- Kannada News Photo gallery Exploring the Hauntings of the Aleya Ghost Lights in West Bengal Kannada News
ಭಾರತದ ಈ ಸ್ಥಳಗಳಲ್ಲಿ ದೀಪಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತೆ ಆತ್ಮಗಳು, ಎಲ್ಲಿ ಗೊತ್ತಾ?
ಈ ಜಗತ್ತಿನಲ್ಲಿ ಕೆಲವೊಮ್ಮೆ ನಂಬಲು ಸಾಧ್ಯವಾಗದ ಘಟನೆಗಳು ನಡೆಯುತ್ತವೆ. ಈ ವಿಸ್ಮಯಕಾರಿ ಘಟನೆಗಳ ರಹಸ್ಯಗಳನ್ನು ಬೇಧಿಸಲು ಹೊರಟರೆ ಪ್ರಶ್ನೆಗಳೇ ಹೊರತು ಉತ್ತರವಿಲ್ಲ. ಇಂತಹ ಒಂದು ರಹಸ್ಯಗಳಲ್ಲಿ ಪಶ್ಚಿಮ ಬಂಗಾಳದ ಈ ಪ್ರದೇಶದಲ್ಲಿ ಮಧ್ಯೆ ರಾತ್ರಿಯಂದು ಅಸ್ವಾಭವಿಕವಾಗಿ ಕಾಣಿಸಿಕೊಳ್ಳುವ ಹೊಳೆಯುವ ದೀಪಗಳು ಒಂದು. ಹಾಗಾದ್ರೆ ಏನಿದು ಹೊಳೆಯುವ ದೀಪ ಅಥವಾ ಅಲೈಯಾ ಲೈಟ್ಸ್ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on: Jul 03, 2024 | 5:03 PM

ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಔಗು ಪ್ರದೇಶಗಳು ನಿಗೂಢ ಹಾಗೂ ಭಯಾನಕತೆಯಿಂದ ಕೂಡಿದ ಸ್ಥಳವಾಗಿದೆ. ಇಲ್ಲಿ ರಾತ್ರಿಯ ವೇಳೆ ಹೊಳೆಯುವ ದೀಪಗಳು ಕಾಣಿಸಿಕೊಳ್ಳುತ್ತವೆಯಂತೆ. ಇದನ್ನು ಅಲೈಯಾ ಲೈಟ್ಸ್" ಎಂದು ಕರೆಯುತ್ತಾರೆ.

ಕತ್ತಲಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಈ ದೀಪಗಳು ಕಪ್ಪು, ನೀಲಿ, ಕೆಂಪು ಮತ್ತು ಹಳದಿ ಬಣ್ಣಕ್ಕೆ ಬದಲಾಗುತ್ತಿರುತ್ತದೆ. ದೂರದಿಂದ ನೋಡುವುದಕ್ಕೆ ಸೇಬಿನ ಹಣ್ಣಿನ ಆಕಾರದಲ್ಲಿದ್ದು ಚಲಿಸುವಂತೆ ತೋರುತ್ತವೆ.

ಇದು ದೆವ್ವದ ದೀಪಗಳಂತೆ. ಇದನ್ನು ಹಿಂಬಾಲಿಸಿಕೊಂಡು ಹೊರಟರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಈ ದೀಪಗಳ ಹಿಂದೆ ಹೊರಟ ಅನೇಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಸ್ಥಳೀಯರು ಹೇಳುವಂತೆ ರಾತ್ರಿಯ ವೇಳೆ ಪ್ರಕಾಶಮಾನವಾಗಿ ಕಾಣಿಸುವ ಈ ದೀಪಗಳು ಪ್ರೇತಾತ್ಮಗಳು ಎನ್ನಲಾಗಿದೆ. ಸತ್ತ ಮೀನುಗಾರರು ಹಾಗೂ ಈ ದೀಪಗಳ ಬಗ್ಗೆ ತಿಳಿಯಲು ಹೊರಟವರು ಸಾವನ್ನಪ್ಪಿದ್ದು, ದೀಪಗಳ ರೂಪದಲ್ಲಿ ಸಂಚರಿಸುತ್ತಿದ್ದಾರಂತೆ

ಕತ್ತಲ ರಾತ್ರಿಯಲ್ಲಿ ಆಕರ್ಷಕವಾಗಿ ಕಾಣಿಸುವ ಈ ದೀಪಗಳು ಕೆಲವೊಮ್ಮೆ ವೇಗವಾಗಿ, ಮಗದೊಮ್ಮೆ ನಿಧಾನವಾಗಿ ಚಲಿಸುತ್ತದೆ. ಏನಿರಬಹುದು ಎಂದು ಇದನ್ನು ಹಿಂಬಾಲಿಸಿಕೊಂಡು ಹೊರಟವರ ದಾರಿಯನ್ನು ಈ ಆತ್ಮಗಳು ತಪ್ಪಿಸುತ್ತವೆಯಂತೆ ಎನ್ನಲಾಗಿದೆ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ
Read More




