AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಕಲೇಶಪುರ ಭೂಕುಸಿತ: ಬೆಂಗಳೂರು-ಮಂಗಳೂರು, ಮುರುಡೇಶ್ವರ ರೈಲು ಸಂಚಾರ ಮತ್ತೆ ಸ್ಥಗಿತ

ಈ ಹಿಂದೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್‌, ಎಡಕುಮೇರಿ ನಡುವೆ ಭೂಕುಸಿತ ಸಂಭವಿಸಿತ್ತು. ಇದಾದ ಬಳಿಕ ಈಗ ಮತ್ತೆ ಸಕಲೇಶಪುರ-ಬಾಳ್ಳುಪೇಟೆ ನಡುವೆ ಭೂಕುಸಿತವಾಗಿದೆ. ಇದರಿಂದ ಬೆಂಗಳೂರಿನಿಂದ ಮಂಗಳೂರು ಮತ್ತು ಮುರುಡೇಶ್ವರ ರೈಲು ಸಂಪರ್ಕ ಬಂದ್​ ಆಗಿದೆ.

ಮಂಜುನಾಥ ಕೆಬಿ
| Edited By: |

Updated on:Aug 10, 2024 | 1:01 PM

Share
Hassan Landslide: Bengaluru-Mangaluru, Murudeshwar train cancel Kannada News

ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಹಾಸನ-ಮಂಗಳೂರು ನಡುವಿನ ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ಭೂ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದ ರೈಲುಗಳ ಸಂಚಾರ ಬಂದ್​​ ಆಗಿದೆ. ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಮಾಡುತ್ತಿದ್ದಾರೆ.

1 / 5
Hassan Landslide: Bengaluru-Mangaluru, Murudeshwar train cancel Kannada News

ಬೆಂಗಳೂರು-ಮಂಗಳೂರು ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಬೆಂಗಳೂರು-ಕಣ್ಣೂರು, ಬೆಂಗಳೂರು-ಮುರುಡೇಶ್ವರ ಮತ್ತು ಹಾಸನ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಸಂಚಾರವೂ ಬಂದ್​ ಮಾಡಲಾಗಿದೆ. ಆಲೂರು-ಹಾಸನ ಮಾರ್ಗದ ರೈಲು ಸಂಚಾರವೂ ಸ್ಥಗಿತಗೊಂಡಿದೆ.

2 / 5
Hassan Landslide: Bengaluru-Mangaluru, Murudeshwar train cancel Kannada News

ಸಕಲೇಶಪುರ, ಯಡಕುಮಾರಿ, ಶಿರಿಬಾಗಿಲು, ಆಲೂರು ಸೇರಿ ಒಟ್ಟು ಆರು ಕಡೆ ರೈಲು ಸಂಚಾರ ನಿಂತಿದೆ. ರೈಲುಗಳು ದಿಢೀರ್ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು. ಸಾವಿರಾರು ಪ್ರಯಾಣಿಕರು ಬೆಳಗಿನ ಜಾವದವರೆಗೆ ರೈಲಿನಲ್ಲೇ ಕಳೆದರು. ಬೆಳಗ್ಗೆ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ವಾಹನಗಳ ವ್ಯವಸ್ಥೆ ಮಾಡಿತು.

3 / 5
Hassan Landslide: Bengaluru-Mangaluru, Murudeshwar train cancel Kannada News

ರೈಲುಗಳ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲು ಬಿಟ್ಟು ಬಸ್​ಗಳತ್ತ ಮುಖ ಮಾಡಿದ್ದಾರೆ. ಬಸ್​​ನಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

4 / 5
Hassan Landslide: Bengaluru-Mangaluru, Murudeshwar train cancel Kannada News

ಸಕಲೇಶಪುರ ತಾಲೂಕಿನ ದೋಣಿಗಲ್‌, ಎಡಕುಮೇರಿ ನಡುವೆ ಭೂಕುಸಿತ ಸಂಭವಿಸಿತ್ತು. ಈ ಸಂದರ್ಭದಲ್ಲೂ ಬೆಂಗಳೂರು-ಮಂಗಳೂರು ಮಧ್ಯೆ ರೈಲು ಸಂಚಾರ ರದ್ದಾಗಿತ್ತು.

5 / 5

Published On - 10:06 am, Sat, 10 August 24

Follow Us
ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ
ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ