Updated on: Apr 14, 2023 | 11:39 AM
ಸಲ್ಮಾನ್ ಖಾನ್ ಜೊತೆ ಸಾಕಷ್ಟು ನಟಿಯರು ಹೆಸರು ತಳುಕು ಹಾಕಿಕೊಂಡಿದೆ. ಅನೇಕ ಹೀರೋಯಿನ್ಗಳ ಜೊತೆ ಅವರು ಡೇಟ್ ಮಾಡಿದ್ದಾರೆ. ಆದರೆ, ಯಾರ ಜೊತೆಯೂ ಅವರು ಮದುವೆ ಆಗಿಲ್ಲ. ಇದಕ್ಕೆ ಕಾರಣ ನಿಗೂಢ. ಈಗ ಪೂಜಾ ಹೆಗ್ಡೆ ಸರದಿ.
ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಸಿನಿಮಾದಲ್ಲಿ ಇವರ ಕೆಮಿಸ್ಟ್ರಿ ಕೆಲಸ ಮಾಡುವ ಸೂಚನೆ ಸಿಕ್ಕಿದೆ.
ಈ ಮಧ್ಯೆ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಪೂಜಾ ಹೆಗ್ಡೆ ಸಹೋದರನ ಮದುವೆಯಲ್ಲಿ ಭಾಗಿ ಆಗಿದ್ದರು. ಇದು ಸಾಕಷ್ಟು ಅನುಮಾನ ಹುಟ್ಟುಹಾಕಿತ್ತು.
ಆದರೆ, ಈ ವಿಚಾರವನ್ನು ಪೂಜಾ ಹೆಗ್ಡೆ ತಳ್ಳಿ ಹಾಕಿದ್ದಾರೆ. ‘ನಾನು ಸಿಂಗಲ್. ನನ್ನ ಕರಿಯರ್ ಮೇಲೆ ಸಂಪೂರ್ಣ ಗಮನ ಹರಿಸುತ್ತಿದ್ದೇನೆ’ ಎಂದಿದ್ದಾರೆ ಪೂಜಾ.
ಪೂಜಾ ಹೆಗ್ಡೆ ಸಾಲು ಸಾಲು ಸೋಲು ಕಂಡಿದ್ದಾರೆ. ಹೀಗಾಗಿ ಅವರಿಗೆ ಒಂದು ಗೆಲುವಿನ ಅವಶ್ಯಕತೆ ಇದೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.