- Kannada News Photo gallery Cricket photos T20 World Cup 2026: India Wins, Record Prize Money Revealed for Champions and Runners Up
T20 World Cup Prize Money: ಚಾಂಪಿಯನ್ ಭಾರತಕ್ಕೆ ಸಿಕ್ಕಿದೆಷ್ಟು? ಉಳಿದ 19 ತಂಡಗಳಿಗೂ ಕೋಟಿ ಹಣ
T20 World Cup Prize Money: 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದಿದೆ. ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡವಾಗಿ ಭಾರತ ದಾಖಲೆ ಸೃಷ್ಟಿಸಿದೆ. ಈ ಐತಿಹಾಸಿಕ ಗೆಲುವಿಗೆ ಟೀಂ ಇಂಡಿಯಾಗೆ ₹27.48 ಕೋಟಿ ಬಹುಮಾನ ದೊರೆತಿದ್ದು, ರನ್ನರ್ ಅಪ್ ನ್ಯೂಜಿಲೆಂಡ್ ತಂಡಕ್ಕೆ ₹14.65 ಕೋಟಿ ಲಭಿಸಿದೆ. ಪಂದ್ಯದಲ್ಲಿ ಸಂಜು ಸ್ಯಾಮ್ಸನ್, ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರ ವಹಿಸಿದರು.
Updated on: Mar 09, 2026 | 3:53 PM

ಟೀಂ ಇಂಡಿಯಾ ಅಭಿಮಾನಿಗಳು ಯಾವುದನ್ನು ನಿರೀಕ್ಷಿಸಿದ್ದರೋ ಅದೇ ಆಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. ಇದರೊಂದಿಗೆ ಟೀಂ ಇಂಡಿಯಾ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡವೆಂಬ ದಾಖಲೆಯನ್ನು ನಿರ್ಮಿಸಿದೆ.

ತವರಿನ ಅಭಿಮಾನಿಗಳ ಮುಂದೆ ಐತಿಹಾಸಿಕ ಸಾಧನೆ ಮಾಡಿದ ಟೀಂ ಇಂಡಿಯಾಗೆ ಐಸಿಸಿ ವತಿಯಿಂದ ಟ್ರೋಫಿ ಜೊತೆಗೆ ದೊಡ್ಡ ಮೊತ್ತದ ಬಹುಮಾನವು ಸಿಗಲಿದೆ. ಟೀಂ ಇಂಡಿಯಾಗೆ ಮಾತ್ರವಲ್ಲದೆ, ರನ್ನರ್ ಅಪ್ ತಂಡವಾದ ಕಿವೀಸ್ಗೂ ಕೋಟಿ ಕೋಟಿ ಹಣ ಸಿಗಲಿದೆ. ಹಾಗಿದ್ದರೆ, ಈ ಎರಡು ತಂಡಗಳಿಗೆ ಐಸಿಸಿ ಖಜಾನೆಯಿಂದ ಎಷ್ಟೆಷ್ಟು ಹಣ ಸಿಗಲಿದೆ ಎಂಬುದನ್ನು ನೋಡುವುದಾದರೆ..

2026 ರ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಕ್ಕೆ ಸುಮಾರು 27.48 ಕೋಟಿ ರೂ. ಬಹುಮಾನ ಸಿಕ್ಕಿದೆ. ಇದು ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ, ಬಹುಮಾನದ ಗಾತ್ರದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಏಕೆಂದರೆ ಕಳೆದ ಆವೃತ್ತಿಯ ಚಅಂಪಿಯನ್ ಆಗಿದ್ದ ಭಾರತ ತಂಡಕ್ಕೆ 20.42 ಕೋಟಿ ರೂ. ಬಹುಮಾನ ಪಡೆದಿತ್ತು. ಆದರೆ ಈ ಆವೃತ್ತಿಯಲ್ಲಿ ಭಾರತಕ್ಕೆ 7 ಕೋಟಿ ರೂ. ಅಧಿಕವಾಗಿ ಸಿಕ್ಕಿದೆ.

ಮತ್ತೊಂದೆಡೆ ಫೈನಲ್‌ನಲ್ಲಿ ಸೋತ ನ್ಯೂಜಿಲೆಂಡ್ ತಂಡಕ್ಕೂ ಸುಮಾರು ರೂ. 14.65 ಕೋಟಿ ರೂ. ಬಹುಮಾನ ಸಿಕ್ಕಿದೆ. ಉಳಿದಂತೆ ಸೆಮಿಫೈನಲ್ನಲ್ಲಿ ಸೋತ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳಿಗೂ ತಲಾ 7.24 ಕೋಟಿ ರೂ. ಬಹುಮಾನ ನೀಡಲಾಗಿದೆ. ಇದಲ್ಲದೆ, ಸೂಪರ್ 8 ಹಂತವನ್ನು ತಲುಪಿದ ಆದರೆ ಸೆಮಿಫೈನಲ್ ತಲುಪಲು ವಿಫಲವಾದ ಪ್ರತಿ ತಂಡಕ್ಕೂ ಸುಮಾರು 3.48 ಕೋಟಿ ರೂ. ಬಹುಮಾನ ನೀಡಲಾಗಿದೆ. ಹಾಗೆಯೇ ಗುಂಪು ಹಂತದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಸುಮಾರು 2.29 ಕೋಟಿ ರೂ. ಹಣ ಸಿಕ್ಕಿದೆ.

ಇನ್ನು ಈ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅದ್ಭುತ ಪ್ರದರ್ಶನ ನೀಡಿತು. ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 89 ರನ್ ಗಳಿಸಿ ತಂಡವು 5 ವಿಕೆಟ್‌ಗೆ 255 ರನ್ ಗಳಿಸಲು ಸಹಾಯ ಮಾಡಿದರು. ಉತ್ತರವಾಗಿ, ನ್ಯೂಜಿಲೆಂಡ್ 159 ರನ್‌ಗಳಿಗೆ ಆಲೌಟ್ ಆಯಿತು. ಜಸ್ಪ್ರೀತ್ ಬುಮ್ರಾ 15 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರೆ, ಅಕ್ಷರ್ ಪಟೇಲ್ 3 ವಿಕೆಟ್‌ಗಳನ್ನು ಪಡೆದರು.
