- Kannada News Photo gallery In the color of the day yellow on first day of Navaratri here is the traditional outfits samples of Bollywood actresses
Durga Puja: ನವರಾತ್ರಿಯ ಮೊದಲ ದಿನ ಹಳದಿ ಬಣ್ಣ ಶ್ರೇಷ್ಠ; ಈ ವಿಶೇಷ ಶೈಲಿಯ ದಿರಿಸುಗಳನ್ನು ನೀವು ಧರಿಸಬಹುದು
Navratri Colours: ಕೆಲವು ನಂಬಿಕೆಗಳ ಪ್ರಕಾರ, ನವರಾತ್ರಿಯಲ್ಲಿ ಒಂದೊಂದು ದಿನಕ್ಕೆ ಒಂದೊಂದು ಬಣ್ಣ ಶುಭವಂತೆ. ಅದರ ಪ್ರಕಾರ ದಿರಿಸನ್ನು ಧರಿಸಿ ಸಂಭ್ರಮಿಸುವುದು ಹಬ್ಬದ ಸಡಗರವನ್ನು ಹೆಚ್ಚಿಸುತ್ತದೆ ಎನ್ನುವುದು ನಂಬಿಕೆ. ಅದರಂತೆ ಮೊದಲ ದಿನವಾದ ಹಳದಿ (ಅರಿಶಿಣ) ಬಣ್ಣ ಶುಭದಾಯಕ. ಆ ಬಣ್ಣದಲ್ಲಿ ವೈವಿಧ್ಯಮಯ ದಿರಿಸನ್ನು ಧರಿಸಿರುವ ಬಾಲಿವುಡ್ ತಾರೆಯರ ಚಿತ್ರಗಳು ಇಲ್ಲಿವೆ. ಈ ಮೂಲಕ ನೀವು ಕೂಡ ನಿಮ್ಮ ಆಸಕ್ತಿಯ ದಿರಿಸನ್ನು ಧರಿಸಿ ಸಂಭ್ರಮವನ್ನು ಆಚರಿಸಬಹುದು.
Updated on: Oct 07, 2021 | 2:51 PM
Share

ಅರಿಶಿಣ ಬಣ್ಣವು ಸಂತೋಷದ ಸಂಕೇತ. ಈ ಹಿನ್ನೆಲೆಯಲ್ಲಿ ದೀಪಿಕಾ ಧರಿಸಿರುವ ಈ ಮಾದರಿಯ ಸೀರೆ ನಿಮ್ಮ ಹಬ್ಬದ ಸಡಗರ ಹೆಚ್ಚಿಸಬಹುದು.

ಕೃತಿ ಸನೋನ್ ಧರಿಸಿರುವ ಸಾಂಪ್ರದಾಯಿಕ, ಆಧುನಿಕತೆಯ ಮಿಶ್ರಣದಂತಿರುವ ಅನಾರ್ಕಲಿ ಉಡುಪು ಹಬ್ಬದ ಸಂತಸವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ದಸರಾದ ಸಂದರ್ಭದಲ್ಲಿ ಕರೀನಾ ಕಪೂರ್ ಧರಿಸಿರುವ ಈ ಮಾದರಿಯ ಸೀರೆಯೂ ವಿಶೇಷವಾಗಿ ಹೊಂದುತ್ತದೆ.

ಜಾಹ್ನವಿ ಕಪೂರ್ ಮಾದರಿಯಲ್ಲಿ ಸಾಂಪ್ರದಾಯಿಕ ಸೀರೆ ತೊಡುವುದರ ಮೂಲಕ ಕೂಡ ಹಬ್ಬದ ಸಂಭ್ರಮವನ್ನು ಅತ್ಯಂತ ಸಂತಸದಿಂದ ಆಚರಿಸಬಹುದು.

ಆಲಿಯಾ ಭಟ್ ಧರಿಸಿರುವ ಅನಾರ್ಕಲಿ ಮಾದರಿಯ ಕುರ್ತಾ ಹಬ್ಬದ ಮೊದಲ ದಿನದ ಸಂಭ್ರಮ ಹೆಚ್ಚಿಸುವಲ್ಲಿ ಜೊತೆಯಾಗಬಹುದು.

ತಾರಾ ಸುತಾರಿಯಾ ಧರಿಸಿರುವ ಈ ಮಾದರಿಯ ಲೆಹಂಗಾ ನಿಮ್ಮ ಹಬ್ಬದ ಸಂತೋಷಕ್ಕೆ ಜೊತೆಯಾಗಬಹುದು.

ಖುಷಿ ಕಪೂರ್ ಧರಿಸಿರುವ ಈ ಹಳದಿ ಬಣ್ಣದ ಲೆಹಂಗಾ, ಹಬ್ಬಕ್ಕೆ ಉತ್ತಮ ಆಯ್ಕೆಯಾಗಬಲ್ಲದು.
Related Photo Gallery
ನಿಮ್ಮಿಂದ ನಮಗೆ ಎಲ್ಲಾ ಕಡೆ ನೋವಾಗ್ತಿದೆ ಎಂದ ಸುದೀಪ್
ಶ್ವಾನಕ್ಕೆ ಮಡಿಲು ತುಂಬಿ ಅದ್ಧೂರಿ ಸೀಮಂತ!
ಯೆಲ್ಲೋ ಮಾರ್ಗದಲ್ಲಿ ಭಾನುವಾರ ರೈಲು ಸಂಚಾರ ಶುರುವಾಗೋದು ಲೇಟ್
ಚೈತ್ರಾ ಪತಿಯಿಂದಲೂ ಕಿರುಕುಳ ಉಂಟಾಗಿದೆ; ತಂದೆಯ ಆರೋಪ
Video: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಓಡಿದ ಆರೋಪಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು




