AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವಿಶ್ವಕಪ್‌ನಲ್ಲಿ ಅಧಿಕ ಬಾರಿ ಸೊನ್ನೆ ಸುತ್ತಿದ ಬ್ಯಾಟರ್​ ಯಾರು ಗೊತ್ತಾ?

T20 World Cup most ducks: 2026ರ ಟಿ20 ವಿಶ್ವಕಪ್ ಸಿದ್ಧತೆಗಳ ನಡುವೆ, ಟೂರ್ನಿಯ ಇತಿಹಾಸದಲ್ಲಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ಆಟಗಾರರ ಪಟ್ಟಿ ಇಲ್ಲಿದೆ. ಇದುವರೆಗೆ 9 ಆವೃತ್ತಿಗಳು ನಡೆದಿವೆ. ಈ ಅನಪೇಕ್ಷಿತ ದಾಖಲೆಯಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಹಾಗೂ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ತಲಾ ಐದು ಬಾರಿ ಶೂನ್ಯಕ್ಕೆ ಔಟಾಗಿ ಮೊದಲ ಸ್ಥಾನದಲ್ಲಿದ್ದಾರೆ. ಇತರ ಆಟಗಾರರಾದ ಡಾಕ್ರೆಲ್, ಮ್ಯಾಕ್ಲಿಯೋಡ್ ಮತ್ತು ವ್ಯಾನ್ ಡೆರ್ ಮೆರ್ವೆ ನಾಲ್ಕು ಬಾರಿ ಸೊನ್ನೆ ಸುತ್ತಿ ದಾಖಲೆ ನಿರ್ಮಿಸಿದ್ದಾರೆ.

ಪೃಥ್ವಿಶಂಕರ
|

Updated on: Feb 04, 2026 | 5:19 PM

Share
2026 ರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಇದುವರೆಗೆ 9 ಆವೃತ್ತಿಗಳು ನಡೆದಿದ್ದು, ಇದೀಗ 10ನೇ ಆವೃತ್ತಿ ಗೆಲ್ಲಲು 20 ತಂಡಗಳ ನಡುವೆ ಕದನ ಏರ್ಪಟ್ಟಿದೆ. ಆದರೆ ಈ ಟೂರ್ನಿ ಆರಂಭಕ್ಕೂ ಮುನ್ನ ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ಬ್ಯಾಟ್ಸ್‌ಮನ್ ಅಧಿಕ ಬಾರಿ ಸೊನ್ನೆ ಸುತ್ತಿದ್ದಾರೆ ಎಂಬುದರ ಪಟ್ಟಿಯನ್ನು ನಾವು ನಿಮಗೆ ನೀಡಲಿದ್ದೇವೆ.

1 / 6
ಟಿ20 ವಿಶ್ವಕಪ್ ಇತಿಹಾಸದಲ್ಲಿ ಅಧಿಕ ಬಾರಿ ಸೊನ್ನೆ ಸುತ್ತಿದ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅವರು ಮೊದಲ ಸ್ಥಾನದಲ್ಲಿದ್ದಾರೆ. ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದಂತೆ ಬ್ಯಾಟ್ ಬೀಸುತ್ತಿದ್ದ ಅಫ್ರಿದಿ ಈ ಟೂರ್ನಿಯಲ್ಲಿ ಐದು ಬಾರಿ ಖಾತೆ ತೆರೆಯದೆ ಔಟಾಗಿದ್ದಾರೆ.

2 / 6
ಎರಡನೇ ಸ್ಥಾನದಲ್ಲರುವ ಶ್ರೀಲಂಕಾದ ಸ್ಫೋಟಕ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶಾನ್ ಕೂಡ ಅಫ್ರಿದಿಯಂತೆ ಐದು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಆದಾಗ್ಯೂ ಲಂಕಾ ಕ್ರಿಕೆಟ್​ಗೆ ದಿಲ್ಶನ್ ನೀಡಿರುವ ಕೊಡುಗೆ ಸ್ಮರಣೀಯವಾಗಿದೆ ಲಂಕಾ ತಂಡದ ವಿಶ್ವಕಪ್ ಗೆಲುವಿನಲ್ಲಿ  ತಿಲಕರತ್ನೆ ದಿಲ್ಶಾನ್ ಅವರ ಪಾತ್ರ ಪ್ರಮುಖವಾಗಿತ್ತು.

3 / 6
ಇವರಿಬ್ಬರ ನಂತರದ ಸ್ಥಾನದಲ್ಲಿ ಐರ್ಲೆಂಡ್​ನ ಜಿ.ಎಚ್. ​​ಡಾಕ್ರೆಲ್ ಇದ್ದಾರೆ. ಡಾಕ್ರೆಲ್ ಟಿ20 ವಿಶ್ವಕಪ್​ನಲ್ಲಿ 4 ಬಾರಿ ಸೊನ್ನೆಗೆ ಔಟಾಗಿದ್ದಾರೆ. ಡಾಕ್ರೆಲ್ 2010 ರಿಂದ 2024 ರವರೆಗೆ ನಡೆದ ವಿಶ್ವಕಪ್ ಸ್ಪರ್ಧೆಗಳಲ್ಲಿ 19 ಪಂದ್ಯಗಳನ್ನು ಆಡಿದ್ದು, 4 ಬಾರಿ ಡಕ್ ಔಟ್ ಆಗಿದ್ದರು.

4 / 6
ಸ್ಕಾಟ್ಲೆಂಡ್​ನ ಸಿ.ಎಸ್. ಮ್ಯಾಕ್ಲಿಯೋಡ್ ಕೂಡ 4 ಬಾರಿ ಡಕ್ ಔಟ್ ಆಗಿದ್ದು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸ್ಕಾಟ್ಲೆಂಡ್‌ ತಂಡದ ಒರ 2009-2022 ರ ನಡುವೆ 13 ಪಂದ್ಯಗಳನ್ನು ಆಡಿದ್ದ ಸಿ.ಎಸ್. ಮ್ಯಾಕ್ಲಿಯೋಡ್ 11 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, 4 ಬಾರಿ ಖಾತೆ ತೆರೆಯದೆ ಪೆವಿಲಿಯನ್‌ ಸೇರಿಕೊಂಡಿದ್ದರು.

5 / 6
ತಮ್ಮ ವೃತ್ತಿಜೀವನದಲ್ಲಿ ನೆದರ್ಲ್ಯಾಂಡ್ಸ್ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ಎರಡು ರಾಷ್ಟ್ರೀಯ ತಂಡಗಳ ಪರ ಕ್ರಿಕೆಟ್ ಆಡಿದ್ದ ಆರ್.ಇ. ವ್ಯಾನ್ ಡೆರ್ ಮೆರ್ವೆ ಕೂಡ 4 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಎರಡೂ ದೇಶಗಳನ್ನು ಪ್ರತಿನಿಧಿಸಿದ್ದ ವ್ಯಾನ್ ಡೆರ್ ಮೆರ್ವೆ, 2009 ರಿಂದ 2022 ರವರೆಗೆ ನಡೆದ ಟಿ20 ವಿಶ್ವಕಪ್‌ಗಳಲ್ಲಿ 21 ಪಂದ್ಯಗಳನ್ನು ಆಡಿದ್ದು, 4 ಬಾರಿ ಡಕ್ ಔಟ್ ಆಗುವ ಮೂಲಕ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

6 / 6
ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ

ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!

ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ

ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್

ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ

ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ

ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು

ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು

ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ

ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ