- Kannada News Photo gallery Fathers Day special many Celebrities shared their Father's photos on Social Media
ಅಪ್ಪಂದಿರ ದಿನ, ಸೆಲೆಬ್ರಿಟಿಗಳು ತಂದೆಯನ್ನು ನೆನಪಿಸಿಕೊಂಡ ಬಗೆ ಇದು
Fathers Day: ಇಂದು (ಜೂನ್ 15) ವಿಶ್ವ ಅಪ್ಪಂದಿರ ದಿನ. ತಂದೆಯ ಮಹತ್ವದ ಬಗ್ಗೆ ನೆನಪು ಮಾಡಿಕೊಳ್ಳುವ ದಿನ. ಜೀವನ ಪರ್ಯಂತೆ ಪತ್ನಿ, ಮಕ್ಕಳು, ಕುಟುಂಬಕ್ಕಾಗಿ ಜೀವನ ತೇಯುವ ಅಪ್ಪನ ಸತತ ಪರಿಶ್ರಮ, ಪ್ರೀತಿ, ತ್ಯಾಗವನ್ನು ಗುರುತಿಸುವ ದಿನ. ಹಲವಾರು ಸಿನಿಮಾ ಸೆಲೆಬ್ರಿಟಿಗಳು ತಮ್ಮ ತಂದೆಯನ್ನು ಈ ವಿಶೇಷ ದಿನದಂದು ನೆನಪು ಮಾಡಿಕೊಂಡಿದ್ದಾರೆ. ಅಪ್ಪಂದಿರ ದಿನದ ವೀಶೇಷ ಗ್ಯಾಲರಿ ಇಲ್ಲಿದೆ...
Updated on: Jun 15, 2025 | 6:49 PM

ನಟ ಜಗ್ಗೇಶ್ ಅವರು ಅವರ ತಾಯಿಯ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ತಾಯಿಯೊಂದಿಗಿನ ಹಲವು ಸನ್ನಿವೇಶಗಳನ್ನು ಹಂಚಿಕೊಂಡಿದ್ದಾರೆ. ಆದರೆ ತಂದೆಯ ಬಗ್ಗೆ ವಿಷಯ ಹಂಚಿಕೊಂಡಿದ್ದು ಕಡಿಮೆ. ಆದರೆ ಇಂದು ತಂದೆಯೊಟ್ಟಿಗಿನ ಚಿತ್ರ ಹಂಚಿಕೊಂಡಿರುವ ಜೊತೆಗೆ ಪುಟ್ಟ ಕವಿತೆಯನ್ನೂ ಬರೆದಿದ್ದಾರೆ.

ನಟ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಅವರು ಅಪ್ಪಂದಿರ ದಿನಾಚರಣೆಯಂದು ಸುದೀಪ್ ಅವರ ಹಳೆಯ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಸಾನ್ವಿ ಪುಟ್ಟ ಬಾಲಕಿ ಆಗಿದ್ದಾಗ ಅಪ್ಪನೊಟ್ಟಿಗೆ ಆಡುತ್ತಾ ಕ್ಯಾಮೆರಾಕ್ಕೆ ಫೋಸ್ ಕೊಟ್ಟಿರುವ ಫೋಟೊ ಅದು.

ನಟಿ ರಾಧಿಕಾ ಪಂಡಿತ್, ಯಶ್ ತಮ್ಮ ಮಕ್ಕಳೊಟ್ಟಿಗೆ ಆಟವಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ಅಪ್ಪ, ತನ್ನ ಮಕ್ಕಳಿಗಾಗಿ ಪ್ರಪಂಚವನ್ನು ತಲೆಕೆಳಗು ಮಾಡಬಲ್ಲ ಎಂದಿದ್ದಾರೆ. ತಮ್ಮ ತಂದೆಯ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.

ನಟ ಡಾಲಿ ಧನಂಜಯ್ ಅವರು ಸಹ ತಮ್ಮ ತಂದೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ತಂದೆ ಮೊಮ್ಮಗಳಿಗೆ ಊಟ ತಿನ್ನಿಸುತ್ತಿರುವ ಚಿತ್ರ ಹಂಚಿಕೊಂಡು ಅಪ್ಪಂದಿರ ದಿನದ ಶುಭಾಶಯ ಕೋರಿದ್ದಾರೆ. ಇತ್ತೀಚೆಗಷ್ಟೆ ಡಾಲಿಯ ಮದುವೆ ಆಗಿದೆ.

ಪುತ್ರಿ ಮೆಹತಿಯ ಕೈಯಲ್ಲಿ ಹಿಡಿದ ಗಾಯಕ ವಿಜಯ್ ಪ್ರಕಾಶ್. ಗಾಯಕ ವಿಜಯ್ ಪ್ರಕಾಶ್ ಪುತ್ರಿ ಮೆಹತಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ವಿಜಯ್ ಪ್ರಕಾಶ್ ಸಹ ತಮ್ಮ ತಂದೆಯವರ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಖ್ಯಾತ ನಟಿ ಮೃಣಾಲ್ ಠಾಕೂರ್ ಸಹ ತಮ್ಮ ತಂದೆಯೊಟ್ಟಿಗೆ ಹಲವಾರು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಪ್ಪಂದಿರ ದಿನಕ್ಕೆ ಶುಭ ಹಾರೈಸಿದ್ದಾರೆ. ಮೃಣಾಲ್ ಅವರ ತಂದೆ ಸರ್ಕಾರಿ ಅಧಿಕಾರಿ ಆಗಿದ್ದರಂತೆ.

ಖ್ಯಾತ ಗಾಯಕ ಸೋನು ನಿಗಂ ಅವರು ತಮ್ಮ ಪುತ್ರನನ್ನು ಮೊದಲು ತೋಳಲ್ಲಿ ಹಿಡಿದ ದಿನದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಮಗನೊಟ್ಟಿಗಿನ ಇನ್ನೂ ಹಲವಾರು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ. ತಮ್ಮ ತಂದೆಯ ಚಿತ್ರವನ್ನೂ ಹಂಚಿಕೊಂಡಿದ್ದಾರೆ.




