ಮಹಿಳಾ ಪರೀಕ್ಷಾರ್ಥಿಗಳ ಮೂಗುಬೊಟ್ಟಿಗೆ ಬಂತು ಕುತ್ತು; ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ಹಿಂದು ವಿರೋಧಿ ನೀತಿ
ಇಂದು(ಭಾನುವಾರ) ನಡೆದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ಹಿಂದು ವಿರೋಧಿ ನೀತಿ ಬೆಳಕಿಗೆ ಬಂದಿದೆ. ಹೌದು, ಮಹಿಳಾ ಪರೀಕ್ಷಾರ್ಥಿಗಳ ಮೂಗುಬೊಟ್ಟನ್ನು ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷಾ ಸಿಬ್ಬಂದಿ ಬಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ 57 ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆಯುತ್ತಿದ್ದು, ಅದರಲ್ಲಿ ಬಾಗಲಕೋಟೆ ಬಿವಿವಿ ಸಂಘದ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಕೆಲವರ ಮೂಗು ಬೊಟ್ಟು ತೆಗೆಸಿದರೆ, ಮೂಗುಬೊಟ್ಟು ತೆಗೆಯಲು ಬಾರದವರಿಗೆ ಬಿಳಿ ಕಾಗದ ಪಟ್ಟಿ ಅಂಟಿಸಿ ಕಳಿಸಲಾಗಿದೆ.

1 / 6

2 / 6

3 / 6

4 / 6

5 / 6

6 / 6




