- TV9 Kannada Photo gallery Cricket photos Shubman Gill's Explosive 40 Runs in Sher-e-Punjab T20 Debut; Fazilka Falcons Win
ಶುಭ್ಮನ್ ಗಿಲ್ಗೆ 5000 ರೂ. ಬಹುಮಾನ ನೀಡಿದ ಅಭಿಷೇಕ್ ಶರ್ಮಾ ತಂದೆ
ಶುಭ್ಮನ್ ಗಿಲ್ ಶೇರ್-ಎ-ಪಂಜಾಬ್ ಟಿ20 ಲೀಗ್ ಪದಾರ್ಪಣೆಯಲ್ಲಿ ಫಜಿಲ್ಕಾ ಫಾಲ್ಕನ್ಸ್ ಪರ ಮಿಂಚಿದರು. ಲುಧಿಯಾನ ಲಯನ್ಸ್ ವಿರುದ್ಧ ಕೇವಲ 21 ಎಸೆತಗಳಲ್ಲಿ 40 ರನ್ ಸಿಡಿಸಿ ತಂಡದ 1 ರನ್ ಗೆಲುವಿಗೆ ನೆರವಾದರು. ಏಳು ಬೌಂಡರಿ, ಒಂದು ಸಿಕ್ಸರ್ ಸಹಿತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತರರಾಷ್ಟ್ರೀಯ ಪಂದ್ಯಗಳ ನಂತರ ರಾಜ್ಯ ಕ್ರಿಕೆಟ್ ಮಂಡಳಿಗೆ ಗಿಲ್ ನೀಡಿದ ಈ ಕೊಡುಗೆ ಶ್ಲಾಘನೀಯ.
Updated on: Sep 07, 2026 | 4:36 PM

ಶೇರ್-ಎ-ಪಂಜಾಬ್ ಟಿ20 ಲೀಗ್‌ನಲ್ಲಿ ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ ತಮ್ಮ ಮೊದಲ ಪಂದ್ಯವನ್ನಾಡಿದರು. ಲೀಗ್‌ನ 15 ನೇ ಪಂದ್ಯದಲ್ಲಿ ಫಜಿಲ್ಕಾ ಫಾಲ್ಕನ್ಸ್ ಪರ ಕಣಕ್ಕಿಳಿದಿದ್ದ ಗಿಲ್ ಲುಧಿಯಾನ ಲಯನ್ಸ್ ವಿರುದ್ಧ ಕೇವಲ 21 ಎಸೆತಗಳಲ್ಲಿ 40 ರನ್ ಗಳಿಸಿ ಅಬ್ಬರದ ಇನ್ನಿಂಗ್ಸ್ ಆಡಿದರು (PC-sher-e-punjab X).

190.48 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಶುಭ್ಮನ್ ಗಿಲ್ ತಮ್ಮ ಇನ್ನಿಂಗ್ಸ್ನಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಬಾರಿಸಿದರು. ಅಂತಿಮವಾಗಿ ಗಿಲ್ 10 ನೇ ಓವರ್‌ನಲ್ಲಿ ಔಟಾದರಯ. ಗಿಲ್ ಅವರ 40 ರನ್‌ಗಳ ಭರ್ಜರಿ ಬ್ಯಾಟಿಂಗ್‌ನ ಆಧಾರದ ಮೇಲೆ, ಮೊದಲು ಬ್ಯಾಟಿಂಗ್ ಮಾಡಿದ ಫಜಿಲ್ಕಾ ಫಾಲ್ಕನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು(PC-sher-e-punjab X).

171 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಕ್ನೋ ಲಯನ್ಸ್ ತಂಡ ಕೂಡ ಗೆಲುವಿಗಾಗಿ ಸಾಕಷ್ಟು ಹೋರಾಟ ನೀಡಿತು. ಆದಾಗ್ಯೂ ತಂಡ ಒಂದೇ ಒಂದು ರನ್ಗಳಿಂದ ಸೋಲೊಪ್ಪಿಕೊಂಡಿತು. ಅಂತಿಮವಾಗಿ ಲಕ್ನೋ ಲಯನ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 169 ರನ್‌ಗಳಿಸಲಷ್ಟೇ ಶಕ್ತವಾಗಿ ಪಂದ್ಯವನ್ನು 1 ರನ್‌ನಿಂದ ಸೋತಿತು(PC-sher-e-punjab X).

ಇನ್ನು ಈ ಪಂದ್ಯದಲ್ಲಿ ಶುಭ್ಮನ್ ಗಿಲ್ ಅತ್ಯಧಿಕ ಬೌಂಡರಿಗಳನ್ನು ಅಂದರೆ 7 ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ ಪಂದ್ಯದಲ್ಲಿ ಅತ್ಯಧಿಕ ಬೌಂಡರಿಗಳನ್ನು ಬಾರಿಸಿದ ಗಿಲ್ಗೆ 5000 ರೂಗಳ ಬಹುಮಾನ ಸಿಕ್ಕಿತು. ಕೋಟ್ಯಾಂತರ ರೂಗಳ ಒಡೆಯ ಶುಭ್ಮನ್ ಗಿಲ್ಗೆ ಈ 5000 ರೂಗಳ ಬಹುಮಾನವನ್ನು ನೀಡಿದ್ದು ಬೇರ್ಯಾರು ಅಲ್ಲ, ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ತಂದೆ(PC-sher-e-punjab X).

ಗಿಲ್ ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆ ಸರಣಿಯಲ್ಲಿ ಭಾರತ 1-0 ಅಂತರದಿಂದ ಜಯಗಳಿಸಿತು. ಅಂತರರಾಷ್ಟ್ರೀಯ ಪಂದ್ಯಗಳ ನಂತರ, ಗಿಲ್ ತಮ್ಮ ತವರು ರಾಜ್ಯದ ಲೀಗ್‌ನಲ್ಲಿ ಆಡುವ ಮೂಲಕ ರಾಜ್ಯ ಕ್ರಿಕೆಟ್ ಮಂಡಳಿಯ ಬೊಕ್ಕಸ ತುಂಬಿಸಲು ನೆರವಾಗುತ್ತಿದ್ದಾರೆ(PC-sher-e-punjab X).




