- Kannada News Photo gallery Fahad Faazil and Nazriya Nazim Celebrate 10 years wedding Anniversary Entertainment News In Kannada
ನಜ್ರಿಯಾ-ಫಹಾದ್ ಫಾಸಿಲ್ ದಾಂಪತ್ಯಕ್ಕೆ 10 ವರ್ಷ; ಹೇಗಿತ್ತು ನೋಡಿ ಸೆಲೆಬ್ರೇಷನ್
ಫಹಾದ್ ಫಾಸಿಲ್ ಅವರು ಸೋಶಿಯಲ್ ಮೀಡಿಯಾದಿಂದ ದೂರ ಇರಲು ಬಯಸುತ್ತಾರೆ. ಆದರೆ, ನಜ್ರಿಯಾ ಅವರು ಇದಕ್ಕೆ ತದ್ವಿರುದ್ಧ. ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ ಫ್ಯಾನ್ಸ್ಗೋಸ್ಕರ ಫೋಟೋ ಹಂಚಿಕೊಳ್ಳುತ್ತಾರೆ.
Updated on:Sep 03, 2024 | 11:07 AM

ನಜ್ರಿಯಾ ನಜೀಮ್ ಹಾಗೂ ಫಹಾದ್ ಫಾಸಿಲ್ಗೆ ಆಗಸ್ಟ್ ಸಖತ್ ವಿಶೇಷ. ಅದು ಮದುವೆ ಆದ ತಿಂಗಳು. ಇವರ ದಾಂಪತ್ಯಕ್ಕೆ ಈಗ 10 ವರ್ಷ ತುಂಬಿದೆ. ಹೀಗಾಗಿ, ಇಬ್ಬರೂ ವಿದೇಶಿ ಪ್ರವಾಸ ತೆರಳಿದ್ದರು. ಆ ಸಂದರ್ಭದ ಫೋಟೊಗಳನ್ನು ನಜ್ರಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಫಹಾದ್ ಫಾಸಿಲ್ ಅವರು ಸೋಶಿಯಲ್ ಮೀಡಿಯಾದಿಂದ ದೂರ ಇರಲು ಬಯಸುತ್ತಾರೆ. ಆದರೆ, ನಜ್ರಿಯಾ ಅವರು ಇದಕ್ಕೆ ತದ್ವಿರುದ್ಧ. ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ ಫ್ಯಾನ್ಸ್ಗೋಸ್ಕರ ಫೋಟೋ ಹಂಚಿಕೊಳ್ಳುತ್ತಾರೆ.

ಆಗಸ್ಟ್ 21ರಂದು ನಜ್ರಿಯಾ ಹಾಗೂ ಫಹಾದ್ ದಾಂಪತ್ಯಕ್ಕೆ 10 ವರ್ಷ ತುಂಬಿದೆ. ಈ ಕಾರಣಕ್ಕೆ ಅವರು ಪ್ಯಾರಿಸ್ ತೆರಳಿದ್ದರು. ಅಲ್ಲಿ ಸಮಯ ಕಳೆದ ಫೋಟೋಗಳನ್ನು ನಜ್ರಿಯಾ ಈಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಫಹಾದ್ ಫಾಸಿಲ್ ಅವರು ‘ಪುಷ್ಪ 2’ ಚಿತ್ರದ ಶೂಟಿಂಗ್ನಲ್ಲಿ ಭಾಗಿ ಆಗಬೇಕಿದೆ. ಕ್ಲೈಮ್ಯಾಕ್ಸ್ ಶೂಟ್ಗೆ ಅವರು ಡೇಟ್ ನೀಡಬೇಕಿದೆ ಎಂದು ತಂಡ ಹೇಳಿಕೊಂಡಿತ್ತು. ಅವರು ಟ್ರಿಪ್ ಮುಗಿಸಿ ಬಂದಿದ್ದು ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರಂತೆ.

ನಜ್ರಿಯಾ ಅವರು ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರಿಗೆ ಇರೋ ಜನಪ್ರಿಯತೆ ಕಡಿಮೆ ಆಗಿಲ್ಲ.
Published On - 11:06 am, Tue, 3 September 24



















