AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs KKR: ಕಣಕ್ಕಿಳಿಯುವ ಮುನ್ನವೇ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ಸುನಿಲ್ ನರೈನ್

KKR Star Sunil Narine Makes History: ಐಪಿಎಲ್ 2026 ರ ಎರಡನೇ ಪಂದ್ಯದಲ್ಲಿ ಕೆಕೆಆರ್‌ನ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೈನ್ ಮುಂಬೈ ಇಂಡಿಯನ್ಸ್ ವಿರುದ್ಧ ಆಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಇದು ಅವರ 190ನೇ ಐಪಿಎಲ್ ಪಂದ್ಯವಾಗಿದ್ದು, ಕೀರನ್ ಪೊಲಾರ್ಡ್ ಅವರನ್ನು ಹಿಂದಿಕ್ಕಿ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನರೈನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೆಕೆಆರ್‌ಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಪೃಥ್ವಿಶಂಕರ
|

Updated on: Mar 29, 2026 | 9:32 PM

Share
ಐಪಿಎಲ್ 2026 ರ ಸೀಸನ್​ಗೆ ಭರ್ಜರಿ ಆರಂಭ ಸಿಕ್ಕಿದೆ. ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಈ ಸೀಸನ್‌ನ ಮೊದಲ ಪಂದ್ಯ ಹಲವಾರು ದಾಖಲೆಗಳನ್ನು ನಿರ್ಮಿಸಿತ್ತು. ಇದೀಗ ಈ ಆವೃತ್ತಿಯ ಎರಡನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್‌ನ ಅನುಭವಿ ಆಲ್‌ರೌಂಡರ್ ಸುನಿಲ್ ನರೈನ್ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.

1 / 5
ಐಪಿಎಲ್ 2026 ರ ಎರಡನೇ ಪಂದ್ಯವು ಮಾರ್ಚ್ 29 ರ ಭಾನುವಾರದಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಕೆಕೆಆರ್ ತಂಡದ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೈನ್ ನಿರೀಕ್ಷೆಯಂತೆ ಪ್ಲೇಯಿಂಗ್-11 ರಲ್ಲಿ ಸ್ಥಾನ ಪಡೆದರು.

2 / 5
ಇದರೊಂದಿಗೆ, ಸುನಿಲ್ ನರೈನ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ವಿದೇಶಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದು ಸುನಿಲ್ ನರೈನ್ ಅವರ 190 ನೇ ಐಪಿಎಲ್ ಪಂದ್ಯವಾಗಿದ್ದು, ಈ ಮೂಲಕ ಅವರು ಕೀರನ್ ಪೊಲಾರ್ಡ್ ಅವರ ದಾಖಲೆಯನ್ನು ಸಹ ಮುರಿದಿದ್ದಾರೆ.

3 / 5
ದಾಖಲೆಯ 190ನೇ ಐಪಿಎಲ್ ಪಂದ್ಯಕ್ಕೂ ಮೊದಲು ನರೈನ್, ಆಡಿರುವ 189 ಪಂದ್ಯಗಳಲ್ಲಿ 192 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರ ಜೊತೆಗೆ ಬ್ಯಾಟಿಂಗ್​ನಲ್ಲೂ ಮಿಂಚಿರುವ ನರೈನ್ 1780 ರನ್‌ಗಳನ್ನು ಕಲೆಹಾಕಿದ್ದರು. ಗಮನಾರ್ಹವಾಗಿ, ನರೈನ್ ಈ ಎಲ್ಲಾ ಪಂದ್ಯಗಳನ್ನು ಕೆಕೆಆರ್ ಪರ ಆಡಿರುವುದು ಮತ್ತೊಂದು ವಿಶೇಷವಾದ ಸಂಗತಿಯಾಗಿದೆ.

4 / 5
ಅತಿ ಹೆಚ್ಚು ಪಂದ್ಯಗಳನ್ನಾಡಿರುವ ವಿದೇಶಿ ಆಟಗಾರರ ಪಟ್ಟಿಯಲ್ಲಿ ನರೈನ್ ನಂತರ ವೆಸ್ಟ್ ಇಂಡೀಸ್ ತಂಡದ ಸಹ ಆಟಗಾರ ಕೀರನ್ ಪೊಲಾರ್ಡ್ ಇದ್ದಾರೆ, ಅವರು 189 ಪಂದ್ಯಗಳನ್ನು ಆಡಿದ್ದಾರೆ. ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ 184 ಪಂದ್ಯಗಳನ್ನು ಆಡಿದ್ದು ಮೂರನೇ ಸ್ಥಾನದಲ್ಲಿದ್ದಾರೆ.

5 / 5
Follow Us
‘ಧುರಂಧರ್ 2’, ‘ಕೇರಳ ಸ್ಟೋರಿ’ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ

ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್!

ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?

ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ರಾಮ ಮಂದಿರದಲ್ಲಿ ಹನುಮ ಭಕ್ತಿ;ಮಂಗಳಾರತಿವರೆಗೂ ಕಾದು ಪ್ರಾರ್ಥನೆಗೈದ ಕೋತಿ

ಬಿಜೆಪಿ ಎಲ್ಡಿಎಫ್​, ಯುಡಿಎಫ್ ಹಗರಣಗಳನ್ನು ಬಯಲು ಮಾಡುತ್ತೆ: ಪ್ರಧಾನಿ ಮೋದಿ

ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ, ಬೇಧಿ!

ಜೈಲುಪಾಲಾಗಿರುವ ಪುತ್ರ ಪ್ರಜ್ವಲ್ ಗಾಗಿ ತಂದೆ ರೇವಣ್ಣ ವಿಶೇಷ ಪೂಜೆ