ಫಿಫ್ಟಿ ಮತ್ತು ಫಿಫ್ಟಿ ಪ್ಲಸ್: 2 ದಾಖಲೆಗಳ ಮೇಲೆ ಕೊಹ್ಲಿ ಕಣ್ಣು!
India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿ ಜುಲೈ 14 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ಬರ್ಮಿಂಗ್ಹ್ಯಾಮ್ನಲ್ಲಿ ನಡೆದರೆ, ದ್ವಿತೀಯ ಪಂದ್ಯವು ಜುಲೈ 16 ರಂದು ಕಾರ್ಡಿಫ್ನಲ್ಲಿ ಜರುಗಲಿದೆ. ಹಾಗೆಯೇ ಈ ಸರಣಿಯ ಕೊನೆಯ ಮ್ಯಾಚ್ ಜುಲೈ 19 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.
Updated on: Jul 14, 2026 | 2:37 PM

ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿ ಇಂದಿನಿಂದ (ಜುಲೈ 14) ಶುರುವಾಗಲಿದೆ. ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯದ ಮೂಲಕ ವಿರಾಟ್ ಕೊಹ್ಲಿ 2 ಭರ್ಜರಿ ದಾಖಲೆಗಳನ್ನು ಬರೆಯಬಹುದು. ಅದು ಕೂಡ ಒಂದೇ ಅರ್ಧಶತಕದೊಂದಿಗೆ. ಹಾಗಿದ್ರೆ ಕೊಹ್ಲಿ ಮುಂದಿರುವ ದಾಖಲೆಗಳಾವುವು ಎಂದು ನೋಡುವುದಾದರೆ... (PC: BCCI)

ಇಂಗ್ಲೆಂಡ್ ವಿರುದ್ಧದ ಏಕದಿನ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ 37 ಪಂದ್ಯಗಳಿಂದ 1,455 ರನ್ ಗಳಿಸಿದ್ದಾರೆ. ಸದ್ಯ 38 ಇನ್ನಿಂಗ್ಸ್ಗಳಿಂದ 1,397 ರನ್ ಹೊಂದಿರುವ ಕೊಹ್ಲಿ, ಮೊದಲ ಮ್ಯಾಚ್ನಲ್ಲಿ 59 ರನ್ ಗಳಿಸಿದರೆ ಸಚಿನ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಲಿದ್ದಾರೆ. (PC: BCCI)

ಇಂಗ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಹೆಚ್ಚು ಬಾರಿ 50 ಪ್ಲಸ್ (ಅರ್ಧಶತಕ ಅಥವಾ ಶತಕ) ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಕೊಹ್ಲಿಗೆ ಕೇವಲ ಒಂದು ಅರ್ಧಶತಕದ ಅಗತ್ಯವಿದೆ. ಸದ್ಯ ಈ ದಾಖಲೆ ರಾಹುಲ್ ದ್ರಾವಿಡ್ (25) ಹೆಸರಿನಲ್ಲಿದ್ದು, ಮೊದಲ ಪಂದ್ಯದಲ್ಲಿ ಕೊಹ್ಲಿ 50+ ರನ್ ಕಲೆಹಾಕಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. (PC: BCCI)

ಹಾಗೆಯೇ ಈ ಪಂದ್ಯದಲ್ಲಿ 68 ರನ್ ಬಾರಿಸಿದರೆ ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ (648) ಅಗ್ರಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ (581) ದ್ವಿತೀಯ ಸ್ಥಾನದಲ್ಲಿದ್ದಾರೆ. (PC: BCCI)

ಒಂದು ವೇಳೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಮದ 103 ರನ್ಗಳ ಭರ್ಜರಿ ಶತಕದ ಇನಿಂಗ್ಸ್ ಮೂಡಿಬಂದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ವಿರುದ್ಧ 1,500 ರನ್ಗಳ ಮೈಲಿಗಲ್ಲು ತಲುಪಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. (PC: BCCI)




