- TV9 Kannada Photo gallery Happy Rose Day 2023: Know the proper meaning of rose colors to give to your loved ones
Happy Rose Day 2023: ನಿಮ್ಮ ಪ್ರೀತಿಪಾತ್ರರಿಗೆ ನೀಡುವ ಈ ಬಣ್ಣದ ಗುಲಾಬಿಗಳು ಪ್ರೀತಿಯ ಅರ್ಥವನ್ನು ತಿಳಿಸುತ್ತವೆ
ರೋಸ್ ಡೇ 2023: ತಮ್ಮ ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಈ ದಿನದ ವಿಶೇಷ. ಆದರೆ ಇಲ್ಲಿ ನೀಡುವ ಪ್ರತಿಯೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥವಿದೆ.
Updated on:Feb 07, 2023 | 10:11 AM

ಫೆಬ್ರವರಿ 7 - ರೋಸ್ ಡೇ: ತಮ್ಮ ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಈ ದಿನ ವಿಶೇಷ. ಆದರೆ ಇಲ್ಲಿ ನೀಡುವ ಪ್ರತಿಯೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥವಿದೆ.

Valentines Day 2023 red rose price and export from Bangalore raised as demand very high

ಲ್ಯಾವೆಂಡರ್ ಗುಲಾಬಿ: ಇದು ಮೊದಲ ನೋಟದಲ್ಲಿಯೇ ಪ್ರೀತಿಯನ್ನು ಅಭಿವ್ಯಕ್ತಪಡಿಸಲು ನೇರಳೆ ಬಣ್ಣದ ಗುಲಾಬಿಯನ್ನು ನೀಡಲಾಗುತ್ತದೆ. ಈ ನೇರಳೆ ಬಣ್ಣ ಆಕರ್ಷಣೆಯ ಸಂಕೇತವಾಗಿದೆ.

ಗುಲಾಬಿ ಬಣ್ಣದ ಗುಲಾಬಿ: ಗುಲಾಬಿ ಬಣ್ಣವು ಕೃತಜ್ಞತೆಯ ಸಂಕೇತವಾಗಿದೆ. ಆದ್ದರಿಂದ ನಿಮ್ಮ ಸಂಗಾತಿ ಅಥವಾ ಪ್ರೀತಿ ಪಾತ್ರರಿಗೆ ಗುಲಾಬಿ ಬಣ್ಣದ ಗುಲಾಬಿಯನ್ನು ನೀಡಿ ಕೃತಜ್ಞತೆಯನ್ನು ತಿಳಿಸಿ.

ಬಿಳಿ ಬಣ್ಣದ ಗುಲಾಬಿ: ಬಿಳಿ ಬಣ್ಣವು ಶಾಂತಿ, ಶುದ್ಧತೆ, ಶುಚಿತ್ವ ಮತ್ತು ಗೌರವದ ಬಣ್ಣವಾಗಿದೆ. ನೀವು ನಿಮ್ಮ ಪ್ರೇಮಿಗೆ ಮಾತ್ರವಲ್ಲದೇ ನಿಮ್ಮ ಪ್ರೀತಿ ಪಾತ್ರರಿಗೆ ಗೌರವದ ಸಂಕೇತವಾಗಿ ಈ ವಿಶೇಷವಾಗಿ ನೀಡಬಹುದು.

ಹಳದಿ ಬಣ್ಣದ ಗುಲಾಬಿ: ಇದು ಸ್ನೇಹ, ಸಂತೋಷ, ವಾತ್ಸಲ್ಯ, ಕಾಳಜಿ ಮತ್ತು ಸಂತೋಷವನ್ನು ಸೂಚಿಸುತ್ತದೆ. ಈ ಹೂವುಗಳನ್ನು ಸ್ನೇಹಿತರು, ಸಹೋದ್ಯೋಗಿಗಳು ಇತ್ಯಾದಿಗಳಿಗೆ ನೀಡಬಹುದು.

ಕೇಸರಿ ಬಣ್ಣದ ಗುಲಾಬಿ: ಇದು ಉತ್ಸಾಹ, ಜೀವನ, ಶಕ್ತಿ ಮತ್ತು ಚೈತನ್ಯವನ್ನು ಪ್ರತಿನಿಧಿಸುತ್ತವೆ. ಪ್ರೀತಿಯನ್ನು ವ್ಯಕ್ತಪಡಿಸಲು ಅಥವಾ ಯಾರೊಂದಿಗಾದರೂ ಆಳವಾದ ಬಂಧವನ್ನು ವ್ಯಕ್ತಪಡಿಸಲು ಅವರು ಉಡುಗೊರೆಯಾಗಿ ನೀಡಬಹುದು.
Published On - 10:10 am, Tue, 7 February 23

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More



