AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ರಂಗದಿಂದ ಸಿಎಂ ಗದ್ದುಗೆಗೆ ಏರಿದ ಸಾಧಕರು ಇವರು

Movie and Politics: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಇಂದು (ಮೇ 10) ತಮಿಳುನಾಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಜಕೀಯದಲ್ಲಿ ಹಲವಾರು ಸಿನಿಮಾ ಮಂದಿ ಇದ್ದಾರಾದರೂ ಚಿತ್ರರಂಗದಿಂದ ಹೋಗಿ ಸಿಎಂ ಆದವರ ಸಂಖ್ಯೆ ಕಡಿಮೆ. ಸಿನಿಮಾ ರಂಗದಿಂದ ಸಿಎಂ ಗದ್ದುಗೆಗೆ ಏರಿದ ಸಾಧಕರ ಪಟ್ಟಿ ಇಲ್ಲಿದೆ ನೋಡಿ....

ಮಂಜುನಾಥ ಸಿ.
|

Updated on:May 10, 2026 | 3:27 PM

Share
ಅಣ್ಣಾದೊರೈ ಸಿನಿಮಾ ಅನ್ನು ಬಳಸಿಕೊಂಡು ರಾಜಕೀಯ ಕ್ರಾಂತಿ ಮಾಡಿ, ಬಳಿಕ ತಮಿಳುನಾಡು ಸಿಎಂ ಆದ ಮೊದಲಿಗರು. 1949 ರಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟು ಹಲವು ಸಿನಿಮಾಗಳಿಗೆ ಕತೆ ಮತ್ತು ಚಿತ್ರಕತೆ ಬರೆದಿದ್ದರು. ಆ ಸಮಯದಲ್ಲಿಯೇ ಕ್ರಾಂತಿಕಾರಿ ಆಲೋಚನೆಗಳನ್ನು ಅವರು ಸಿನಿಮಾಗಳ ಮೂಲಕ ಹರಿಯ ಬಿಟ್ಟಿದ್ದರು. ಅದುವೇ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು ಮತ್ತು ಸಿಎಂ ಆಗುವಲ್ಲಿ ನೆರವು ನೀಡಿತು. 1969ರಲ್ಲಿ ಸಿಎಂ ಆದ ಇವರು ಸಿಎಂ ಸ್ಥಾನದಲ್ಲಿದ್ದಿದ್ದು ಕೇವಲ 20 ದಿನಗಳು ಮಾತ್ರ.

1 / 8
ಎಂ ಕರುಣಾನಿಧಿ ಸಹ ತಮಿಳು ಚಿತ್ರರಂಗದಿಂದಲೇ ಬಂದವರು. ಹಲವಾರು ಸಿನಿಮಾಗಳಿಗೆ ಕತೆ, ಚಿತ್ರಕತೆ, ಹಾಡುಗಳನ್ನು ಕರುಣಾನಿಧಿ ಬರೆದಿದ್ದಾರೆ. ಅಣ್ಣಾದೊರೈ ಅವರ ಬಳಿಕ ಸಿಎಂ ಆದ ಇವರು ಆರು ವರ್ಷಕ್ಕೂ ಹೆಚ್ಚು ಸಮಯ ಸಿಎಂ ಸ್ಥಾನದಲ್ಲಿದ್ದು ಮಾತ್ರವಲ್ಲದೆ ಆ ನಂತರವು ಕೆಲವು ಬಾರಿ ಸಿಎಂ ಆಗಿ ಆಡಳಿತ ನಡೆಸಿದರು.

2 / 8
ಎಂಜಿಆರ್ (ಎಂಜಿ ರಾಮಚಂದ್ರನ್) ಇವರು ಭಾರತದ ಮೊಟ್ಟ ಮೊದಲ ‘ಸೂಪರ್ ಸ್ಟಾರ್’ ಸಿಎಂ. ನಾಯಕ ನಟರಾಗಿ ಬಳಿಕ ಸಿಎಂ ಆದ ಮೊದಲಿಗರು ಎಂಜಿಆರ್. ಸಿನಿಮಾ ನಟರು ಸಿಎಂ ಆಗಬಹುದು ಎಂದು ತೋರಿಸಿಕೊಟ್ಟವರು ಇವರು. ಇವರ ಸ್ಪೂರ್ತಿಯಿಂದ ಆ ನಂತರದಲ್ಲಿ ಹಲವು ನಟರುಗಳು ರಾಜಕೀಯಕ್ಕೆ ಬಂದರು, ಸ್ವಂತ ಪಕ್ಷಗಳನ್ನು ಸಹ ಕಟ್ಟಿದರು. ಎಂಜಿಆರ್ ಅವರು ಎರಡು ಬಾರಿ ತಮಿಳುನಾಡಿನ ಸಿಎಂ ಆಗಿದ್ದರು.

3 / 8
ಎನ್​​ಟಿಆರ್ (ಎನ್​​ಟಿ ರಾಮಾರಾವ್) ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದ ರಾಮಾ ರಾವ್ ಅವರು ಅಖಂಡ ಆಂಧ್ರ ಪ್ರದೇಶದ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು. ಪಕ್ಷ ಕಟ್ಟಿದ ಕೆಲವೇ ತಿಂಗಳುಗಳಲ್ಲಿ ಸಿಎಂ ಆಗಿ ದಾಖಲೆ ಬರೆದವರು ಎನ್​​ಟಿ ರಾಮಾರಾವ್. ಎನ್​​ಟಿಆರ್ ಅವರು ಮೂರು ಬಾರಿ ಆಂಧ್ರ ಪ್ರದೇಶದ ಸಿಎಂ ಆದರು. ಇವರು ಕಟ್ಟಿದ ಪಕ್ಷವೇ ಈಗ ಆಂಧ್ರದಲ್ಲಿ ಅಧಿಕಾರದಲ್ಲಿದೆ.

4 / 8
ಎಂಜಿಆರ್ ಅವರ ಪತ್ನಿ ವಿಎನ್ ಜಾನಕಿ, ದಕ್ಷಿಣ ಭಾರತದ ಜನಪ್ರಿಯ ನಟಿ ಆಗಿದ್ದವರು. ಎಂಜಿಆರ್ ಅವರ ನಿಧನದ ಬಳಿಕ ವಿಎನ್ ಜಾನಕಿ ಅವರು ತಮಿಳುನಾಡಿನ ಸಿಎಂ ಆದರು. ಆದರೆ ಅವರು ಸಿಎಂ ಹುದ್ದೆಯಲ್ಲಿದ್ದಿದ್ದು ಕೇವಲ 23 ದಿನಗಳು ಮಾತ್ರ. ಜಾನಕಿ ಅವರು ಯಾವುದೇ ಚುನಾವಣೆ ಎದುರಿಸದೇ ಸಿಎಂ ಆಗಿದ್ದರು.

5 / 8
ಜೆ ಜಯಲಲಿತಾ, 1960 ರಿಂದ 1980 ರ ವರೆಗೆ ದಕ್ಷಿಣ ಭಾರತದಲ್ಲಿ ಖ್ಯಾತ ನಟಿಯಾಗಿ ಮೆರೆದವರು ಜಯಲಲಿತಾ. ಸೂಪರ್ ಸ್ಟಾರ್ ನಟರು ಮಾತ್ರವಲ್ಲ, ನಟಿಯರು ಸಹ ಪಕ್ಷ ಕಟ್ಟಿ ಚುನಾವಣೆ ಎದುರಿಸಿ ಸಿಎಂ ಆಗಬಹುದು ಎಂದು ತೋರಿಸಿಕೊಟ್ಟವರು ಜಯಲಲಿತಾ. ಐದು ಬಾರಿ ತಮಿಳುನಾಡಿನ ಸಿಎಂ ಆಗಿದ್ದರು ಜಯಲಲಿತಾ.

6 / 8
ಜೋಸೆಫ್ ವಿಜಯ್ ಅಲಿಯಾಸ್ ದಳಪತಿ ವಿಜಯ್ ಇದೀಗ ತಮಿಳುನಾಡಿನ ಹೊಸ ಸಿಎಂ ಆಗಿದ್ದಾರೆ. ಆ ಮೂಲಕ ಚಿತ್ರರಂಗದಿಂದ ಬಂದ ತಮಿಳುನಾಡು ಸಿಎಂ ಆದ ಐದನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇಂದಿನಿಂದ ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ಆರಂಭವಾಗಿದೆ.

7 / 8
ನಟ ಪವನ್ ಕಲ್ಯಾಣ್, ಈಗ ಸಿಎಂ ಅಲ್ಲ ಆದರೆ ಸಿಎಂ ಆಗುವ ಕನಸು ಕಾಣುತ್ತಿರುವ ಮತ್ತು ಸಿಎಂ ಆಗುವ ಅವಕಾಶವೂ ಇರುವ ಸೂಪರ್ ಸ್ಟಾರ್ ನಟ. ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶದ ಡಿಸಿಎಂ ಆಗಿದ್ದಾರೆ. ಮುಂದೊಂದು ದಿನ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.

8 / 8

Published On - 3:27 pm, Sun, 10 May 26

Follow Us
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು

ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​

ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!

ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ

ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ

ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ

ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು!

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾದ ವಿಜಯ್​​ಗೆ ಶುಭ ಕೋರಿದ ಪ್ರಧಾನಿ ಮೋದಿ

'ಉಚಿತ ವಿದ್ಯುತ್' ಯೋಜನೆಗೆ ಸಹಿ ಹಾಕಿದ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್