- Kannada News Photo gallery Cricket photos Tim David's IPL 1000 Runs: RCB Star Becomes 2nd Fastest to Milestone
RCB vs DC: 74 ಸಿಕ್ಸರ್, 64 ಬೌಂಡರಿ.! 560 ಎಸೆತಗಳಲ್ಲಿ ಇತಿಹಾಸ ಸೃಷ್ಟಿಸಿದ ಟಿಮ್ ಡೇವಿಡ್
Tim David's IPL 1000 Runs: ಐಪಿಎಲ್‌ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆರ್ಸಿಬಿಯ ಟಿಮ್ ಡೇವಿಡ್ ಎರಡನೇ ಸ್ಥಾನಕ್ಕೇರಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 26 ರನ್ ಗಳಿಸಿ ಈ ಮೈಲಿಗಲ್ಲು ತಲುಪಿದರು. ಟ್ರಾವಿಸ್ ಹೆಡ್ ಮತ್ತು ಫಿಲ್ ಸಾಲ್ಟ್ ಅವರ ದಾಖಲೆಗಳನ್ನು ಮುರಿದ ಡೇವಿಡ್, ಆಂಡ್ರೆ ರಸೆಲ್ ಅವರ ದಾಖಲೆಯನ್ನು ಮೀರುವಲ್ಲಿ ವಿಫಲರಾಗಿದ್ದಾರೆ. ಇದು ಅವರ ವೃತ್ತಿಜೀವನದ ಮಹತ್ವದ ಸಾಧನೆಯಾಗಿದೆ
Updated on: Apr 18, 2026 | 6:07 PM

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು, ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದವರು ಮತ್ತು ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳೆ ಮುಂಚೂಣಿಯಲ್ಲಿದ್ದಾರೆ. ಆದರೆ ಇದೆಲ್ಲದರ ನಡುವೆ ಅತಿ ವೇಗವಾಗಿ ರನ್ ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಆರ್ಸಿಬಿಯ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಇದೀಗ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಐಪಿಎಲ್ 2026 ರ 26 ನೇ ಪಂದ್ಯ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ 26 ರನ್ಗಳ ಇನ್ನಿಂಗ್ಸ್ ಆಡಿದ ಡೇವಿಡ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 1,000 ರನ್‌ಗಳನ್ನು ಪೂರೈಸಿದರು. ಈ ಮೂಲಕ ಅತಿ ವೇಗವಾಗಿ 1000 ರನ್‌ಗಳನ್ನು ಪೂರೈಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ಕಳೆದ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಟಿಮ್ ಡೇವಿಡ್ ಕೇವಲ 560 ಎಸೆತಗಳಲ್ಲಿ 1,000 ರನ್ ಪೂರೈಸಿದ್ದಾರೆ. ಈ ಮೂಲಕ ಟ್ರಾವಿಸ್ ಹೆಡ್ (575 ಎಸೆತಗಳು) ಮತ್ತು ಫಿಲ್ ಸಾಲ್ಟ್ (575 ಎಸೆತಗಳು) ಅವರಂತಹ ದಂತಕಥೆಯ ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿದ್ದಾರೆ.

ಆದಾಗ್ಯೂ, ಟಿಮ್ ಡೇವಿಡ್ಗೆ ವಿಂಡೀಸ್ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್‌ನ ಮಾಜಿ ಆಲ್‌ರೌಂಡರ್ ಆಂಡ್ರೆ ರಸೆಲ್ ಕೇವಲ 545 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದು, ಈ ದಾಖಲೆಯನ್ನು ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ.

ಟಿಮ್ ಡೇವಿಡ್ ಎದುರಿಸಿರುವ ಈ 560 ಎಸೆತಗಳಲ್ಲಿ 74 ಸಿಕ್ಸರ್ ಮತ್ತು 64 ಬೌಂಡರಿಗಳನ್ನು ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ ಆಡಿರುವ 56 ಪಂದ್ಯಗಳ 50 ಇನ್ನಿಂಗ್ಸ್‌ಗಳಲ್ಲಿ ಡೇವಿಡ್ 1,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.




