್ಣಗೊಳಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ 700 ರನ್‌ ಬಾರಿಸಿದ ಅನ್‌ಕ್ಯಾಪ್ಡ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದುವರೆಗೆ 776 ರನ್‌ ಬಾರಿಸಿರುವ ವೈಭವ್ 63 ಬೌಂಡರಿಗಳು ಮತ್ತು 72 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ (PC- PTI).

4 / 5
ಹಾಗೆಯೇ ವೈಭವ್ ಸೂರ್ಯವಂಶಿ ಐಪಿಎಲ್​ನಲ್ಲಿ 1000 ರನ್​ಗಳನ್ನು ಸಹ ಪೂರೈಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ 1000 ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈಭವ್ ಕೇವಲ 440 ಎಸೆತಗಳಲ್ಲಿ ಈ ಮೈಲಿಗಲ್ಲು ದಾಟಿದ್ದಾರೆ (PC- PTI).

5 / 5
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us