- Kannada News Photo gallery Cricket photos Virat Kohli Can Break 10 Records In Border Gavaskar Trophy 2024
ದಾಖಲೆಗಳ ಮೇಲೆ ದಾಖಲೆ: ವಿರಾಟ್ ಕೊಹ್ಲಿ ಮುಂದಿದೆ 10 ದಾಖಲೆಗಳು
Border-Gavaskar Trophy 2024: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ನಾಳೆಯಿಂದ (ನ.22) ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಪಂದ್ಯದ ಮೂಲಕ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಬಹುದು.
Updated on: Nov 21, 2024 | 2:08 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಶುಕ್ರವಾರದಿಂದ (ನವೆಂಬರ್ 22) ಆರಂಭವಾಗಲಿದೆ. ಈ ಸರಣಿಯ ಐದು ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿಗೆ ಹಲವು ದಾಖಲೆಗಳನ್ನು ಬರೆಯಲು ಉತ್ತಮ ಅವಕಾಶವಿದೆ. ಈ ಎಲ್ಲಾ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

ಅತ್ಯಧಿಕ ರನ್: ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ (1,809) ಅವರನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿ (1352) ಗೆ ಇನ್ನು ಕೇವಲ 458 ರನ್‌ಗಳ ಅಗತ್ಯವಿದೆ.

ಅತ್ಯಧಿಕ ಶತಕ: 2. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ 6 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಈ ಸರಣಿಯಲ್ಲಿ 4 ಸೆಂಚುರಿ ಸಿಡಿಸಿದರೆ, ಇಂಗ್ಲೆಂಡ್‌ನ ಜಾಕ್ ಹಾಬ್ಸ್ (9) ಹೆಸರಿನಲ್ಲಿರುವ ಸಾರ್ವಕಾಲಿಕ ದಾಖಲೆ ಮುರಿಯಬಹುದು.

ಅತಿ ಹೆಚ್ಚು ಟೆಸ್ಟ್ ರನ್: ಅಡಿಲೇಡ್ ಸ್ಟೇಡಿಯಂನೊಂದಿಗೆ ವಿಶೇಷ ಬಾಂಧವ್ಯ ಹೊಂದಿರುವ ವಿರಾಟ್ ಕೊಹ್ಲಿ 2ನೇ ಟೆಸ್ಟ್‌ನಲ್ಲಿ 93 ರನ್ಗಳಿಸಿದರೆ, ಅಡಿಲೇಡ್ನಲ್ಲಿ ಅತ್ಯಧಿಕ ರನ್ಗಳಿಸಿದ ವಿದೇಶಿ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ರನ್ ಸರದಾರ: ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್‌ಗಳ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ 74 ರನ್ಗಳಿಸಿದರೆ 3500 ರನ್ ಗಡಿಯನ್ನು ಮುಟ್ಟಬಹುದು.

ಸೆಂಚುರಿ ಸ್ಟಾರ್: ಆಸ್ಟ್ರೇಲಿಯಾದ ಒಂದೇ ಮೈದಾನದಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿದೇಶಿ ಬ್ಯಾಟರ್ ಎನಿಸಿಕೊಳ್ಳಲು ವಿರಾಟ್ ಕೊಹ್ಲಿಗೆ ಒಂದು ಶತಕದ ಅಗತ್ಯವಿದೆ. ಅದರಂತೆ ಅಡಿಲೇಡ್ನಲ್ಲಿ ಒಂದು ಸೆಂಚುರಿ ಸಿಡಿಸಿದರೆ ಈ ದಾಖಲೆ ಕಿಂಗ್ ಕೊಹ್ಲಿ ಪಾಲಾಗಲಿದೆ.

ಅತ್ಯಧಿಕ ಬೌಂಡರಿ: ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ದಾಖಲೆ ಸಚಿನ್ ತೆಂಡೂಲ್ಕರ್ (209) ಹೆಸರಿನಲ್ಲಿದೆ. ಇನ್ನು 59 ಬೌಂಡರಿಸಿದರೆ ಈ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಳ್ಳಬಹುದು.

ಅತ್ಯಧಿಕ ಪಂದ್ಯಗಳ ದಾಖಲೆ: ಒಂದು ರಾಷ್ಟ್ರದ ವಿರುದ್ಧ 100 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಲು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳನ್ನಾಡಿದರೆ ಸಾಕು.

ಸೆಂಚುರಿ ವೀರ: ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ (20 ಶತಕ) ಸಾರ್ವಕಾಲಿಕ ದಾಖಲೆಯನ್ನು ಮೀರಿಸಲು ವಿರಾಟ್ ಕೊಹ್ಲಿಗೆ (16 ಶತಕ) 5 ಶತಕಗಳ ಅವಶ್ಯಕತೆಯಿದೆ.

ಅತಿ ಹೆಚ್ಚು ಕ್ಯಾಚ್‌ಗಳು: ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ಕ್ಯಾಚ್ ಹಿಡಿದ ಫೀಲ್ಡರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (66)ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ 70 ಸಂಖ್ಯೆಯ ಮಾರ್ಕ್ ಮುಟ್ಟಲು 4 ಕ್ಯಾಚ್ಗಳನ್ನು ಹಿಡಿದರೆ ಸಾಕು.

ಬೌಂಡರಿ ಬ್ಯಾಟರ್: ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಈವರೆಗೆ 496 ಬೌಂಡರಿಗಳನ್ನು ಬಾರಿಸಿದ್ದಾರೆ. ಇದೀಗ 4 ಬೌಂಡರಿಗಳನ್ನು ಸಿಡಿಸಿದರೆ 500ರ ಗಡಿ ತಲುಪಬಹುದು. ಇದರೊಂದಿಗೆ ಸಚಿನ್ ತೆಂಡೂಲ್ಕರ್ (764) ಮತ್ತು ಬ್ರಿಯಾನ್ ಲಾರಾ (550) ನಂತರ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




