- Kannada News Photo gallery Hasanamba Mahotsava: Crores of income flowed into Hasanamba temple in just 4 Days, Karnataka news in kannada
ನಾಲ್ಕೇ ದಿನದಲ್ಲಿ ಹಾಸನಾಂಬೆ ದೇಗುಲಕ್ಕೆ ಹರಿದುಬಂತು 6 ಕೋಟಿ ರೂ ಕಾಂಚಾಣ
ಹಾಸನಾಂಬೆ ಮಹೋತ್ಸವ ಐದನೇ ದಿನಕ್ಕೆ ಕಾಲಿಟ್ಟಿದ್ದು, ನಾಲ್ಕು ದಿನಗಳಲ್ಲಿ 6 ಕೋಟಿ ರೂ. ಆದಾಯ ಹರಿದುಬಂದಿದೆ. ಟಿಕೆಟ್ ಮತ್ತು ಲಾಡು ಮಾರಾಟದಿಂದ ಕೋಟಿ ಕೋಟಿ ರೂ. ಆದಾಯ ಬರುತ್ತಿದೆ. ಇನ್ನೂ ನಾಲ್ಕು ದಿನಗಳ ದರ್ಶನ ಬಾಕಿ ಇರುವುದರಿಂದ ಇತಿಹಾಸದಲ್ಲೇ ಅತಿ ಹೆಚ್ಚು ಆದಾಯ ದಾಖಲೆಯಾಗುವ ನಿರೀಕ್ಷೆ ಇದೆ.
Updated on:Oct 30, 2024 | 12:37 PM

ಹಾಸನಾಂಬೆ ಮಹೋತ್ಸವ ಐದನೇ ದಿನಕ್ಕೆ ಕಾಲಿಟ್ಟಿದ್ದು, ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿದೇವತೆಯನ್ನು ಕಾಣಲು ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ನಾಲ್ಕೇ ದಿನಗಳಲ್ಲಿ ಹಾಸನಾಬ ದೇಗುಲಕ್ಕೆ ಕೋಟಿ ಕೋಟಿ ರೂ. ಆದಾಯ ಹರಿದುಬಂದಿದೆ.

ಹೌದು. ಹಾಸನಾಂಬೆ ಮಹೋತ್ಸವ ಆರಂಭವಾಗಿ ನಾಲ್ಕೇ ದಿನಗಳಲ್ಲಿ ಟಿಕೆಟ್ ಮಾರಾಟದಿಂದ 6 ಕೋಟಿ ರೂ. ಮತ್ತು ಲಾಡು ಪ್ರಸಾದ ಮಾರಾಟದಿಂದ 45 ಲಕ್ಷ ರೂ. ಆದಾಯ ಗಳಿಸಲಾಗಿದೆ.

1000ರೂ ಟಿಕೆಟ್ ಮಾರಾಟದಿಂದ 4ಕೋಟಿ 25 ಲಕ್ಷ ರೂ. ಮತ್ತು 300ರೂ ಟಿಕೆಟ್ ಮಾರಾಟದಿಂದ 1 ಕೋಟಿ 30 ಲಕ್ಷ ರೂ. ಆದಾಯ ಗಳಿಸಲಾಗಿದೆ.

ಇಂದಿನ ದಿನ ಸೇರಿದಂತೆ ಹಾಸನಾಂಬೆ ದರ್ಶನಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇದೆ. ಹೀಗಾಗಿ ಇತಿಹಾಸದಲ್ಲೇ ಹಾಸನಾಂಬೆ ಆದಾಯ ದಾಖಲೆಯತ್ತ ಸಾಗಿದೆ.

ಕಳೆದ ಬಾರಿ 9 ಕೋಟಿ ಆದಾಯ ಗಳಿಸಿ ದಾಖಲೆ ಬರೆಯಲಾಗಿತ್ತು. ಈ ಬಾರಿ ಹುಂಡಿಯಲ್ಲಿ ಸಂಗ್ರಹ ಹಣ ಹೊರತು ಪಡಿಸಿಯೇ ಕೋಟಿ ಕೋಟಿ ರೂ. ಆದಾಯ ಸಂಗ್ರಹವಾಗಿದೆ.
Published On - 12:35 pm, Wed, 30 October 24



