- Kannada News Photo gallery Cricket photos South Africa Cricketers wife hot picture Ind vs Sa T20 Series
IND vs SA: ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ ಸೌತ್ ಆಫ್ರಿಕಾ ಕ್ರಿಕೆಟಿಗರ ಮಡದಿಯರು; ಫೋಟೋ ನೋಡಿ
IND vs SA: ಟಿ20 ಸರಣಿ ಆಡುವ ಉದ್ದೇಶದಿಂದ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸದಲ್ಲಿದೆ. 5 ಟಿ20 ಪಂದ್ಯಗಳ ಸರಣಿಯ 3 ಪಂದ್ಯಗಳನ್ನು ಆಡಲಾಗಿದ್ದು, ಇದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಸ್ತುತ 2-1 ಅಂತರದಲ್ಲಿದೆ.
Updated on:Jun 15, 2022 | 4:03 PM



ಲೆರಿಶಾ- ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಅವರ ಪತ್ನಿ ಲೆರಿಶಾ ತುಂಬಾ ಸುಂದರವಾಗಿದ್ದಾರೆ. ಅವರು ಹೆಚ್ಚಿನ ಸಂದರ್ಭಗಳಲ್ಲಿ ಮೈದಾನದಲ್ಲಿ ಉಪಸ್ಥಿತರಿರುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಹುರಿದುಂಬಿಸುತ್ತಾರೆ. ಲೆರಿಶಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

ಲಾರಾ ವ್ಯಾನ್ ದುಸೆನ್- ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಾಸಿ ವ್ಯಾನ್ ಡೆರ್ ದುಸೆನ್ ಅವರ ಪತ್ನಿ. ಐಪಿಎಲ್ 2022 ರ ಸಮಯದಲ್ಲಿ ಅವರು ಸಖತ್ ಸುದ್ದಿಯಲ್ಲಿದ್ದರು. ಐಪಿಎಲ್‌ನಲ್ಲಿ ದುಸೇನ್ ರಾಜಸ್ಥಾನ್ ರಾಯಲ್ಸ್‌ನ ಭಾಗವಾಗಿದ್ದಾರೆ. ಆದ್ದರಿಂದ ರಾಜಸ್ಥಾನದ ಪ್ರತಿ ಪಂದ್ಯದಲ್ಲೂ ಲಾರಾ ವ್ಯಾನ್ ದುಸೆನ್ ಮೈದಾನದಲ್ಲಿ ಇರುತ್ತಿದ್ದರು. ಕೆಲವೊಮ್ಮೆ, ಅಭಿಮಾನಿಗಳು ಅವರನ್ನು ಜಾಸ್ ಬಟ್ಲರ್ ಅವರ ಪತ್ನಿ ಎಂದು ತಪ್ಪಾಗಿ ಗ್ರಹಿಸಿದ್ದರು.

ನಿಕೋಲ್ ಡೇನಿಯಲ್ಸ್ - ನಿಕೋಲ್ ಡೇನಿಯಲ್ಸ್ ಐಡನ್ ಮಾರ್ಕ್ರಾಮ್ ಅವರ ಭಾವಿ ಪತ್ನಿ. ನಿಕೋಲ್ ಡೇನಿಯಲ್ಸ್ ನೋಟದಲ್ಲಿ ತುಂಬಾ ಗ್ಲಾಮರಸ್. ಬಾಲಿವುಡ್ ಹೀರೋಯಿನ್ಗಳ ವೈಭವಕ್ಕೂ ಕಡಿವಾಣ ಬೀಳುವಂತದ್ದು ಅವರ ಸ್ಟೈಲ್. ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿರುವ ಏಡನ್ ಮಾರ್ಕ್ರಾಮ್ ಮತ್ತು ನಿಕೋಲ್ ಇಷ್ಟರಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಬಹುದು.

ಮೈಕೆಲಾ ಕ್ಲೆಯು- ಮೈಕೆಲಾ ಕ್ಲೆಯು ವಿಶ್ವದ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಎನ್ರಿಕ್ ನಾರ್ಚಿಯಾ ಅವರ ಪತ್ನಿ. ನಾರ್ಖಿಯಾ ತನ್ನ ಮಾರಕ ಬೌಲಿಂಗ್ನಿಂದ ಬ್ಯಾಟರ್ಗಳನ್ನು ಬಲಿಪಡೆಯುತ್ತಿದ್ದರೆ, ಅವರ ಹೆಂಡತಿ ಮೈದಾನದ ಹೊರಗೆ ತನ್ನ ಸೌಂದರ್ಯದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಂದಹಾಗೆ, ಎನ್ರಿಕ್ ಅವರ ಪತ್ನಿ ಮೈಕೆಲಾ ವೃತ್ತಿಯಲ್ಲಿ ಶಿಕ್ಷಕಿ ಯಾಗಿದ್ದಾರೆ.
Published On - 3:57 pm, Wed, 15 June 22




