AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಭವ್ ಸೂರ್ಯವಂಶಿ ಸಿಡಿಲಬ್ಬರ… ಭರ್ಜರಿ ದಾಖಲೆ ಜಸ್ಟ್ ಮಿಸ್..!

Vaibhav suryavanshi: ವೈಭವ್ ಸೂರ್ಯವಂಶಿ ಐಪಿಎಲ್​ನಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ 11 ಸಿಕ್ಸ್​ ಹಾಗೂ 7 ಫೋರ್​ಗಳೊಂದಿಗೆ 101 ರನ್ ಬಾರಿಸಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಸೆಂಚುರಿ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ರಣಜಿ ಟೂರ್ನಿಯಲ್ಲೂ ಇಂತಹದ್ದೇ ಭರ್ಜರಿ ದಾಖಲೆ ಬರೆಯುವ ಅವಕಾಶವನ್ನು ವೈಭವ್ ಕೈಚೆಲ್ಲಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on:Nov 05, 2025 | 9:26 AM

Share
ರಣಜಿ ಟೂರ್ನಿಯಲ್ಲೂ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರ ಶುರುವಾಗಿದೆ. ಈ ಸಿಡಿಲಬ್ಬರದೊಂದಿಗೆ ಭರ್ಜರಿ ದಾಖಲೆ ಬರೆಯುವ ಹೊಸ್ತಿಲಿಗೆ ತಲುಪಿದ್ದರು. ಆದರೆ ಶತಕದಂಚಿನಲ್ಲಿ ಎಡವಿ 37 ವರ್ಷಗಳ ಹಳೆಯ ದಾಖಲೆ ಮುರಿಯುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.

1 / 6
ಪಾಟ್ನಾದ ಮೊಹಿನುಲ್ ಹಕ್ ಸ್ಟೇಡಿಯಂನಲ್ಲಿ ನಡೆದ ರಣಜಿ ಪ್ಲೇಟ್ ಪಂದ್ಯದಲ್ಲಿ ಮೇಘಾಲಯ ಹಾಗೂ ಬಿಹಾರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಿಹಾರ ಪರ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಮೊದಲ ಇನಿಂಗ್ಸ್​​ನಲ್ಲಿ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

2 / 6
ಈ ಮ್ಯಾಚ್​​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಮೊದಲ ಓವರ್​​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಹಾಫ್ ಸೆಂಚುರಿ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ವೈಭವ್ ಸೂರ್ಯವಂಶಿ 67 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 9 ಫೋರ್​​​ಗಳೊಂದಿಗೆ 93 ರನ್ ಬಾರಿಸಿದರು.

3 / 6
ಆದರೆ ಶತಕಕ್ಕೆ ಇನ್ನೇನು 7 ರನ್​​​ಗಳು ಬೇಕಿದ್ದ ವೇಳೆ ಎಲ್​​ಬಿಡಬ್ಲ್ಯೂ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ರಣಜಿ ಟೂರ್ನಿಯಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಬರೆಯುವ ಅವಕಾಶವನ್ನು ವೈಭವ್ ಸೂರ್ಯವಂಶಿ ಕೈಚೆಲ್ಲಿಕೊಂಡರು.

4 / 6
ಸದ್ಯ ಈ ದಾಖಲೆ ಧ್ರುವ್ ಪಾಂಡೋವ್ ಅವರ ಹೆಸರಿನಲ್ಲಿದೆ. 1988 ರಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಜಮ್ಮು ಕಾಶ್ಮೀರ ಪರ ಕಣಕ್ಕಿಳಿದಿದ್ದ ಧ್ರುವ್ ಪಾಂಡೋವ್ 137 ರನ್ ಬಾರಿಸಿದ್ದರು. ಈ ವೇಳೆ ಅವರ ವಯಸ್ಸು 14 ವರ್ಷ 293 ದಿನಗಳು. ಈ ಮೂಲಕ ರಣಜಿ ಟೂರ್ನಿ ಇತಿಹಾಸದಲ್ಲೇ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ದಾಖಲೆ ನಿರ್ಮಿಸಿದ್ದರು.

5 / 6
ಇದೀಗ 14 ವರ್ಷ 222 ದಿನಗಳಾಗಿರುವ ವೈಭವ್ ಸೂರ್ಯವಂಶಿ ಈ ದಾಖಲೆ ಮುರಿಯುವ ಹೊಸ್ತಿಲಿಗೆ ತಲುಪಿದ್ದರು. ಆದರೆ ಶತಕದಂಚಿನಲ್ಲಿ ವಿಕೆಟ್ ಕೈ ಚೆಲ್ಲುವ ಮೂಲಕ ಭರ್ಜರಿ ರೆಕಾರ್ಡ್​​ ತನ್ನದಾಗಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡರು. ಇದಾಗ್ಯೂ ಮುಂದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಹೊಸ ಇತಿಹಾಸ ಬರೆಯುವ ಅವಕಾಶ ವೈಭವ್ ಸೂರ್ಯವಂಶಿ ಮುಂದಿದೆ.

6 / 6

Published On - 7:33 am, Wed, 5 November 25

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಹೋಯ್ತು ವ್ಯಕ್ತಿಯ ಪ್ರಾಣ

36 ವರ್ಷಗಳ ಬಳಿಕ ರೋಚಕ ಜಯ ಸಾಧಿಸಿದ ಪಾಕಿಸ್ತಾನ್

Video: ದೆಹಲಿ ಸ್ಫೋಟಕ್ಕೂ ಮುನ್ನ ಉಗ್ರರು ಎಲ್ಲೆಲ್ಲಿ ಓಡಾಡಿದ್ರು ಗೊತ್ತೇ?

ದೆಹಲಿ ನಿಗೂಢ ಸ್ಫೋಟ: ಉಗ್ರ ಮಸೂದ್​ ಅಜರ್ ತಂಗಿ ಜತೆಗೆ ಶಾಹೀನ್​ಗೆ ನಂಟು

ನಾಮಿನೇಷನ್​ನಿಂದ ಬಚಾವ್ ಆಗಲು ರಕ್ಷಿತಾ ಜೊತೆ ಜಗಳಕ್ಕೆ ಇಳಿದ ರಾಶಿಕಾ

ಆರ್​ಜೆಡಿಗೆ ಮತ ಹಾಕಿಲ್ವಾ ಎಂದು ಪತ್ನಿಯನ್ನು ಥಳಿಸಿದ ಗಂಡ

ಬ್ರೆಜಿಲ್​ನಲ್ಲಿ ಸಂಭವಿಸಿದ ಕಾರು ಅಪಘಾತದ ಭಯಾನಕ ವಿಡಿಯೋ

Daily Devotional: ತುಳಸಿ ಕುಂಡದಲ್ಲಿರೋ ಮಣ್ಣಿನಿಂದ ಆಗುವ ಪ್ರಯೋಜನಗಳು

ಈ ರಾಶಿಯವರಿಗೆ ಅನುಕಂಪವೇ ಅಧಿಕವಾಗಿ ಕೆಲಸ ಮಾಡಲಿದ್ದು, ದುರುಪಯೋಗ ಸಾಧ್ಯತೆ

ನವೆಂಬರ್​ ಕ್ರಾಂತಿ ಚರ್ಚೆ ನಡುವೆ ಸುರ್ಜೇವಾಲಾ ಭೇಟಿಯಾದ ಸಚಿವ ಜಾರಕಿಹೊಳಿ