AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನ್ಮ ದಿನದಂದೇ ಸೌರವ್ ಗಂಗೂಲಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ

Sourav Ganguly Hall of Fame: ಸೌರವ್ ಗಂಗೂಲಿ ತಮ್ಮ 54ನೇ ಜನ್ಮದಿನದಂದು ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡಿದ್ದಾರೆ. ಭಾರತ ಕ್ರಿಕೆಟ್‌ನಲ್ಲಿ ಗಂಗೂಲಿಯವರ ಅಪ್ರತಿಮ ಕೊಡುಗೆ, ವಿಶೇಷವಾಗಿ ನಾಯಕರಾಗಿ ತಂಡವನ್ನು ಮುನ್ನಡೆಸಿ ಅನೇಕ ಪ್ರತಿಭೆಗಳನ್ನು ಬೆಳೆಸಿದ್ದು ಸ್ಮರಣೀಯ. ಈ ಗೌರವಕ್ಕೆ ಪಾತ್ರರಾದ 12ನೇ ಭಾರತೀಯ ಕ್ರಿಕೆಟಿಗ ಇವರಾಗಿದ್ದು, ಭಾರತೀಯ ಕ್ರಿಕೆಟ್‌ಗೆ ಮತ್ತೊಂದು ಗರಿ ಬಂದಿದೆ. ಇದು ಗಂಗೂಲಿಯವರ ನಾಯಕತ್ವ ಮತ್ತು ಆಟಗಾರನಾಗಿ ಅವರ ಅಗಾಧ ಸಾಧನೆಗೆ ಸಂದ ಗೌರವ.

ಪೃಥ್ವಿಶಂಕರ
|

Updated on: Jul 08, 2026 | 9:10 PM

Share
ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಇಂದು ಅಂದರೆ ಜುಲೈ 8 ರಂದು ತಮ್ಮ 54ನೇ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ ಗಂಗೂಲಿ ಭಾರತ ಕ್ರಿಕೆಟ್​ಗೆ ನೀಡಿದ ಕೊಡುಗೆಗಳು ಅಪಾರ. ಗಂಗೂಲಿ ನಾಯಕರಾಗಿದ್ದಾಗ ಟೀಂ ಇಂಡಿಯಾಕ್ಕೆ ಸೇರಿದ ಆಟಗಾರರು ತಂಡವನ್ನು ಹಲವು ಸ್ಮರಣೀಯ ಗೆಲುವಿನತ್ತ ಕೊಂಡೊಯ್ದರು. ಅವರಲ್ಲಿ ಧೋನಿ, ಯುವರಾಜ್, ಸೆಹ್ವಾಗ್, ಜಹೀರ್ ಖಾನ್​ರಂತಹ ಶ್ರೇಷ್ಠ ಆಟಗಾರರಿದ್ದಾರೆ (PC-PTI).

1 / 5
ಇಂತಹ ಗಂಗೂಲಿಗೆ ಭಾರತ ಕ್ರಿಕೆಟ್​ನಲ್ಲಿ ಅಪಾರ ಗೌರವ ಸಂದಿದೆ. ಇದೀಗ ಗಂಗೂಲಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದಲೂ ಸ್ಮರಣೀಯ ಕಾಣಿಕೆಯೊಂದು ಸಿಕ್ಕಿದೆ. ತನ್ನ ಹುಟುಹಬ್ಬದ ಸಂತಸದಲ್ಲಿರುವ ಗಂಗೂಲಿ ಐಸಿಸಿ ಹಾಲ್ ಆಫ್ ಫೇಮ್​ ಗೌರವಕ್ಕೆ ಭಾಜನರಾಗಿದ್ದಾರೆ (PC-PTI).

2 / 5
ಈ ವಿಚಾರವನ್ನು ಸ್ವತಃ ಗಂಗೂಲಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ‘ನನ್ನನ್ನು ಹಾಲ್ ಆಫ್ ಫೇಮ್‌ಗೆ ಸೇರಿಸಿದ್ದಕ್ಕಾಗಿ ಐಸಿಸಿ ಮತ್ತು ಅಧ್ಯಕ್ಷ ಜಯ್ ಶಾ ಅವರಿಗೆ ಧನ್ಯವಾದಗಳು. ಇದು ಒಂದು ದೊಡ್ಡ ಗೌರವ. ಇಲ್ಲಿಯವರೆಗೆ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಕೇವಲ 10 ಭಾರತೀಯರಲ್ಲಿ ಒಬ್ಬರಾಗಿರುವುದು ಅದ್ಭುತವಾಗಿದೆ. ಕೆಲವು ಶ್ರೇಷ್ಠ ಹೆಸರುಗಳ ಭಾಗವಾಗುವುದು ಅದ್ಭುತವಾಗಿದೆ’ ಎಂದು ಬರೆದುಕೊಂಡಿದ್ದಾರೆ (PC-PTI).

3 / 5
ಸೌರವ್ ಗಂಗೂಲಿ ಅವರ ಸೇರ್ಪಡೆಯೊಂದಿಗೆ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಭಾರತೀಯ ಪುರುಷ ಕ್ರಿಕೆಟಿಗರ ಸಂಖ್ಯೆ 10 ಕ್ಕೇರಿದೆ. ಇವರ ಜೊತೆಗೆ ಇಬ್ಬರು ಭಾರತೀಯ ಮಹಿಳಾ ಕ್ರಿಕೆಟಿಗರು ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂದರೆ ಭಾರತ ಕ್ರಿಕೆಟ್​ಬಿಂದ ಈ ಗೌರವಕ್ಕೆ ಭಾಜನರಾದ 12 ನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಗಂಗೂಲಿ ಪಾತ್ರರಾಗಿದ್ದಾರೆ (PC-PTI).

4 / 5
ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾದ ಭಾರತೀಯರಲ್ಲಿ, ಸುನಿಲ್ ಗವಾಸ್ಕರ್ (2009), ಬಿಶನ್ ಸಿಂಗ್ ಬೇಡಿ (2009), ಕಪಿಲ್ ದೇವ್ (2009), ಅನಿಲ್ ಕುಂಬ್ಳೆ (2015), ರಾಹುಲ್ ದ್ರಾವಿಡ್ (2018), ಸಚಿನ್ ತೆಂಡೂಲ್ಕರ್ (2019), ವಿನೂ ಮಂಕಡ್ (2021), ಡಯಾನಾ ಎಡುಲ್ಜಿ (2023), ವೀರೇಂದ್ರ ಸೆಹ್ವಾಗ್ (2023), ನೀತು ಡೇವಿಡ್ (2024), ಎಂಎಸ್ ಧೋನಿ (2025), ಸೌರವ್ ಗಂಗೂಲಿ (2026) (PC-PTI).

5 / 5
Follow Us
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ

ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್

ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?

ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ

ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ

2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ

ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ

ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ

ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ

ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ