AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್​ ಇತಿಹಾಸದಲ್ಲೇ ಯಾರಿಗೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ

Virat Kohli Records: ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಹೆಸರಿಗೆ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಅದು ಕೂಡ ವಿಶಾಖಪಟ್ಟಣದಲ್ಲಿ ಸೌತ್ ಆಫ್ರಿಕಾ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ. ಇದಕ್ಕೂ ಮುನ್ನ ಇದೇ ಮೈದಾನದಲ್ಲಿ ಕಿಂಗ್ ಕೊಹ್ಲಿ ಮೂರು ಶತಕ ಬಾರಿಸಿದ್ದರು. ಇದೀಗ ಮೂರನೇ ಹಾಫ್ ಸೆಂಚುರಿಯೊಂದಿಗೆ ಭರ್ಜರಿ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 07, 2025 | 7:24 AM

Share
ಒಂದು ಮೈದಾನ... ರನ್​​ಗಳ ರಾಶಿ... ಇದು ಏಕದಿನ ಕ್ರಿಕೆಟ್​​ನಲ್ಲಿ ವಿರಾಟ್ ಕೊಹ್ಲಿ (Virat Kohli) ನಿರ್ಮಿಸಿದ ಹೊಸ ವಿಶ್ವ ದಾಖಲೆ. ವಿಶಾಖಪಟ್ಟಣದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

1 / 5
ಈ ಭರ್ಜರಿ ಬ್ಯಾಟಿಂಗ್​​​ನೊಂದಿಗೆ ಕಿಂಗ್ ಕೊಹ್ಲಿ ಕೇವಲ 45 ಎಸೆತಗಳಲ್ಲಿ 3 ಸಿಕ್ಸ್​​ ಹಾಗೂ 6 ಫೋರ್​​ಗಳೊಂದಿಗೆ ಅಜೇಯ 65 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ವಿಶಾಖಪಟ್ಟಣ ಎಸಿಎ ಮೈದಾನದಲ್ಲಿ ಕಿಂಗ್ ಕೊಹ್ಲಿ 650+ ರನ್​​ ಕಲೆಹಾಕಿದ ಸಾಧನೆ ಮಾಡಿದ್ದಾರೆ.

2 / 5
ಈ 650+ ರನ್​​ಗಳೊಂದಿಗೆ ವಿರಾಟ್ ಕೊಹ್ಲಿ ಹೆಸರಿಗೆ ಹೊಸ ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಅಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಮೈದಾನದಲ್ಲಿ 103.49 ಸ್ಟ್ರೈಕ್​ ರೇಟ್​​ನಲ್ಲಿ 108.66 ಸರಾಸರಿಯಲ್ಲಿ 650+ ಸ್ಕೋರ್​​ ಗಳಿಸಿದ ಮತ್ತೊಬ್ಬ ಬ್ಯಾಟರ್ ಇಲ್ಲ.

3 / 5
ವಿರಾಟ್ ಕೊಹ್ಲಿ ವಿಶಾಖಪಟ್ಟಣದ ಎಸಿಎ ಮೈದಾನದಲ್ಲಿ ಆಡಿದ 8 ಇನಿಂಗ್ಸ್​ಗಳಿಂದ ಕಲೆಹಾಕಿರುವುದು ಬರೋಬ್ಬರಿ 652 ರನ್​​​​ಗಳು. ಅಂದರೆ ಈ ಮೈದಾನದಲ್ಲಿ ಆಡಿದ ಪಂದ್ಯಗಳಲ್ಲಿ ಕೊಹ್ಲಿ ಕ್ರಮವಾಗಿ 118, 117, 99, 65, 157*, 0, 31, 65* ರನ್​​ಗಳ ಇನಿಂಗ್ಸ್ ಆಡಿದ್ದಾರೆ.

4 / 5
ಈ ಮೂಲಕ 8 ಇನಿಂಗ್ಸ್​​ಗಳಿಂದ ಬರೋಬ್ಬರಿ 652 ರನ್​​​ಗಳಿಸಿದ್ದಾರೆ. ಅದು ಸಹ 108.66 ಸರಾಸರಿಯಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಹಾಗೆಯೇ 103.49 ಸ್ಟ್ರೈಕ್​ ರೇಟ್​​ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ 100 ಕ್ಕಿಂತ ಅಧಿಕ ಸ್ಟ್ರೈಕ್ ರೇಟ್​​ನಲ್ಲಿ, 100 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 650+ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

5 / 5
Follow Us
ಬಾವಿಗೆ ಬಿದ್ದ ಸಿಂಹವನ್ನು ಮೇಲೆತ್ತಿದ್ದು ಹೇಗೆ ಗೊತ್ತಾ?

ಕಡಿಮೆ ಸಂಭಾವನೆ ಕೊಟ್ಟರೂ ಕನ್ನಡದ ಗೀತೆಗೆ ಧ್ವನಿ ಆಗಿದ್ದ ಆಶಾ ಭೋಸ್ಲೆ

ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?

ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​

ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್

ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ

ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ

ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ

ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು