AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

14 ಬೌಂಡರಿ, 7 ಸಿಕ್ಸರ್; ಸಿಡಿಲಬ್ಬರದ ಶತಕ ಬಾರಿಸಿದ ಸ್ಮೃತಿ ಮಂಧಾನ

ದುಬೈನಲ್ಲಿ ನಡೆಯುತ್ತಿರುವ 2026ರ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಸ್ಮೃತಿ ಮಂಧಾನ ಅವರ ಸ್ಫೋಟಕ ಶತಕದ ನೆರವಿನಿಂದ ಭಾರತ ತಂಡ ಹಾಂಗ್ ಕಾಂಗ್-ಚೀನಾ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. ಮಂಧಾನ 124 ರನ್ ಗಳಿಸಿ ಮಿಂಚಿದರು, ಇದು ಅವರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನ ಎರಡನೇ ಶತಕವಾಗಿದೆ.

ಪೃಥ್ವಿಶಂಕರ
|

Updated on: Sep 03, 2026 | 9:37 PM

Share
ದುಬೈನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ಏಷ್ಯಾಕಪ್​ನಲ್ಲಿ ಭಾರತ ವನಿತಾ ಪಡೆ ಇಂದು ತನ್ನ ಎರಡನೇ ಪಂದ್ಯವನ್ನಾಡಿತು. ಈ ಪಂದ್ಯದಲ್ಲಿ ಹಾಂಗ್ ಕಾಂಗ್-ಚೀನಾ ತಂಡವನ್ನು ಎದುರಿಸಿದ ಹರ್ಮನ್​ಪ್ರೀತ್ ಕೌರ್ ಪಡೆ ಮೊದಲು ಬ್ಯಾಟಿಂಗ್‌ ಮಾಡಿ ನಿಗದಿತ 20 ಓವರ್​ಗಳಲ್ಲಿ 193 ರನ್ ಕಲೆಹಾಕಿತು(PC-PTI).

1 / 5
ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ ಉಪನಾಯಕಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಮಂಧಾನ ಬಾರಿಸಿದ ಎರಡನೇ ಶತಕವೂ ಆಗಿದೆ. ಹಾಗೆಯೇ ಮಂಧಾನ ಅವರ ವೃತ್ತಿಜೀವನದ 18ನೇ ಅಂತರರಾಷ್ಟ್ರೀಯ ಶತಕವೂ ಇದಾಗಿದೆ(PC-PTI).

2 / 5
57 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್​ಗಳ ಸಹಿತ ಮಂಧಾನ ತಮ್ಮ ಶತಕ ಪೂರೈಸಿದರು. ಆರಂಭದಿಂದ ತಾಳ್ಮೆಯ ಬ್ಯಾಟಿಂಗ್‌ ಮಾಡಿದ ಮಂಧಾನ ತಮ್ಮ ಅರ್ಧಶತಕ ಪೂರೈಸಲು ಬರೋಬ್ಬರಿ 40 ಎಸೆತಗಳನ್ನು ತೆಗೆದುಕೊಂಡರು. ಅರ್ಧಶತಕದ ಬಳಿಕ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿದ ಮಂಧಾನ ಮೈದಾನದಲ್ಲಿ  ಬೌಂಡರಿಗಳ ಮಳೆಗರೆದರು(PC-PTI).

3 / 5
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್​ಗೆ ಕೇವಲ 8 ಓವರ್​ಗಳಲ್ಲಿ 74 ರನ್​ಗಳ ಜೊತೆಯಾಟ ನೀಡಿದರು. ಶಫಾಲಿ 28 ರನ್​ಗಳಿಗೆ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು(PC-PTI).

4 / 5
ಅದಾದ ಬಳಿಕವೂ ತಮ್ಮ ಎಂದಿನ ಆಟವನ್ನು ಮುಂದುವರೆಸಿದ ಮಂಧಾನ, ಮೊದಲ ಪಂದ್ಯದ ವೈಫಲ್ಯಕ್ಕೆ ಈ ಪಂದ್ಯದಲ್ಲಿ ಉತ್ತರ ನೀಡಿದರು. ಕೊನೆಯ ಓವರ್​ನಲ್ಲಿ ರನೌಟ್​ಗೆ ಬಲಿಯಾದ ಮಂಧಾನ ತಮ್ಮ ಈ ಶತಕದ ಇನ್ನಿಂಗ್ಸ್​ನಲ್ಲಿ 64 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 124 ರನ್ ಬಾರಿಸಿದರು(PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್

ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?

ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ

ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ

ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್

ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ

ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!

ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್

ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!

ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ