AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಸ್​ಪ್ರೀತ್ ಬುಮ್ರಾ ವಿರುದ್ಧ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

Jasprit Bumrah: ಜಸ್​ಪ್ರೀತ್ ಬುಮ್ರಾ ವಿಶ್ವದ ಶ್ರೇಷ್ಠ ವೇಗದ ಬೌಲರ್. ತಮ್ಮ ವಿಶಿಷ್ಟ ಬೌಲಿಂಗ್ ಶೈಲಿ, ನಿಖರವಾದ ಯಾರ್ಕರ್ ಮತ್ತು ಮಾರಕ ವೇಗದಿಂದ ಬ್ಯಾಟರ್‌ಗಳನ್ನು ನಡುಗಿಸುತ್ತಾರೆ. ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಅಸ್ತ್ರವಾಗಿರುವ ಇವರು, ಪಂದ್ಯದ ಯಾವುದೇ ಹಂತದಲ್ಲೂ ವಿಕೆಟ್ ಪಡೆಯುವ ಚತುರರು. ಇದರ ಹೊರತಾಗಿಯೂ ಬುಮ್ರಾ ವಿರುದ್ಧ ಕೆಲ ಬ್ಯಾಟರ್​ಗಳು ಅಬ್ಬರಿಸಿದ್ದಾರೆ. ಆ ಬ್ಯಾಟರ್​ಗಳ ಪಟ್ಟಿ ಈ ಕೆಳಗಿನಂತಿದೆ...

ಝಾಹಿರ್ ಯೂಸುಫ್
|

Updated on:Apr 08, 2026 | 10:47 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಯುಗ ಆರಂಭವಾಗಿದೆ. ಈ ಯುಗಕ್ಕೆ ನಾಂದಿಯಾಡಿರುವುದು ವೈಭವ್ ಸೂರ್ಯವಂಶಿ. ಅದು ಸಹ ಜಸ್​ಪ್ರೀತ್ ಬುಮ್ರಾ (Jasprit bumrah) ಅವರ ಒಂದೇ ಓವರ್​ನಲ್ಲಿ 2 ಸಿಕ್ಸ್ ಸಿಡಿಸುವ ಮೂಲಕ. ಈ ಮೂಲಕ ಬುಮ್ರಾಗೆ ಪವರ್​ಪ್ಲೇನಲ್ಲಿ 2 ಸಿಕ್ಸ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

1 / 5
ಇತ್ತ ಬುಮ್ರಾ ಓವರ್​ನಲ್ಲಿ ವೈಭವ್ 2 ಸಿಕ್ಸ್ ಸಿಡಿಸುತ್ತಿದ್ದಂತೆ, ಅತ್ತ ಜಸ್​ಪ್ರೀತ್ ವಿರುದ್ಧ ಐಪಿಎಲ್​ನಲ್ಲಿ ಅತ್ಯಧಿಕ ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ...

2 / 5
ಎಬಿ ಡಿವಿಲಿಯರ್ಸ್​: ಜಸ್​ಪ್ರೀತ್ ಬುಮ್ರಾ ಓವರ್​ನಲ್ಲಿ ಐಪಿಎಲ್​ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಆರ್​ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದೆ. 13 ಇನಿಂಗ್ಸ್​ಗಳಲ್ಲಿ ಬುಮ್ರಾರನ್ನು ಎದುರಿಸಿದ್ದ ಎಬಿಡಿ ಒಟ್ಟು 8 ಸಿಕ್ಸ್ ಸಿಡಿಸಿ ಈ ದಾಖಲೆ ನಿರ್ಮಿಸಿದ್ದಾರೆ.

3 / 5
ವಿರಾಟ್ ಕೊಹ್ಲಿ: ಎಬಿಡಿ ಬಳಿಕ ಬುಮ್ರಾ ಎಸೆತಗಳಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ್ದು ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ 17 ಇನಿಂಗ್ಸ್​ಗಳಲ್ಲಿ ಬುಮ್ರಾ ಅವರನ್ನು ಎದುರಿಸಿದ್ದಾರೆ. ಈ ವೇಳೆ 6 ಸಿಕ್ಸ್ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

4 / 5
ಜೆಪಿ ಡುಮಿನಿ: ಸೌತ್ ಆಫ್ರಿಕಾದ ಸ್ಫೋಟಕ ದಾಂಡಿಗ ಜೆಪಿ ಡುಮಿನಿ ಐಪಿಎಲ್​ನಲ್ಲಿ ಜಸ್​ಪ್ರೀತ್ ಬುಮ್ರಾ ಅವರನ್ನು 4 ಇನಿಂಗ್ಸ್​ಗಳಲ್ಲಿ ಎದುರಿಸಿದ್ದಾರೆ. ಈ ವೇಳೆ 6 ಸಿಕ್ಸ್​ ಸಿಡಿಸಿದ್ದಾರೆ. ಈ ಮೂಲಕ ಬುಮ್ರಾ ಎಸೆತಗಳಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 5

Published On - 10:35 am, Wed, 8 April 26

Follow Us