AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತೆ ಮದುವೆಯಾದ ತರುಣ್-ಸೋನಲ್

Tarun Sudhir-Sonal: ಆಗಸ್ಟ್ 11 ರಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್. ಇದೀಗ ಕ್ರಿಶ್ಚಿಯನ್ ಪದ್ಧತಿಯಂತೆ ಚರ್ಚ್​ ನಲ್ಲಿ ಮತ್ತೊಮ್ಮೆ ಮದುವೆ ಆಗಿದ್ದಾರೆ.

ಮಂಜುನಾಥ ಸಿ.
|

Updated on: Sep 03, 2024 | 12:07 PM

Share
ತರುಣ್ ಸುಧೀರ್ ಹಾಗೂ ಸೋನಲ್ ಅವರದ್ದು ಅಂತರ್ಧಮೀಯ ವಿವಾಹವಾಗಿದ್ದು, ಎರಡೂ ಕಡೆಯ ಮನೆಯವರು ಇವರ ಮದುವೆಗೆ ಒಪ್ಪಿ, ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ.

1 / 8
ತರುಣ್ ಸುಧೀರ್ ಹಾಗೂ ಸೋನಲ್ ಈ ವರ್ಷದ ಆರಂಭದಲ್ಲಿಯೇ ಮದುವೆ ಆಗಬೇಕಿತ್ತು. ಆದರೆ ಕಾರಣಾಂತರದಿಂದ ಮದುವೆ ತಡವಾಯ್ತು. ಕೊನೆಗೆ ಆಗಸ್ಟ್ 11 ರಂದು ಈ ಜೋಡಿ ಸಪ್ತಪದಿ ತುಳಿದರು.

2 / 8
ತರುಣ್ ಸುಧೀರ್ ಹಾಗೂ ಸೋನಲ್​ರ ವಿವಾಹದಲ್ಲಿ ದರ್ಶನ್ ಅವರದ್ದು ಪ್ರಮುಖ ಪಾತ್ರವಿದೆ ಎನ್ನಲಾಗಿತ್ತು. ಇಬ್ಬರ ಪ್ರೀತಿಗೆ ದರ್ಶನ್ ಸಹ ಕಾರಣವಂತೆ. ಸೋನಲ್, ತರುಣ್​ ಅವರ ಪ್ರೇಮನಿವೇದನೆ ಒಪ್ಪಿದ್ದು ದರ್ಶನ್​ರಿಂದ ಎನ್ನಲಾಗಿದೆ.

3 / 8
ತರುಣ್ ಸುಧೀರ್ ಮತ್ತು ಸೋನಲ್ ನಡುವೆ ‘ರಾಬರ್ಟ್’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಪ್ರೇಮವಾಯ್ತಂತೆ. ತರುಣ್ ‘ರಾಬರ್ಟ್’ ಸಿನಿಮಾ ನಿರ್ದೇಶಿಸಿದ್ದರು. ಸೋನಲ್ ಆ ಸಿನಿಮಾದಲ್ಲಿ ನಟಿಸಿದ್ದರು.

4 / 8
ತರುಣ್ ಸುಧೀರ್ ಹಿಂದು ಕುಟುಂಬದವರಾದರೆ ಸೋನಲ್ ಕ್ರಿಶ್ಚಿಯನ್ ಧರ್ಮೀಯರು. ಈ ಇಬ್ಬರ ವಿವಾಹದಿಂದ ಎರಡು ಧರ್ಮಗಳ ಸಮ್ಮಿಲನ ಆದಂತಾಗಿದೆ.

5 / 8
ಇದೀಗ ಬೆಂಗಳೂರಿನ ಚರ್ಚ್ ಒಂದರಲ್ಲಿ ಭಾನುವಾರದಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಈ ಜೋಡಿ ಮತ್ತೆ ಮದುವೆ ಆಗಿದೆ. ಇಬ್ಬರೂ ಬಿಳಿ ಬಣ್ಣದ ಉಡುಗೆ ತೊಟ್ಟು ಮದುವೆ ಸಂಭ್ರಮವನ್ನು ಎಂಜಾಯ್ ಮಾಡಿದ್ದಾರೆ.

6 / 8
ಆಗಸ್ಟ್ 11 ರಂದು ಈ ಜೋಡಿ ಬೆಂಗಳೂರಿನ ಆರ್​ಆರ್ ನಗರದ ಬಳಿಕ ಕಲ್ಯಾಣ ಮಂಟಪದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ವಿವಾಹವಾಗಿದ್ದರು. ಕುಟುಂಬ ಸದಸ್ಯರು, ಆತ್ಮೀಯರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

7 / 8
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಆಗಸ್ಟ್ 11 ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ಭಾನುವಾರದಂದು ಮತ್ತೊಮ್ಮೆ ಈ ಜೋಡಿ ವಿವಾಹವಾಗಿದೆ. ಈ ಬಾರಿ ಕ್ರಿಶ್ಚಿಯನ್ ಸಂಪ್ರದಾಯದಂತೆ.

8 / 8