Kannada News Photo gallery I also fight with Yash but how you solve the problem that is important says Radhika Pandit
‘ಯಶ್ ಜೊತೆ ಜಗಳ ಆಗುತ್ತಾ?’; ಮುಚ್ಚುಮರೆ ಇಲ್ಲದೆ ಉತ್ತರಿಸಿದ ರಾಧಿಕಾ ಪಂಡಿತ್
ಯಶ್ ಹಾಗೂ ರಾಧಿಕಾ ಓಪನ್ ಆಗಿ ಯಾವಾಗಲೂ ಕಿತ್ತಾಡಿಕೊಂಡಿಲ್ಲ, ಫೈಟ್ ಮಾಡಿಲ್ಲ. ಹಾಗಂತ ಇವರ ಮಧ್ಯೆ ಕಿತ್ತಾಟ ನಡೆಯುವದೇ ಇಲ್ಲ ಎಂದಲ್ಲ. ಎಲ್ಲಾ ಸಂಸಾರಗಳಲ್ಲಿ ಇರುವಂತೆ ಇವರ ಮನೆಯಲ್ಲೂ ಜಗಳ ಆಗುತ್ತದೆ. ಈ ಬಗ್ಗೆ ರಾಧಿಕಾ ಮಾತನಾಡಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರ ಅಭಿಮಾನಿ ಬಳಗ ದೊಡ್ಡದು. ಅವರು ನಟನೆಯಿಂದ ದೂರ ಇದ್ದಾರೆ. ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ರಾಧಿಕಾ ಹಾಗೂ ಯಶ್ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಇದರ ಹಿಂದಿನ ರಹಸ್ಯವನ್ನು ಅವರು ನೀಡಿದ್ದಾರೆ.
1 / 6
ಯಶ್ ಹಾಗೂ ರಾಧಿಕಾ ಓಪನ್ ಆಗಿ ಯಾವಾಗಲೂ ಕಿತ್ತಾಡಿಕೊಂಡಿಲ್ಲ, ಫೈಟ್ ಮಾಡಿಲ್ಲ. ಹಾಗಂತ ಇವರ ಮಧ್ಯೆ ಕಿತ್ತಾಟ ನಡೆಯುವದೇ ಇಲ್ಲ ಎಂದಲ್ಲ. ಎಲ್ಲಾ ಸಂಸಾರಗಳಲ್ಲಿ ಇರುವಂತೆ ಇವರ ಮನೆಯಲ್ಲೂ ಜಗಳ ಆಗುತ್ತದೆ.
2 / 6
ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ‘Ask Me Anything’ ಸೆಷನ್ ನಡೆಸಿದ್ದರು. ಈ ವೇಳೆ ಅವರಿಗೆ ಸಂಸಾರದ ಬಗ್ಗೆ ಪ್ರಶ್ನೆ ಎದುರಾಗಿದೆ. ‘10 ವರ್ಷಗಳಿಂದ ಫೈಟ್ ಜಗಳವೇ ಆಡದೇ ಹೇಗೆ ಸಂಸಾರ ನಡೆಸುತ್ತಿದ್ದೀರಿ? ನಮಗೂ ಟಿಪ್ಸ್ ಕೊಡಿ’ ಎಂದು ರಾಧಿಕಾಗೆ ಫ್ಯಾನ್ಸ್ ಕೇಳಿದ್ದಾರೆ.
3 / 6
‘ನಾವೂ ಜಗಳ ಹಾಗೂ ವಾದಗಳನ್ನು ಮಾಡುತ್ತೇವೆ. ಎಲ್ಲಾ ಸಂಬಂಧಗಳಲ್ಲೂ ಅದು ಸಾಮಾನ್ಯ. ಜಗಳ ಆಗುತ್ತದೆ ಅನ್ನೋದು ಮುಖ್ಯವಲ್ಲ, ಅದನ್ನು ಹೇಗೆ ಸರಿಪಡಿಸಿಕೊಳ್ಳುತ್ತೀರಿ ಅನ್ನೋದು ಮುಖ್ಯ. ಇದರಿಂದ ಸಂಬಂಧ ಮತ್ತಷ್ಟು ಗಟ್ಟಿ ಆಗುತ್ತದೆ’ ಎಂದಿದ್ದಾರೆ ರಾಧಿಕಾ.
4 / 6
‘ಪತಿ-ಪತ್ನಿ ಸಂಬಂಧ ಗಟ್ಟಿ ಇರಲು ಯಾವುದು ಮುಖ್ಯ’ ಎಂದು ಕೆಲವರು ಕೇಳಿದ್ದಾರೆ. ಇದಕ್ಕೆ ರಾಧಿಕಾ ಪಂಡಿತ್ ಅವರು ‘ಗೆಳೆತನ’ ಎಂದು ಉತ್ತರಿಸಿದ್ದಾರೆ.
5 / 6
ರಾಧಿಕಾ ಪಂಡಿತ್ ಹಾಗೂ ಯಶ್ 2016ರ ಡಿಸೆಂಬರ್ 9ರಂದು ಮದುವೆ ಆದರು. ಈ ದಂಪತಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಆಯ್ರಾ ಹಾಗೂ ಯಥರ್ವ್ ಹೆಸರಿನ ಮಕ್ಕಳಿದ್ದಾರೆ.