AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs IRE: ರೋಹಿತ್ ಶರ್ಮಾ ದಾಖಲೆ ಮೇಲೆ ಕಣ್ಣಿಟ್ಟ ಸಂಜು ಸ್ಯಾಮ್ಸನ್

Sanju Samson to Break Rohit Sharma's Record: ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಅವರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿಯಲು ಸಂಜು ಸ್ಯಾಮ್ಸನ್‌ಗೆ ಅವಕಾಶವಿದೆ. ರೋಹಿತ್ 201 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಜೂನ್ 26 ರಿಂದ ಆರಂಭವಾಗುವ ಸರಣಿಯಲ್ಲಿ ಸಂಜುಗೆ ಆರಂಭಿಕನಾಗಿ ಅವಕಾಶ ಸಿಕ್ಕರೆ, ಅವರು ಈ ದಾಖಲೆಯನ್ನು ಮುರಿಯುವ ಉತ್ತಮ ಅವಕಾಶವಿದೆ.

ಪೃಥ್ವಿಶಂಕರ
|

Updated on: Jun 24, 2026 | 10:38 PM

Share
ಜೂನ್ 26 ರಿಂದ ಭಾರತ ಹಾಗೂ ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ಶ್ರೇಯಸ್ ಅಯ್ಯರ್ ಪಡೆ ಈಗಾಗಲೇ ಐರ್ಲೆಂಡ್ ತಲುಪಿದೆ. ಇನ್ನು ಈ ಸರಣಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಜೋಡಿ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಏಕೆಂದರೆ ವೈಭವ್​ಗೆ ಅವಕಾಶ ನೀಡಿದರೆ, ಅಭಿಷೇಕ್ ಅಥವಾ ಸಂಜು ಸ್ಯಾಮ್ಸನ್ ಪ್ಲೇಯಿಂಗ್ 11 ನಿಂದ ಹೊರಗುಳಿಯಬೇಕಾಗುತ್ತದೆ (PC-PTI).

1 / 5
ಒಂದು ವೇಳೆ ಹಿಂದಿನಂತೆ ಅಭಿಷೇಕ್ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕಿಳಿದರೆ, ಸಂಜು ಸ್ಯಾಮ್ಸನ್​ಗೆ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿಯುವ ಅವಕಾಶವಿದೆ. ವಾಸ್ತವವಾಗಿ ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ. ಇದೀಗ ದಾಖಲೆಯನ್ನು ಮುರಿಯುವ ಅವಕಾಶ ಸಂಜುಗಿದೆ (PC-PTI).

2 / 5
ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ 200 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ. ಅವರು ಆಡಿರುವ ನಾಲ್ಕು ಟಿ20 ಪಂದ್ಯಗಳಲ್ಲಿ 201 ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಟಿ20ಯಿಂದ ನಿವೃತ್ತರಾದ ನಂತರ, ರೋಹಿತ್ ಇನ್ನು ಮುಂದೆ ಈ ಸ್ವರೂಪದಲ್ಲಿ ಆಡುವುದಿಲ್ಲ (PC-PTI).

3 / 5
ಪ್ರಸ್ತುತ ಭಾರತ ಮತ್ತು ಐರಿಶ್ ತಂಡಗಳಲ್ಲಿ, ಹ್ಯಾರಿ ಟೆಕ್ಟರ್ ಮತ್ತು ಸಂಜು ಸ್ಯಾಮ್ಸನ್ ರೋಹಿತ್ ಶರ್ಮಾ ಅವರನ್ನು ಮೀರಿಸುವ ಅವಕಾಶ ಹೊಂದಿರುವ ಇಬ್ಬರು ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಆದಾಗ್ಯೂ, ಎರಡೂ ದೇಶಗಳ ನಡುವಿನ ಟಿ20 ಸರಣಿಯಲ್ಲಿ ಸ್ಯಾಮ್ಸನ್ ಅವರ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಹ್ಯಾರಿ ಟೆಕ್ಟರ್‌ಗಿಂತ ಉತ್ತಮವಾಗಿರುವುದರಿಂದ, ಅವರು ರೋಹಿತ್ ಅವರನ್ನು ಹಿಂದಿಕ್ಕಿ ನಂಬರ್ ಒನ್ ಆಗುವ ಉತ್ತಮ ಅವಕಾಶವನ್ನು ಹೊಂದಿದ್ದಾರೆ (PC-PTI).

4 / 5
ಸಂಜು ಸ್ಯಾಮ್ಸನ್ ಐರ್ಲೆಂಡ್ ವಿರುದ್ಧ ಆಡಿರುವ ಮೂರು ಟಿ20 ಪಂದ್ಯಗಳಲ್ಲಿ 59.00 ಸರಾಸರಿ ಮತ್ತು 171.01 ಸ್ಟ್ರೈಕ್ ರೇಟ್‌ನೊಂದಿಗೆ 118 ರನ್ ಗಳಿಸಿದ್ದಾರೆ. ಹೀಗಾಗಿ ಸಂಜು ಈ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರೆ, ರೋಹಿತ್ ಅವರ 201 ರನ್‌ಗಳ ದಾಖಲೆಯನ್ನು ಮುರಿಯುವ ಸಾಧ್ಯತೆಗಳು ಹೆಚ್ಚಿವೆ (PC-PTI).

5 / 5
Follow Us