- Kannada News Photo gallery High tech touch for KC General Hospital What are the new facility bengaluru kannada news
ಕೆ.ಸಿ ಜನರೆಲ್ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ; ಹಳೇ ಆಸ್ಪತ್ರೆಯಲ್ಲಿ ಹೊಸ ಫೆಸಿಲಿಟಿ ಏನೇನು?
ಬೆಂಗಳೂರಿನ ಕೆ.ಸಿ ಜನರೆಲ್ ಆಸ್ಪತ್ರೆಯನ್ನ ಹೈಟೆಕ್ ಮಾಡೋಕೆ ಸರ್ಕಾರ ಪ್ಲಾನ್ ಮಾಡಿದ್ದು ನಿನ್ನೆ (ಆ.27) ಸಿಎಂ ಸಿದ್ದರಾಮಯ್ಯ ಹಾಗೂ ಹೆಲ್ತ್ ಮಿನಿಸ್ಟರ್ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ರು. ಮಲ್ಲೇಶ್ವರಂನಲ್ಲಿರುವ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗುತ್ತೆ.
Updated on: Aug 28, 2024 | 9:00 AM

ಬೆಂಗಳೂರಿನ ಕೆ.ಸಿ ಜನರೆಲ್ ಆಸ್ಪತ್ರೆಯನ್ನ ಹೈಟೆಕ್ ಮಾಡೋಕೆ ಸರ್ಕಾರ ಪ್ಲಾನ್ ಮಾಡಿದೆ. ಈ ಹಿನ್ನಲೆ ನಿನ್ನೆ (ಆ.27) ಸಿಎಂ ಸಿದ್ದರಾಮಯ್ಯ ಹಾಗೂ ಹೆಲ್ತ್ ಮಿನಿಸ್ಟರ್ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ರು.

ಮಲ್ಲೇಶ್ವರಂನಲ್ಲಿರುವ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗುತ್ತೆ. ಜೊತೆಗೆ ಭೋಧನಾ ಕಟ್ಟಡ, ಶವಗಾರ ಕಟ್ಟಡ, ಹೈಟೆಕ್ ಕಿಚನ್, ಲಾಂಡ್ರಿ, ವೈದ್ಯಕೀಯ ಘನ ತ್ಯಾಜ ಕಟ್ಟಡ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿದ್ರು.

ಪ್ರಮುಖವಾದ ವಿಚಾರ ಏನಂದ್ರೆ, ಈ ಹೈಟೆಕ್ ಸೌಲಭ್ಯಗಳಿಂದ ಬೆಂಗಳೂರಿನ ಅನೇಕ ಏರಿಯಾಗಳಿಗೆ ನೆರವಾಗಲಿದೆ. ರಾಜಾಜಿನಗರ, ಮಲ್ಲೇಶ್ವರಂ, ಗಾಂಧಿನಗರ, ಯಶವಂತಪುರ, ಮತ್ತಿಕೆರೆ, ನಂದಿನಿ ಲೇಔಟ್ ಹಾಗೂ ಗೋವಿಂದರಾಜನಗರ ಜನ್ರಿಗೆ ಸಹಾಯ ಆಗಲಿದೆ.

ಇನ್ನು, ಸುಮಾರು 150 ಕೋಟಿ ಮೊತ್ತದ ಅಂದಾಜಿನ ಕಾಮಗಾರಿಗೆ ಚಾಲನೆ ನೀಡಲಾಯ್ತು ಅನ್ನೋ ಮಾಹಿತಿ ಇದೆ. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಮೂರು ಕಡೆಗಳಲ್ಲಿ ಅಂದ್ರೆ ಹೊಸಕೋಟೆ, ನೆಲಮಂಗಲ, ಆನೇಕಲ್ನಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಮಾಡೋದಾಗಿ ಭರವಸೆ ಕೊಟ್ಟಿದ್ದಾರೆ.

ಅದೇನೆ ಹೇಳಿ , ಹೊಸ ಮನೆ ಕಟ್ಟಿ ಇಎಂಐ ಕಟ್ಟೋಕಿಂತ ಹಳೇ ಮನೆ ಆಲ್ಟ್ರೇಷನ್ಯೇ ಬೆಟರ್ ಅಂತಾ ಹಳೇ ಆಸ್ಪತ್ರೆಯನ್ನೇ ಹೈಟೆಕ್ ಮಾಡೋದಕ್ಕೆ ಸರ್ಕಾರ ಏನೋ ಪ್ಲಾನ್ ಮಾಡಿದೆ. ಆದ್ರೇ ಇದು ಯಾವಾಗ ಓಪನ್ ಆಗುತ್ತೆ ಕಾದು ನೋಡ್ಬೇಕಿದೆ.



